ಎಲೆಕ್ಟ್ರಿಕ್ ವಾಹನಗಳು ಕೂಡಾ ಇನ್ಮುಂದೆ ಸೌಂಡ್ ಮಾಡಲಿವೆ..!

ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನವು ಮಾಲಿನ್ಯ ರಹಿತವಾಗಿದೆ ಮತ್ತು ಟ್ರಾಫಿಕ್ ಕಿರಿ ಕಿರಿಯ ನಡುವೆ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೊಗುತ್ತಾರೆ. ಆದರೆ ಎಲೆಕ್ಟ್ರಿಕ್ ವಾಹನಗಳ ಎಂಜಿನ್ ಶಬ್ದ ರಹಿತವಾಗಿರುವುದರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಈ ಸಮಸ್ಯೆಗೆ ಹೆಲ್ಲಾ ಕಂಪನಿಯು ಬ್ರೇಕ್ ಹಾಕಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ದುಬಾರಿಯಾಗಿವೆ. ಎಲೆಕ್ಟ್ರಿಕ್ ವಾಹನಗಳನ್ನು ನಿರ್ವಹಿಸುವುದು ಅಗ್ಗವಾಗಿದೆ. ಜನರು ಪೆಟ್ರೋಲ್ ಮತ್ತು ಡೀಸೆಲ್ ವಾಹನದ ಬದಲು ಎಲೆಕ್ಟ್ರಾನಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಪೆಟ್ರೋಲ್ ಮತ್ತು ಡೀಸೆಲ್‍‍ಗೆ ದರವು ಏರಿಕೆಯಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಂತೆ ಪರಿಸರಕ್ಕೆ ಹಾನಿ ಉಂಟುಮಾಡುವುದಿಲ್ಲ. ಆದರೆ ಎಲೆಕ್ಟ್ರಿಕ್ ವಾಹನಗಳಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಅವುಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಂತೆ ಶಬ್ದ ಹೊಂದಿಲ್ಲ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವಾಹನಗಳ ಎಂಜಿನ್ ಶಬ್ದವನ್ನು ಹೊಂದಿರುತ್ತವೆ. ಅದರ ಶಬ್ದ ಕೇಳಿಸುವಾಗ ವಾಹನ ಬರುತ್ತಿರುವುದು ತಿಳಿಯುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಶಬ್ದ ರಹಿತವಾದ ಕಾರಣ ವಾಹನ ಬರುವುದೆ ತಿಳಿಯುವುದಿಲ್ಲ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಮಳೆಗಾಲ ಅಥವಾ ಮೋಡ ಮುಸುಕಿದ ವಾತಾವರಣದಲ್ಲಿ ವಾಹನಗಳು ಕಾಣುದೆ ಇಲ್ಲ,ಅಂತಹ ಸಂದರ್ಭದಲ್ಲಿ ಶಬ್ದವು ಹೊಂದಿಲ್ಲದ ಕಾರಣ ಹೆಚ್ಚು ಅಪಾಯಕಾರಿಯಾಗಿದೆ. ಎಲೆಕ್ಟ್ರಿಕ್ ಕಾರುಗಳು ಶಬ್ದರಹಿತವಾದ ಕಾರಣ ಇದು ಅಪಾಘತ ಕಾರಣವಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲು ಹೆಲ್ಲಾ ಕಂಪನಿ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಅಕೌಸ್ಟಿಕ್ ವೆಹಿಕಲ್ ಅಲರ್ಟಿಂಗ್ ಸಿಸ್ಟಂ (ಎವಿಎಸ್) ಅನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಈ ಎ‍ವಿಎಸ್ ತಂತ್ರಜ್ಞಾನ ಎಂಜಿನ್‍‍ನಲ್ಲಿ ಶಬ್ದ ವಿಲ್ಲದ ಕಾರಣ ಬದಲಿ ಶಬ್ದವನ್ನು ಸೃಷ್ಟಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಎಲೆಕ್ಟ್ರಿಕ್ ವಾಹನಗಳಿಗಾಗಿ ಕೃತಕ ಚಾಲನಾ ಶಬ್ದವನ್ನು ಹೆಲ್ಲಾ ಅಭಿವೃದ್ಧಿಪಡಿಸಿದೆ. ಹೆಲ್ಲಾ ಜರ್ಮನಿ ಮೂಲದ ಆಟೋಮೋಟಿವ್ ಲೈಟಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದೆ. ಎವಿಎಸ್ ಸಿಸ್ಟಿಂ ಎಲೆಕ್ಟ್ರಿಕ್ ವಾಹನಗಳಲ್ಲಿ ಬದಲಿ ಶಬ್ದವನ್ನು ಸೃಷ್ಟಿಸುವುದರಿಂದ ಹೆಚ್ಚಿನ ಅಪಘಾತಗಳಿಗೆ ಬ್ರೇಕ್ ಹಾಕಲಿದೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಎ‍‍ವಿಎಸ್ ಸಿಸ್ಟಂ ಎಲೆಕ್ಟ್ರಿಕ್ ವಾಹನಗಳ ಶಬ್ದ ರಹಿತ ಎಂಜಿನ್‍‍ಗೆ ಅನುಗುಣವಾದ ಸೂಕ್ತ ಶಬ್ದವನ್ನು ಸೃಷ್ಟಿಸುತ್ತದೆ. ಇದು ಪಾದಚಾರಿಗಳಿಗೆ ಮತ್ತು ಇತರ ವಾಹನಗಳಿಗೆ ಸ್ಪಷ್ಟವಾಗಿ ಕೇಳುವಂತೆ ಇರಲಿದೆ ಎಂದು ಹೆಲ್ಲಾ ಕಂಪನಿ ಹೇಳಿದೆ. 20 ಕಿ.ಮೀ ವೇಗಕ್ಕಿಂತ ಕಡಿಮೆ ವೇಗದಲ್ಲಿ, ಹೆಲ್ಲಾ ಅಲರ್ಟ್ ವ್ಯವಸ್ಥೆ ಎವಿಎಎಸ್ ವೇಗ ಹೆಚ್ಚಾದಾಗ ತೀವ್ರತೆಯನ್ನು ಹೆಚ್ಚಿಸುವ ಶಬ್ದವನ್ನು ಉಂಟುಮಾಡುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

20 ಕಿ.ಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ, ರಸ್ತೆಯಲ್ಲಿ ಟಯರ್‍‍ಗಳು ತಿರುಗುವ ಶಬ್ದವು ಸಾಕಷ್ಟು ಜೋರಾಗಿರುವುದರಿಂದ ಸಿಮ್ಯುಲೇಟೆಡ್ ಎಂಜಿನ್ ಶಬ್ದವನ್ನು ಇಳಿಕೆ ಮಾಡಲಾಗುತ್ತದೆ ಎಂದು ಕಂಪನಿಗೆ ತಿಳಿಸಿದೆ. ಅಕ್ಟೋಬರ್ 18 ರಿಂದ ಅಕ್ಟೋಬರ್ 23 ರವರೆಗೆ ಬೆಲ್ಜಿಯಂನಲ್ಲಿ ನಡೆಯುವ ಬಸ್ ವರ್ಲ್ಡ್ ಎಂಬ ಕಾರ್ಯಕ್ರಮದಲ್ಲಿ ಹೆಲ್ಲಾ ಎವಿಎಸ್ ಅನ್ನು ಮೊದಲ ಬಾರಿ ಪ್ರದರ್ಶಿಸಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಎಲೆಕ್ಟ್ರಿಕ್ ವಾಹನಗಳು ಇನ್ನೂ ಮುಂದೆ ಸೌಂಡ್ ಮಾಡಲಿವೆ..!

ಎಲೆಕ್ಟ್ರಿಕ್ ವಾಹನಗಳು ಶಬ್ದ ರಹಿತವಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಇದಕ್ಕೆ ಬ್ರೇಕ್ ಹಾಕಲು ಹೆಲ್ಲಾ ಕಂಪನಿಯು ಮುಂದಾಗಿದೆ. ಕಾರ್ಕಶವಾಲ್ಲದ ಸೂಕ್ತವಾದ ಶಬ್ದವನ್ನು ಹೊಂದಲಿದೆ ಕಂಪನಿ ಹೇಳಿದೆ. ಈ ತಂತ್ರಜ್ಞಾನದಿಂದಾಗಿ ಹೆಚ್ಚಿನ ಅಪಾಘತಗಳನ್ನು ತಡೆ ಕಟ್ಟಲು ಸಹಕಾರಿಯಾಗಬಹುದು. ಆದರೆ ಈ ಎವಿಎಸ್ ಸಿಸ್ಟಂ ಯಶ್ವಸಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Hella develops artificial driving noise for electric vehicles - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X