ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆಗೆ ಮುಂದಾಗಿರುವ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ವಿನೂತನ ಮಾದರಿಯ ಕಾರುಗಳ ಅಭಿವೃದ್ಧಿಗೆ ಮುಂದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಂಟು ಹೊಸ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸುತ್ತಿವೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾದಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಕೂಡಾ ಒಂದಾಗಿ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಲು ಮುಂದಾಗಿವೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿವೆ. ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಜೊತೆಯಾಗಲಿದ್ದು, ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿವೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.10 ಲಕ್ಷ ರೂ.16 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದೇ ಬೇಡಿಕೆ ಆಧಾರದ ಮೇಲೆ ಫೋರ್ಡ್-ಮಹೀಂದ್ರಾ ಸಂಸ್ಥೆಗಳು ಸಹಭಾಗಿತ್ವದಲ್ಲಿ ಹೊಸ ಕಾರುಗಳನ್ನು ಉತ್ಪಾದನೆ ಮಾಡಲು ಮುಂದಾಗಿವೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಜೊತೆಗೆ ಮಹೀಂದ್ರಾ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳಿಗೆ ಎಂಜಿನ್ ಮತ್ತು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಪರಸ್ಪರ ಸಹಕರಿಸಲು ನಿರ್ಧರಿಸಿದ್ದು, ಈ ಯೋಜನೆಯ ಭಾಗವಾಗಿ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ. ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಯು ತನ್ನ ಮೊದಲ ಜಂಟಿ ಕಾರು ಆವೃತ್ತಿಯನ್ನು 2020ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 8 ವಿವಿಧ ನಮೂನೆಯ ಹೊಸ ಎಸ್‌ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆಯೆಂತೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಇದರಲ್ಲಿ ಯುರೋಪ್ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಎಸ್-ಮ್ಯಾಕ್ಸ್ ಎಂಪಿವಿ ಕಾರನ್ನು ಕೂಡಾ ಭಾರತದಲ್ಲಿ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೋ ಕಾರಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯವನ್ನು ಹೊಂದಿರಲಿದೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಹೊಸ ಕಾರು ಮಹೀಂದ್ರಾ ಬ್ಯಾಡ್ಜ್‌ನಲ್ಲಿಯೇ ಮಾರಾಟವಾಗಲಿದ್ದು, ಸದ್ಯ ಎಂಪಿವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಇದು ಭರ್ಜರಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ನಮ್ಮ ಬೆಂಗಳೂರಿನಲ್ಲಿ ಮೊದಲ ಡಿಜಿಟಲ್ ಶೋರೂಂ ಆರಂಭಿಸಿದ ಎಂಜಿ ಮೋಟಾರ್

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಯುರೋಪ್ ಮಾರುಕಟ್ಟೆಯಲ್ಲಿರುವ ಎಸ್-ಮ್ಯಾಕ್ಸ್ ಕಾರು ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರಾಟವಾಗುತ್ತಿದ್ದು, ದುಬಾರಿ ಬೆಲೆಯೊಂದಿಗೆ 2.0-ಲೀಟರ್ ಡೀಸೆಲ್ ಎಂಜಿನ್‌ ಸೇರಿದಂತೆ 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಮಾರಾಟವಾಗುತ್ತಿದೆ.

MOST READ: ಕೆಲವೇ ವರ್ಷಗಳ ಹಿಂದೆ ಟ್ಯಾಕ್ಸಿ ಡ್ರೈವರ್ ಆಗಿದ್ದ ಇವರು ಇದೀಗ ರೋಲ್ಸ್ ರಾಯ್ಸ್ ಕಾರಿಗೆ ಮಾಲೀಕ..!

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಬೆಲೆಗೆ ಪೈಪೋಟಿ ನೀಡಲು ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯು ಹೊಸದಾಗಿ ಅಭಿವೃದ್ದಿಪಡಿಸುತ್ತಿರುವ 1.5-ಲೀಟರ್ ಡಿಸೇಲ್ ಎಂಜಿನ್ ಸ್ಟ್ಯಾಂಡರ್ಡ್ ಫೀಚರ್ಸ್ ಪಡೆದುಕೊಳ್ಳಲಿದೆ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಹೊಸ ಕಾರು ರೂ.10 ಲಕ್ಷದಿಂದ ರೂ.13 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿದ್ದು, ಬಿಎಸ್-6 ಎಂಜಿನ್‌ನೊಂದಿಗೆ ಹೊಸ ಕಾರು ಮುಂಬರುವ 2020ರ ಮಧ್ಯಂತರದಲ್ಲಿ ಬಿಡುಗಡೆ ನೀರಿಕ್ಷಿಸಲಾಗಿದೆ.

ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಫೋರ್ಡ್‌ನಿಂದ ಶೀಘ್ರದಲ್ಲೇ 7 ಸೀಟರ್ ಎಂಪಿವಿ ಕಾರು..

ಇನ್ನು ಸದ್ಯದ ಮಾರುಕಟ್ಟೆಯ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವದಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Source: ACI

Most Read Articles

Kannada
English summary
According to report, Ford is planning to launch Mahindra Marazzo based new MPV car in India.
Story first published: Saturday, November 2, 2019, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X