ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಅಮೇರಿಕಾ ಮೂಲದ ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಭಾರತದ ಅನೇಕ ಸೆಲೆಬ್ರಿಟಿಗಳು ಜೀಪ್ ಕಂಪಾಸ್ ಕಾರ್ ಅನ್ನು ಹೊಂದಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‍ ದೇವ್.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಜೀಪ್ ಇಂಡಿಯಾದ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಕಪಿಲ್ ದೇವ್‍‍ರವರು ಜೀಪ್ ಕಂಪಾಸ್ ಕಾರಿನ ವಿತರಣೆಯನ್ನು ಪಡೆಯುತ್ತಿರುವ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಕೆಂಪು ಬಣ್ಣದಲ್ಲಿರುವ ಈ ಕಂಪಾಸ್ ಕಾರಿನ ಮಾದರಿಯು ಯಾವುದೆಂದು ಜೀಪ್ ಕಂಪನಿಯು ತಿಳಿಸಿಲ್ಲ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಕಪಿಲ್ ದೇವ್‍‍ರವರ ಬಳಿ ಈಗಾಗಲೇ ಪೋರ್ಷೆ ಪನಾಮೆರಾ, ಬಿ‍ಎಂ‍‍ಡಬ್ಲ್ಯು 5 ಸೀರಿಸ್, ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ಟೊಯೊಟಾ ಫಾರ್ಚೂನರ್, ಮರ್ಸಿಡಿಸ್ ಬೆಂಝ್ ಜಿ‍ಎಲ್‍ಎಸ್ ಡಿ ಹಾಗೂ ಆಡಿ ಕ್ಯೂ 7 ಸೇರಿದಂತೆ ಹಲವಾರು ಕಾರುಗಳಿವೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ತಪ್ಸಿ ಪನ್ನು, ಜಾಕ್ವೆಲಿನ್ ಫರ್ನಾಂಡೀಸ್, ರಿಯಾ ಚಕ್ರವರ್ತಿ, ಅಕ್ಷಯ್ ಕುಮಾರ್, ರೋಹಿತ್ ರಾಯ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಜೀಪ್ ಕಂಪಾಸ್ ಕಾರ್ ಅನ್ನು ಹೊಂದಿದ್ದಾರೆ. ಸೈಫ್ ಅಲಿ ಖಾನ್‍‍ರವರು ಜೀಪ್ ಗ್ರ್ಯಾಂಡ್ ಚೆರೋಕೀ ಎಸ್‌ಆರ್‌ಟಿಯನ್ನು ಹೊಂದಿದ್ದಾರೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿರವರು ಜೀಪ್ ಗ್ರ್ಯಾಂಡ್ ಚಿರೋಕೀ ಟ್ರ್ಯಾಕ್ ಹಾಕ್ ಎಡಿಷನ್ ಅನ್ನು ಖರೀದಿಸಿದರು. ಇದು ಇದುವರೆಗಿನ ಅತ್ಯಂತ ಶಕ್ತಿಶಾಲಿ ಜೀಪ್ ಕಾರ್ ಆಗಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಈ ಕಾರ್ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ಕಾರ್ ಅನ್ನು ಧೋನಿಯವರಿಗಾಗಿ ಜೀಪ್ ಕಂಪನಿಯು ಕಸ್ಟಮೈಸ್ ಮಾಡಿತ್ತು. ಕಂಪಾಸ್‌ನ ಬಗ್ಗೆ ಹೇಳುವುದಾದರೆ, ಈ ಕಾರು ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಎಂಜಿ ಹೆಕ್ಟರ್ ಹಾಗೂ ಕಿಯಾ ಸೆಲ್ಟೋಸ್‌ನಂತಹ ಹೊಸ ವಾಹನಗಳ ಬಿಡುಗಡೆಯ ನಂತರ ಜೀಪ್ ಕಂಪಾಸ್‌ನ ಒಟ್ಟಾರೆ ಮಾರಾಟದ ಮೇಲೆ ಪರಿಣಾಮ ಬೀರಿದ್ದರೂ, ಈ ಕಾರು ಖರೀದಿಸಲು ಬಯಸುವ ಬಹು ಜನರ ಮೊದಲ ಆಯ್ಕೆಯ ಕಾರುಗಳಲ್ಲಿ ಒಂದಾಗಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಜೀಪ್ ಒಂದು ಐಕಾನಿಕ್ ಬ್ರಾಂಡ್ ಆಗಿದ್ದು, ಕಂಪಾಸ್‍‍ನ ವಿನ್ಯಾಸವು ಕಾರು ಪ್ರಿಯರನ್ನು ಆಕರ್ಷಿಸುತ್ತದೆ. ಕಪಿಲ್ ದೇವ್‌ರವರಿಗೆ ಡೆಲಿವರಿ ಮಾಡಲಾದ ಮಾದರಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಡೀಸೆಲ್ ಎಂಜಿನ್‍‍ನಲ್ಲಿ ಚಾಲನೆಯಾಗುವ ಲಿಮಿಟೆಡ್ ಪ್ಲಸ್ ಆವೃತ್ತಿಯಂತೆ ಕಾಣುತ್ತದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಈ ಮಾದರಿಯ ಆನ್ ರೋಡ್ ಬೆಲೆಯು ರೂ.26 ಲಕ್ಷಗಳಾಗಿದೆ. ಈ ಕಾರಿನಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಇದೇ ಎಂಜಿನ್ ಅನ್ನು ಕಂಪಾಸ್ ಕಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವ ಟಾಟಾ ಹ್ಯಾರಿಯರ್ ಹಾಗೂ ಎಂಜಿ ಹೆಕ್ಟರ್‌ ಕಾರುಗಳಲ್ಲಿಯೂ ಅಳವಡಿಸಲಾಗಿದೆ. ಎಂಜಿ ಹೆಕ್ಟರ್ ಕಾರ್ ಅನ್ನು ಬಿಡುಗಡೆಗೊಳಿಸಿದ ನಂತರ ಜೀಪ್ ಕಂಪಾಸ್ ಲಿಮಿಟೆಡ್ ಪ್ಲಸ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಎಂಜಿ ಹೆಕ್ಟರ್ ಕಾರಿನಲ್ಲಿ ಪೂರ್ಣ ಪ್ರಮಾಣದ ಪನೊರಾಮಿಕ್ ಸನ್‍‍ರೂಫ್ ಅಳವಡಿಸಲಾಗಿದೆ. ಕಂಪಾಸ್‌ ಕಂಪನಿಯು ಲಿಮಿಟೆಡ್ ಪ್ಲಸ್ ಆವೃತ್ತಿಯಲ್ಲಿ ಮಾತ್ರವೇ ಪೂರ್ಣ ಪ್ರಮಾಣದ ಪನೊರಾಮಿಕ್ ಸನ್‌ರೂಫ್ ನೀಡುತ್ತಿದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಸನ್‌ರೂಫ್ ಕಂಪಾಸ್‌ನ ಕ್ಯಾಬಿನ್‌ಗೆ ಐಷಾರಾಮಿ ಅನುಭವವನ್ನು ನೀಡುವುದರ ಜೊತೆಗೆ ಕಾರ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಜೀಪ್ ದೇಶಿಯ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸರಣಿಯ ಮಾದರಿಗಳನ್ನು ಮಾರಾಟ ಮಾಡುತ್ತದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಟರ್ಬೋಚಾರ್ಜ್ಡ್ ಪೆಟ್ರೋಲ್ ಮ್ಯಾನುವಲ್‍‍ನಿಂದ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಟರ್ಬೊ‍‍ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಗಳವರೆಗೆ ಮಾರಾಟ ಮಾಡಲಾಗುತ್ತದೆ. ಸದ್ಯಕ್ಕೆ, ಜೀಪ್ ಕಂಪಾಸ್‌ನ ಒಂದೇ ಒಂದು ಮಾದರಿಯಲ್ಲಿ ಮಾತ್ರ ಡೀಸೆಲ್ ಎಂಜಿನ್‌ನೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡುತ್ತದೆ.

ಜೀಪ್ ಕಂಪಾಸ್ ಖರೀದಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ಹೊಸದಾಗಿ ಬಿಡುಗಡೆಯಾದ ಜೀಪ್ ಕಂಪಾಸ್ ಟ್ರೈಲ್ ಹಾಕ್ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ನೀಡುತ್ತದೆ. ಜೀಪ್ ಇದೇ ಕಾಂಬಿನೇಷನ್ ಅನ್ನು ಕಡಿಮೆ ಆವೃತ್ತಿಯ ಮಾದರಿಗಳಲ್ಲೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Former Indian cricketer kapil dev buys jeep compass details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X