ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಅಮೇರಿಕಾ ಮೂಲದ ಫೋರ್ಡ್ ಮೋಟಾರ್ಸ್, ಇಂಟರ್ನ್ಯಾಷನಲ್ ಮಾರ್ಕೆಟ್ಸ್ ಗ್ರೂಪ್ (ಐಎಂಜಿ) ರಚಿಸಿದೆ. ಈ ಗ್ರೂಪ್ ಅನ್ನು ಅಭಿವೃದ್ಧಿ ಹೊಂದುತ್ತಿರುವ ವಿಶ್ವದ 100 ಮಾರುಕಟ್ಟೆಗಳಿಗಾಗಿ ರಚಿಸಲಾಗಿದೆ. ಐಎಂಜಿ ಘಟಕವು 2020ರ ಜನವರಿಯಿಂದ ಕಾರ್ಯನಿರ್ವಹಿಸಲಿದ್ದು, ಮಹೀಂದ್ರಾ ಅಲಾಯನ್ಸ್ ಬೆಂಬಲ ಹೊಂದಿರುವ ಫೋರ್ಡ್ ಇಂಡಿಯಾ ಪ್ರಮುಖ ಪಾತ್ರ ವಹಿಸಲಿದೆ ಎಂದು ಫೋರ್ಡ್ ಕಂಪನಿ ತಿಳಿಸಿದೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಫೋರ್ಡ್ ಇಂಡಿಯಾದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ಅವರಿಗೆ ಮಹೀಂದ್ರಾ ಅಲಾಯನ್ಸ್ ನೊಂದಿಗೆ ಪ್ರಾಡಕ್ಟ್ ಪೋರ್ಟ್‍‍ಫೋಲಿಯೇ ಮ್ಯಾನೇಜ್‍‍ಮೆಂಟಿನ 18 ಮಿಲಿಯನ್ ಯುನಿಟ್ ವಾರ್ಷಿಕ ಮಾರುಕಟ್ಟೆಯನ್ನು ಪೂರೈಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಫೋರ್ಡ್ ಇಂಡಿಯಾದ ವಕ್ತಾರರು ಐಎಂಜಿ ರಚನೆಯನ್ನು ಖಚಿತಪಡಿಸಿದ್ದು, ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ದೃಢಪಡಿಸಿದ್ದಾರೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ವಾಹನಗಳ ಆರ್ಕಿಟೆಕ್ಚರ್ ಹಾಗೂ ಎಂಜಿನ್‌ಗಳ ಹಂಚಿಕೆಯನ್ನು ಈಗಾಗಲೇ ಘೋಷಿಸಲಾಗಿದೆ. ಭಾರತವನ್ನು ಮೀರಿ ಆರ್ಥಿಕತೆಯ ಮಟ್ಟವನ್ನು ನಿರ್ಮಿಸಲು ಹಾಗೂ ಭಾರತದ ಹೊರಗಿನ ಮುಂದಿನ ಬೆಳವಣಿಗೆ ಅವಕಾಶಗಳಲ್ಲಿ ಭಾಗವಹಿಸುವುದನ್ನು ಮೂಲಗಳು ದೃಢಪಡಿಸಿವೆ. ಫೋರ್ಡ್ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿದ್ದರೂ ವಾರ್ಷಿಕ 1.2 ಲಕ್ಷ ಯೂನಿಟ್‌ಗಳನ್ನು ಮೀರಿದ ಪರಿಮಾಣ ಮಾರಾಟವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಮಹೀಂದ್ರಾ ಪ್ರಯಾಣಿಕರ ವಾಹನ ವಿಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ 2.5 ಲಕ್ಷ ಹಾಗೂ 3 ಲಕ್ಷ ಯೂನಿಟ್‌ಗಳಷ್ಟು ಕಡಿಮೆ ಮಾರಾಟವಾಗಿದೆ. ರಫ್ತು ಮಾರುಕಟ್ಟೆಗಳು ಮಹೀಂದ್ರಾ ಕಂಪನಿಗೆ ಸಬ್ ಆಪ್ಟಿಮಲ್ ಆಗಿ ಉಳಿದಿದ್ದು, ಒಟ್ಟು ಮಾರಾಟವು ಸುಮಾರು 5 ರಿಂದ 7%ನಷ್ಟಿದೆ. ಈಗಾಗಲೇ ಅಭಿವೃದ್ದಿಗೊಂಡಿರುವ ಯುರೋಪ್ ಹಾಗೂ ಉತ್ತರ ಅಮೆರಿಕದ ಮಾರುಕಟ್ಟೆಗಳಲ್ಲಿರುವ ಹೊಸ ನಿಯಮಗಳಿಂದಾಗಿ ಫೋರ್ಡ್ ಹಾಗೂ ಮಹೀಂದ್ರಾ ಕಂಪನಿಗಳು ರಫ್ತಿನ ಬಗ್ಗೆ ಗಮನ ಹರಿಸಿ ಅಭಿವೃದ್ದಿ ಹೊಂದುತ್ತಿರುವ ಮಾರುಕಟ್ಟೆಗಳಿಗೆ ಬದಲಾಯಿಸುವ ಸಾಧ್ಯತೆಯಿದೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಅನಾಮಧೇಯ ಮೂಲಗಳ ಪ್ರಕಾರ ಐಎಂಜಿಯ ರಚನೆಯು ಮಹೀಂದ್ರಾ ಕಂಪನಿಯ ಜಾಗತೀಕ ಮಾರುಕಟ್ಟೆಗಳ ಕಾರ್ಯತಂತ್ರವನ್ನು ವೇಗಗೊಳಿಸಲಿದ್ದು, ಮಹೀಂದ್ರಾ ಅಲಾಯನ್ಸ್ ನೇತೃತ್ವದಲ್ಲಿ, ಬಿ ಹಾಗೂ ಸಿ ಸೆಗ್‍‍ಮೆಂಟಿನ ಎಸ್‌ಯುವಿಗಳು ಹಾಗೂ ಎಂಪಿವಿಗಳ ಜಂಟಿ ಯೋಜನೆಗಳಿಂದಾಗಿ, ಮಹೀಂದ್ರಾ ಕಂಪನಿಯ ವೆಚ್ಚದ ಸೋರ್ಸಿಂಗ್ ಸಾಮರ್ಥ್ಯದಿಂದಾಗಿ ಫೋರ್ಡ್ ಉತ್ಪನ್ನಗಳು ಅಭಿವೃದ್ಧಿ ವೆಚ್ಚವನ್ನು ಉತ್ತಮಗೊಳಿಸಲು ಸಹಾಯ ಮಾಡಲಿವೆ ಎಂದು ಹೇಳಿದರು.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದರ ಜೊತೆಗೆ ಫೋರ್ಡ್ ದೇಶಿಯ ಮಾರುಕಟ್ಟೆಗಾಗಿ ಒಂದು ಬಿಲಿಯನ್ ಅಮೇರಿಕನ್ ಡಾಲರ್‍‍ಗಳನ್ನು ಮೀಸಲಾಗಿರಿಸಿದೆ. ಏಕೆಂದರೆ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ಶುರುಮಾಡಿದ ಇಪ್ಪತ್ತು ವರ್ಷಗಳ ನಂತರ ಸುಸ್ಥಿರ ಲಾಭವನ್ನು ಗಳಿಸಿದೆ. ಫೋರ್ಡ್ ಕಂಪನಿಯ ಮಿಡ್ಲ್ ಈಸ್ಟ್ ಹಾಗೂ ಆಫ್ರಿಕಾಗಳ ಅಧ್ಯಕ್ಷರಾಗಿದ್ದ ಮಾರ್ಕ್ ಒವೆಂಡೆನ್ ಅವರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಗುಂಪಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಐಎಂಜಿ 2020 ರಿಂದ ವರದಿ ಮಾಡುವ ವ್ಯವಹಾರ ಘಟಕವಾಗಲಿದೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಕಂಪನಿಯ ಹೊಸ ಐಎಂಜಿ ಘಟಕವು ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಮೆಕ್ಸಿಕೊ, ಮಧ್ಯಪ್ರಾಚ್ಯ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಹಾಗೂ ಆಸಿಯಾನ್ ದೇಶಗಳಲ್ಲಿನ ಕಾರ್ಯಾಚರಣೆಗಳು ಸೇರಿದಂತೆ ಸುಮಾರು 100 ಮಾರುಕಟ್ಟೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದೆ. ಫೋರ್ಡ್ ಗ್ಲೋಬಲ್, ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಲಿರುವ ಮಾರುಕಟ್ಟೆಯಲ್ಲಿನ ಮೂರು ವಾಹನಗಳ ಮಾರಾಟದಲ್ಲಿ ಒಂದು ವಾಹನವು ಫೋರ್ಡ್ ಕಂಪನಿಯದ್ದಾಗಿರಲಿದ್ದು, ಹೆಚ್ಚಿನ ಪ್ರಮಾಣದ ಬೆಳವಣಿಗೆಯ ದರಗಳಿಗೆ ಸಾಕ್ಷಿಯಾಗಲಿದೆ ಎಂಬ ನಂಬಿಕೆಯಲ್ಲಿದೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಐಎಂಜಿಯ ರಚನೆಯು ಕಾಂಪ್ಯಾಕ್ಟ್ ಪಿಕ್ ಅಪ್ ಹಾಗೂ ಕಮರ್ಷಿಯಲ್ ವಾಹನಗಳಲ್ಲಿನ ಫೋರ್ಡ್‍‍ನ ಪ್ರಮುಖ ಮಾರುಕಟ್ಟೆ ಸ್ಥಾನಗಳ ಮೇಲೆ ಆಧಾರಿತವಾಗಲಿದೆ ಎಂದು ಹೇಳಲಾಗುತ್ತದೆ. ಐಎಂಜಿ ಘಟಕವು ಕಂಪನಿಯ ಆಮದು ಬಂಡವಾಳವನ್ನು ಉತ್ತಮಗೊಳಿಸಲಿದ್ದು, ಮಾರಾಟದ ನಂತರದ ಅವಕಾಶಗಳನ್ನು ಹೆಚ್ಚಿಸಲಿದೆ.

ವಿಶ್ವ ಮಾರುಕಟ್ಟೆಗೆ ಕಾಲಿಡಲಿವೆ ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಯಾವಾಗಲೂ ಆಟೋಮೋಟಿವ್ ವ್ಯವಹಾರಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಇಂಟರ್ ನ್ಯಾಷನಲ್ ಮಾರ್ಕೆಟ್ಸ್ ಗ್ರೂಪ್ ರಚನೆಯೊಂದಿಗೆ, ಕಂಪನಿಯು ಹೊಸ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಲಿದ್ದು, ಅಲ್ಲಿನ ವ್ಯವಹಾರಗಳಲ್ಲಿ ಸರ್ಕಾರವು ಹೆಚ್ಚಿನ ಹಸ್ತಕ್ಷೇಪ ನಡೆಸುವುದಿಲ್ಲ.

Most Read Articles

Kannada
Read more on ಫೋರ್ಡ್ ford
English summary
Ford India, Mahindra To Oversee International Markets Group — Cater For 100 Emerging Markets - Read in kannada
Story first published: Wednesday, July 17, 2019, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X