ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಫಾರ್ಮುಲಾ ಒನ್ ಮಾಜಿ ಚಾಲಕ ಮತ್ತು ಮೂರು ಬಾರಿಯ ವಿಶ್ವ ಚಾಂಪಿಯನ್ ನಿಕಿ ಲೌಡ ತಮ್ಮ 70 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬ ಮೂಲಗಳು ದೃಢಪಡಿಸಿವೆ. ಆಸ್ಟ್ರಿಯಾದ ನಿವಾಸಿಯಾಗಿದ್ದ ಅವರು ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ ಎಂಟು ತಿಂಗಳ ಹಿಂದೆ ಶ್ವಾಸಕೋಶದ ಕಸಿ ಮಾಡಲಾಗಿತ್ತು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಅವರ ಕುಟುಂಬ ಸದಸ್ಯರು ಆಸ್ಟ್ರಿಯನ್ ಪ್ರೆಸ್ ಏಜೆನ್ಸಿಗೆ ನೀಡಿರುವ ಪ್ರಕಟಣೆಯಲ್ಲಿ, ನಾವು ತುಂಬಾ ದುಃಖದಿಂದ ನಮ್ಮ ಪ್ರೀತಿಯ ನಿಕಿ ರವರು ಶಾಂತವಾಗಿ ನಿಧನರಾದರೆಂದು ತಿಳಿಸಲು ಬಯಸುತ್ತೇವೆ. ಅವರ ದಣಿವರಿಯದ ಜೀವನ, ಅವರ ನೇರ ವ್ಯಕ್ತಿತ್ವ, ಅವರ ಧೈರ್ಯ ನಮ್ಮೊಂದಿಗೆ ಸದಾ ಇರುತ್ತವೆ. ಅವರು ನಮ್ಮೆಲ್ಲರಿಗೂ ಆದರ್ಶ ಹಾಗೂ ಮಾದರಿಯಾಗಿರುತ್ತಾರೆ, ಅವರೊಬ್ಬ ಪ್ರೀತಿಯ ಹಾಗೂ ಕಾಳಜಿಯ ಗಂಡ, ತಂದೆ, ತಾತನಾಗಿದ್ದರು. ಅವರನ್ನು ಸದಾ ಕಾಲ ಸ್ಮರಿಸುತ್ತೇವೆ ಎಂದು ತಿಳಿಸಿದ್ದಾರೆ.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ನಿಕಿ ಲೌಡಾ ರವರು 1975, 1977,1984 ರಲ್ಲಿ ಫಾರ್ಮುಲಾ ಒನ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಎಫ್ 1 ಉದ್ಯಮದಲ್ಲಿ ಮೆಚ್ಚುಗೆಗೆ, ಪ್ರಶಂಸೆಗೆ ಪಾತ್ರರಾಗಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಎರಡು ಬಾರಿ ಫೆರಾರಿ ಮತ್ತು ಒಂದು ಬಾರಿ ಮೆಕ್‍‍ಲಾರೆನ್ ಪ್ರಶಸ್ತಿಗಳನ್ನು ಜಯಿಸಿದ್ದರು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

1976ರಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡರೂ ಚೇತರಿಸಿಕೊಂಡು ಮತ್ತೆ ವೃತ್ತಿಜೀವನಕ್ಕೆ ಮರಳಿದ್ದರು. ನಿಕಿ ರವರು ಒಟ್ಟು 171 ಸ್ಪರ್ಧೆಗಳಲ್ಲಿ ಭಾಗವಹಿಸಿ, 25 ಪ್ರಶಸ್ತಿಗಳನ್ನು ಜಯಿಸಿದ್ದರು. ನಿವೃತ್ತಿಯ ನಂತರ ತಮ್ಮದೇ ಆದ ವ್ಯವಹಾರವನ್ನು ಆರಂಭಿಸಿದ್ದ ಅವರು, ಸ್ವಂತ ಏರ್‍‍ಲೈನ್ ಸ್ಥಾಪಿಸಿದ್ದರು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಫಾರ್ಮುಲಾ ಒನ್‍‍ನ ವ್ಯವಸ್ಥಾಪಕ ಮಂಡಳಿಯಲ್ಲಿ ಹಿರಿಯ ಸದಸ್ಯರಾಗಿದ್ದರು. ಇತ್ತೀಚಿಗೆ ಮರ್ಸಿಡಿಸ್‍‍‍ನಲ್ಲಿ ನಾನ್ ಎಕ್ಸಿ‍‍ಕ್ಯೂಟಿವ್ ಚೇರ್ಮನ್ ಸಹ ಆಗಿದ್ದರು. ಲೂಯಿಸ್ ಹ್ಯಾಮಿಲ್ಟನ್ ರವರನ್ನು ತಂಡಕ್ಕೆ ಕರೆತರಲು ನೆರವಾಗಿದ್ದರು. ಮರ್ಸಿಡಿಸ್‍‍ನ ಮುಖ್ಯಸ್ಥರಾದ ಟೊಟೊ ವೊಲ್ಫ್ ರವರು ತಮ್ಮ ಶೋಕ ಸಂದೇಶದಲ್ಲಿ, ನಮ್ಮ ತಂಡದ ಪರವಾಗಿ ಮತ್ತು ಮರ್ಸಿಡಿಸ್‍‍ನಲ್ಲಿರುವವರ ಪರವಾಗಿ, ಬಿರ್ಗಿಟ್‍‍ರವರಿಗೆ, ನಿಕಿ ರವರ ಮಕ್ಕಳಿಗೆ, ಅವರ ಕುಟುಂಬಕ್ಕೆ, ಅವರ ಎಲ್ಲಾ ಸ್ನೇಹಿತರಿಗೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ನಿಕಿರವರು ಯಾವಾಗಲೂ ನಮ್ಮ ಕ್ರೀಡೆಯ ದೊಡ್ಡ ದಂತಕಥೆಯಾಗಿ ಉಳಿಯಲಿದ್ದಾರೆ. ಅವರು ತಮ್ಮ ನಾಯಕತ್ವದ ಗುಣದಿಂದ, ಮಾನವೀಯತೆಯಿಂದ, ನಿಷ್ಠೆಯಿಂದ ಸದಾ ಕಾಲ ನೆನೆಪಿನಲ್ಲಿಯುಳಿಯುತ್ತಾರೆ ಎಂದು ತಿಳಿಸಿದ್ದಾರೆ.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಅವರು ನಿಧನವು ಫಾರ್ಮುಲಾ ಒನ್‍‍ನಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ನಾವು ಕೇವಲ ಒಬ್ಬ ನಾಯಕನನ್ನು ಮಾತ್ರವಲ್ಲದೇ, ಫಾರ್ಮುಲಾ ಒನ್ ಆಟಕ್ಕೆ ಹೊಸ ಮೆರುಗನ್ನು ತಂದು ಕೊಟ್ಟ ದೊಡ್ಡ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ.

MOST READ: ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ನಮ್ಮ ಮರ್ಸಿಡಿಸ್ ತಂಡವು ತನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದೆ, ಅವರು ಕಳೆದ ಆರೂವರೆ ವರ್ಷಗಳಿಂದ ನಮ್ಮ ತಂಡದ ಭಾಗವಾಗಿದ್ದರು. ಅವರು ಪ್ರಾಮಾಣಿಕರಾಗಿ, ನಿಷ್ಠೆಯಿಂದ ಇದ್ದರು. ಅವರು ನಮ್ಮ ತಂಡದಲ್ಲಿ ಇದ್ದದ್ದು ನಮ್ಮ ಹೆಮ್ಮೆ, ಅವರು ನಮ್ಮ ತಂಡದ ಯಶಸ್ಸಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅವರು ಬ್ರಾಕ್ಲೆ ಹಾಗೂ ಬ್ರಿಕ್ಸ್ ವರ್ಥ್ ನಲ್ಲಿ ಕಾಲಿಟ್ಟು, ತಮ್ಮ ಪ್ರೋತ್ಸಾಹದ ಮಾತುಗಳನ್ನಾಡಿ ನಮ್ಮಲ್ಲಿ ಹೊಸ ಉರುಪನ್ನು ತುಂಬುತ್ತಿದ್ದರು, ಇದನ್ನು ಮತ್ತೆ ಬೇರೆಯವರು ತುಂಬಲು ಸಾಧ್ಯವಿಲ್ಲ.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ನಿಕಿ, ನಿಮ್ಮ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ, ನಿಮ್ಮಂತೆ ಮತ್ತೊಬ್ಬರು ಬರಲು ಸಾಧ್ಯವಿಲ್ಲ, ನಿಮ್ಮನ್ನು ನಮ್ಮ ಚೇರ್‍‍ಮನ್ ಎಂದು ಕರೆಯಲು ನಮಗೆ ಹೆಮ್ಮೆಯಾಗುತ್ತದೆ, ಇದು ನಮ್ಮ ಸೌಭಾಗ್ಯ ನನ್ನ ಪ್ರಿಯ ಮಿತ್ರ ಎಂದು ತಿಳಿಸಿದ್ದಾರೆ.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಫಾರ್ಮುಲಾ ಒನ್ ಗ್ರೂಪಿನ ಚೇರ್‍‍ಮನ್ ಮತ್ತು ಚೀಫ್ ಎಕ್ಸಿ‍‍ಕ್ಯೂಟಿವ್ ಆದ ಚೇಸ್ ಕೆರಿ ರವರು ಮಾತನಾಡಿ, ನಮಗೆ ನಿಕಿ ಲೌಡ ರವರ ನಿಧನದ ವಾರ್ತೆ ಕೇಳಿ ತುಂಬಾ ದುಃಖವಾಗುತ್ತಿದೆ. ಫಾರ್ಮುಲಾ ಒನ್ ತನ್ನ ಒಬ್ಬ ಸ್ಪರ್ಧಿಯನ್ನು ಮಾತ್ರವಲ್ಲದೇ ತನ್ನ ಒಬ್ಬ ನಾಯಕನನ್ನು ಕಳೆದುಕೊಂಡಿದೆ. ರೇಸಿಂಗ್ ಕಡೆಗಿನ ಅವರ ಪ್ರೀತಿ, ಅವರ ಧೈರ್ಯ ಅಸಾಧಾರಣವಾಗಿದ್ದು, ಅನೇಕ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ನಿಧನವು ಇಡಿ ಫಾರ್ಮುಲಾ ಒನ್ ಕುಟುಂಬಕ್ಕೆ ಮತ್ತು ಮೋಟಾರ್‍‍ಸ್ಪೋರ್ಟಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.

MOST READ: ಈ ಪುಸ್ತಕದ ಬೆಲೆ ಒಂದು ಐಷಾರಾಮಿ ಬಂಗಲೆಗಿಂತಲೂ ದುಬಾರಿ..!

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಲೌಡಾರವರು ಅದ್ಭುತವಾದ ಚಾಲಕರಾಗಿದ್ದರು. 1949ರಲ್ಲಿ ಜನಿಸಿದ ಅವರಿಗೆ ಮೊದಲಿನಿಂದಲೂ ರೇಸಿಂಗ್‍‍ನೆಡೆಗೆ ಒಲವಿದ್ದರೂ ಅವರ ಕುಟುಂಬ ಸದಸ್ಯರು ಅವರ ಬೆಂಬಲಕ್ಕೆ ನಿಂತಿರಲಿಲ್ಲ. ಅವರಿಗೆ ರೇಸಿಂಗ್‍‍ನಲ್ಲಿಯೇ ಸಾಧನೆ ಮಾಡಬೇಕೆಂಬ ಗುರಿಯಿದ್ದ ಕಾರಣ, ಬ್ಯಾಂಕಿನಿಂದ ವೈಯಕ್ತಿಕ ಸಾಲ ಪಡೆದು ಫಾರ್ಮುಲಾ ಒನ್‍‍‍ನಲ್ಲಿ ಭಾಗವಹಿಸಿದರು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

1971ರಲ್ಲಿ ಫಾರ್ಮುಲಾ‍ಒನ್‍‍ಗೆ ಪಾದಾರ್ಪಣೆ ಮಾಡಿದರು. ಅವರ ಚಾಲನೆಯಿಂದ ಸಂತಸಗೊಂಡ ಎನ್ಜೊ ಫೆರಾರಿರವರು ನಿಕಿರವರಿಗೆ ಶುಡೆರಿಯಾದಲ್ಲಿ 1974ರಲ್ಲಿ ಚಾಲಕನ ಕೆಲಸ ನೀಡಿದರು. ತಮ್ಮ ಮೊದಲ ರೇಸಿನಲ್ಲಿಯೇ ಫೆರಾರಿಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದರು, ನಂತರ ಸ್ಪೇನ್‍‍ನಲ್ಲಿ ನಡೆದ ಮೂರು ಸ್ಪರ್ಧೆಗಳಲ್ಲಿ ಜಯಗಳಿಸಿದರು. ನಂತರ ಫೆರಾರಿ ತಂಡಕ್ಕಾಗಿ 1975ರಲ್ಲಿ ಫಾರ್ಮುಲಾ ಒನ್ ಪ್ರಶಸ್ತಿಯನ್ನು ಗೆದ್ದುಕೊಟ್ಟರು. ಇದು ಫೆರಾರಿ ತಂಡವು ಹತ್ತು ವರ್ಷಗಳ ನಂತರ ಗೆದ್ದ ಮೊದಲ ಪ್ರಶಸ್ತಿಯಾಗಿತ್ತು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

1976ರಲ್ಲಿ ನಡೆದ ಸ್ಪರ್ಧೆಯಲ್ಲಿ ನಿಕಿರವರು ಅಪಘಾತಕ್ಕಿಡಾದರು. ಅವರಿದ್ದ ಕಾರಿಗೆ ಬೆಂಕಿ ಹೊತ್ತಿ ಕೊಂಡಿತ್ತು. ಸಹ ಸ್ಪರ್ಧಿಗಳು ಅವರನ್ನು ಹೊರಕ್ಕೆಳೆದು ಪಾರು ಮಾಡಿದರು. ಬೆಂಕಿಯಿಂದಾಗಿ ನಿಕಿರವರ ತಲೆ ಮತ್ತು ಕಿವಿಗಳಿಗೆ ತೀವ್ರವಾದ ಗಾಯಗಳಾಗಿದ್ದವು, ಅವರ ಶ್ವಾಸಕೋಶಕ್ಕೆ ಹಾನಿಯಾಗಿತ್ತು.

MOST READ: ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಸರ್ಜರಿಯಾದ ಆರು ವಾರಗಳ ನಂತರ ನಿಕಿರವರು, ಬ್ಯಾಂಡೇಜ್ ಧರಿಸಿ ಮತ್ತೆ ಇಟಾಲಿಯನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಭಾಗವಹಿಸಿದ್ದರು. ಬಹುತೇಕ ಪ್ರಶಸ್ತಿಯನ್ನು ಗೆಲ್ಲುವ ಹಂತದಲ್ಲಿದ್ದಾಗ ಸುರಿದ ಧಾರಾಕಾರ ಮಳೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಸ್ನೇಹಿತರೇ ಆದ ಜೇಮ್ಸ್ ಹಂಟ್ ರವರು ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

1977ರಲ್ಲಿ ಎರಡನೇ ಬಾರಿಗೆ ಫಾರ್ಮುಲಾ ಒನ್ ಪ್ರಶಸ್ತಿ ಗೆದ್ದ, ನಿಕಿರವರು 1979ರಲ್ಲಿ ನಿವೃತ್ತಿ ಘೋಷಿಸಿದರು. 1982ರಲ್ಲಿ ಪುನಃ ಮ್ಯಾಕ್‍‍ಲಾರೆನ್‍‍ಗಾಗಿ ಸ್ಪರ್ಧೆಗಿಳಿದರು. ತಮ್ಮದೇ ತಂಡದ ಅಲೆನ್ ಪ್ರೊಸ್ಟ್ ರವರೊಂದಿಗೆ ತೀವ್ರ ಪೈಪೋಟಿ ಎದುರಿಸಿ 1984ರಲ್ಲಿ ಮೂರನೇ ಹಾಗೂ ಕೊನೆಯ ಬಾರಿಗೆ ಚಾಂಪಿಯನ್‍‍ಶಿಪ್ ಗೆದ್ದಿದ್ದರು.

ಫಾರ್ಮುಲಾ ಒನ್ ದಂತಕಥೆ ನಿಕಿ ಲೌಡಾ ಇನ್ನು ನೆನಪು ಮಾತ್ರ

ಅವರು ಈ ಪ್ರಶಸ್ತಿಯನ್ನು ಕೇವಲ ಅರ್ಧ ಪಾಯಿಂಟ್‍‍ನಿಂದ ಗೆದ್ದಿದ್ದರು. ಅವರು ಎರಡನೇ ಹಾಗೂ ಕೊನೆಯ ಬಾರಿಗೆ 1985ರಲ್ಲಿ ರೇಸಿಂಗ್‍‍ನಿಂದ ನಿವೃತ್ತಿ ಹೊಂದಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು.

Most Read Articles

Kannada
English summary
Formula One Legend Niki Lauda Passes Away At 70 - Read in kannada
Story first published: Wednesday, May 22, 2019, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more