ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ದೇಶದಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹೊಸ ಹೊಸ ಯೋಜನೆ ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾದಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಸಹ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಒಂದಾಗುತ್ತಿವೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ಹೌದು, ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸುತ್ತಿವೆ. ಈ ಹಿಂದೆ ಫೋರ್ಡ್ ಸಂಸ್ಥೆಗಾಗಿ ಹೊಸ ಪೆಟ್ರೋಲ್ ಎಂಜಿನ್ ಸಿದ್ದಗೊಳಿಸುವುದಾಗಿ ಹೇಳಿದ್ದ ಮಹೀಂದ್ರಾ ಇದೀಗ ಕಾರು ಮಾರಾಟಕ್ಕೂ ಒಪ್ಪಿಗೆ ಸೂಚಿಸಿರುವುದಲ್ಲದೇ ಹೊಸ ಕಾರಿನ ಬಗ್ಗೆ ಕೆಲವು ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ.

ಸದ್ಯ ಮಹೀಂದ್ರಾ ಸಂಸ್ಥೆಯು ಹೊಸ ಕಾರುಗಳ ಉತ್ಪಾದನೆಗಾಗಿ ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಸಂಸ್ಥೆಯೊಂದಿಗೂ ಒಪ್ಪಂದ ಮಾಡಿಕೊಂಡಿದ್ದು, ಜಂಟಿಯಾಗಿ ಅಲ್ಟುರಾಸ್ ಜಿ4 ಮತ್ತು ಎಕ್ಸ್‌ಯುವಿ300 ಕಾರುಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಫೋರ್ಡ್‌ನೊಂದಿಗೂ ಕೂಡಾ ಕೆಲವು ಹೊಸ ಕಾರುಗಳನ್ನು ಸಿದ್ದಪಡಿಸಲಿವೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ದೇಶಿಯ ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಮಾದರಿಯ ಪೆಟ್ರೋಲ್ ಎಂಜಿನ್‌ಗಳನ್ನು ಅಭಿವೃದ್ದಿಪಡಿಸಲಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಸಂಸ್ಥೆಯ ಕಾರುಗಳ ಮಾರಾಟಕ್ಕೆ ಸಹಕರಿಸಲಿದ್ದು, ಈ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಕೆಯ ನೀರಿಕ್ಷೆಯಲ್ಲಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಫೋರ್ಡ್ ಸಂಸ್ಥೆಯು ಗುಣಮಟ್ಟದ ಕಾರುಗಳನ್ನು ಹೊಂದಿದ್ದರು ಸಹ ಉತ್ತಮ ಮಾರುಕಟ್ಟೆಯ ಕೊರತೆಯಿಂದಾಗಿ ನಿರ್ದಿಷ್ಟ ಮಟ್ಟದ ಮಾರಾಟದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಹೀಂದ್ರಾ ಸಂಸ್ಥೆಯನ್ನು ಸಂಪರ್ಕಿಸಿರುವ ಫೋರ್ಡ್ ಸಂಸ್ಥೆಯು ಮಹೀಂದ್ರಾ ಡೀಲರ್ಸ್ ಮೂಲಕ ಕಾರು ಮಾರಾಟಕ್ಕೆ ಪ್ಲ್ಯಾನ್ ಮಾಡಿದೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ಫೋರ್ಡ್ ಸಂಸ್ಥೆಯು ದೇಶದ ಪ್ರಮುಖ ನಗರಗಳಲ್ಲಿ ಸಾಕಷ್ಟು ಸಂಖ್ಯೆಯ ಡೀಲರ್ಸ್‌ಗಳನ್ನು ಹೊಂದಿದ್ದರೂ ಸಹ 2ನೇ ದರ್ಜೆಯ ನಗರಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಡೀಲರ್ಸ್‌ಗಳನ್ನು ಹೊಂದಿಲ್ಲ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿರುವ ಮಹೀಂದ್ರಾದೊಂದಿಗೆ ಹೊಸ ಯೋಜನೆಗೆ ಚಾಲನೆ ನೀಡುತ್ತಿದೆ.

ಇದಕ್ಕೆ ಒಪ್ಪಿಗೆ ಸೂಚಿಸಿರುವ ಮಹೀಂದ್ರಾ ಸಂಸ್ಥೆಯು ಮೆಟ್ರೋ ನಗರಗಳನ್ನು ಹೊರತುಪಡಿಸಿ ಜಿಲ್ಲಾ ಮಟ್ಟದಲ್ಲಿರುವ ಡೀಲರ್ಸ್ ಮುಖಾಂತರ ಫೋರ್ಡ್ ಕಾರುಗಳನ್ನು ಮಾರಾಟ ಮಾಡಲಿದ್ದು, ಕಾರು ಮಾರಾಟ ಆಧಾರದ ಶೇಕಡಾವಾರು ಲಾಭ ಗಳಿಕೆ ಮಾಡಲಿದೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ಇದಲ್ಲದೇ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಎಂಜಿನ್‌ಗಳನ್ನು ಸಿದ್ದಗೊಳಿಸುವಲ್ಲಿ ಜನಪ್ರಿಯತೆ ಹೊಂದಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಹೊಸ ಕಾರುಗಳಿಗೆ 1.0-ಲೀಟರ್(1 ಸಾವಿರ ಸಿಸಿ) ಇಕೋ ಬೂಸ್ಟ್ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಮಾಡುವ ಹೊಣೆ ಹೊತ್ತುಕೊಂಡಿದ್ದು, ಎಕ್ಸ್‌ಯುವಿ500 ವಿನ್ಯಾಸದಲ್ಲಿ ಹೊಸ ಕಾರನ್ನು ಸಿದ್ದಪಡಿಸಲಿದೆಯೆಂತೆ.

ಇನ್ನು ಫೋರ್ಡ್ ಸಂಸ್ಥೆಯು 100-ಬಿಎಚ್‌ಪಿ ಪ್ರೇರಣೆಯ ಡೀಸೆಲ್ ಎಂಜಿನ್ ಉತ್ಪಾದನೆಯಲ್ಲಿ ಈಗಾಗಲೇ ಯಶಸ್ಸು ಸಾಧಿಸಿದ್ದು, ಇದೇ ಕಾರಣಕ್ಕೆ ಪೆಟ್ರೋಲ್ ಎಂಜಿನ್ ವಿಭಾಗದಲ್ಲಿ ಬದಲಾವಣೆ ತರುವು ಉದ್ದೇಶದಿಂದಲೇ ಮಹೀಂದ್ರಾ ಜೊತೆ ಇಂತದೊಂದು ಯೋಜನೆಗೆ ಕೈ ಜೋಡಿಸಿದೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ಇದಕ್ಕೆ ಪ್ರತಿಯಾಗಿ ಫೋರ್ಡ್ ಸಂಸ್ಥೆಯು ಸಹ ಮಹೀಂದ್ರಾ ಕಾರುಗಳ ಮಾರಾಟಕ್ಕೆ ಸಹಕಾರಿಯಾಗಲಿದ್ದು, ದೇಶದ ಪ್ರಮುಖ ನಗರಗಳಲ್ಲಿರುವ ಅಧಿಕ ಸಂಖ್ಯೆಯ ಫೋರ್ಡ್ ಡೀಲರ್ಸ್‌ಗಳಲ್ಲಿ ಇನ್ಮುಂದೆ ಮಹೀಂದ್ರಾ ಗ್ರಾಹಕರ ಸೇವೆಗಳು ಲಭ್ಯವಾಗಲಿವೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಫೋರ್ಡ್ ಜಾಗತಿಕ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಜೀಮ್ ಫೆರ್ಲಿ ಅವರು, ಭಾರತೀಯ ಗ್ರಾಹಕ ಬೇಡಿಕೆಯನ್ನು ಸಮರ್ಥ್ಯವಾಗಿ ಪೂರೈಸಲು ಹೊಸ ಬದಲಾವಣೆ ಅಗತ್ಯವಿದ್ದು, ಇದಕ್ಕಾಗಿ ಮಹೀಂದ್ರಾ ಜೊಡಿಗೂಡಿ ಪೆಟ್ರೋಲ್ ಎಂಜಿನ್ ಅಭಿವೃದ್ದಿ ಮತ್ತು ಕಾರು ಮಾರಾಟದಲ್ಲಿ ಪರಸ್ಪರ ಸಹಾಯ ಮಾಡುವ ಯೋಜನೆಯಲ್ಲಿದ್ದೇವೆ ಎಂದಿದ್ದಾರೆ.

ಫೋರ್ಡ್ ಮತ್ತು ಮಹೀಂದ್ರಾ ಜಂಟಿ ನಿರ್ಮಾಣದ ಹೊಸ ಕಾರು ಹೇಗಿರಲಿದೆ ಗೊತ್ತಾ?

ಜೊತೆಗೆ ಹೊಸ ಯೋಜನೆಗಾಗಿ ಮಹೀಂದ್ರಾ ಜೊತೆ ಒಂದಾಗುತ್ತಿರುವುದು ನಮಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದಿರುವ ಫೋರ್ಡ್ ಹಿರಿಯ ಅಧಿಕಾರಿಗಳು, ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಮಹೀಂದ್ರಾ ಉತ್ತಮ ಪೆಟ್ರೋಲ್ ಎಂಜಿನ್ ಸಿದ್ದಗೊಳಿಸುವ ವಿಶ್ವಾಸ ಇದೆ ಎಂದಿದ್ದಾರೆ.

ಒಟ್ಟಿನಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಪೆಟ್ರೋಲ್ ಕಾರುಗಳ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುವ ನೀರಿಕ್ಷೆಯಲ್ಲಿದ್ದು, ಪರಸ್ಪರ ಕಾರು ಮಾರಾಟ ಸಹಕಾರ ಕೂಡಾ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Ford’s New SUV For India Confirmed — To Be Based On Next-Generation Mahindra XUV 500. Read in Kannada.
Story first published: Saturday, February 16, 2019, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X