Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ
ಆರ್ಥಿಕ ಹಿಂಜರಿತದಿಂದಾಗಿ ದೇಶಾದ್ಯಂತ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಸದ್ಯ ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದಾಗಿ ಚೇತರಿಸಿಕೊಳ್ಳುತ್ತಿದ್ದು, ಗೋವಾ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ವಾಹನ ಉತ್ಪಾದನಾ ಸಂಸ್ಥೆಗಳಿಗೆ ನೆರವಾಗಲು ಮಹತ್ವದ ಆದೇಶ ಒಂದನ್ನು ಹೊರಡಿಸಿದೆ.

ಗೋವಾ ಸರ್ಕಾರವು ಹೊಸ ವಾಹನ ಮೇಲಿನ ರೋಡ್ ಟ್ಯಾಕ್ಸ್ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದು, 2019ರ ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತನಕ ಖರೀದಿ ಮಾಡಲಾಗುವ ಎಲ್ಲಾ ಹೊಸ ವಾಹನಗಳಿಗೂ ಅನ್ವಯವಾಗಿ ರೋಡ್ ಟ್ಯಾಕ್ ಕಡಿತಗೊಳಿಸಿದೆ. ಹೊಸ ವಾಹನ ನೋಂದಣಿಯಿಲ್ಲಿ ಭಾರೀ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, ಯಾವುದೇ ಮಾದರಿಯ ವಾಹನಗಳನ್ನು ಖರೀದಿಸಿದರೂ ಶೇ.50ರಷ್ಟು ರೋಡ್ ಟ್ಯಾಕ್ಸ್ ವಿನಾಯ್ತಿ ನೀಡಲಾಗಿದೆ.

ಗೋವಾ ಸಾರಿಗೆ ಸಂಸ್ಥೆಯಲ್ಲಿ ಹೊಸ ವಾಹನಗಳ ನೋಂದಣಿಯಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ವರ್ಷಾಂತ್ಯದಲ್ಲಿ ವಾಹನ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೋಡ್ ಟ್ಯಾಕ್ಸ್ ಕಡಿತಗೊಳಿಸಿ ವಾಹನ ಮಾರಾಟವನ್ನು ಹೆಚ್ಚಿಸಲು ಯೋಜಿಸಲಾಗಿದೆ.

ಸದ್ಯ ಗೋವಾದಲ್ಲಿ ರೂ.1.50 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಶೇ.9ರಷ್ಟು, ರೂ.1.50 ಲಕ್ಷದಿಂದ ರೂ.3 ಲಕ್ಷ ಬೆಲೆಗೊಳಗಿನ ದ್ವಿಚಕ್ರ ವಾಹನಗಳಿಗೆ ಶೇ.12ರಷ್ಟು ಮತ್ತು ರೂ.3 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಶೇ.15 ರಷ್ಟು ರೋಡ್ ಟ್ಯಾಕ್ಸ್ ವಿಧಿಸಲಾಗುತ್ತಿದ್ದು, ಇದು ಶೇ.50 ರಷ್ಟು ಕಡಿತಗೊಳ್ಳಲಿದೆ.

ಹಾಗೆಯೇ ರೂ.6 ಲಕ್ಷದೊಳಗಿನ ಹೊಸ ಕಾರುಗಳ ಮೇಲೆ ಶೇ.9ರಷ್ಟು, ರೂ.10 ಲಕ್ಷ ಮೇಲ್ಪಟ್ಟ ಹೊಸ ಕಾರುಗಳಿಗೆ ಶೇ.12ರಷ್ಟು ಮತ್ತು ರೂ. 15 ಲಕ್ಷ ಮೇಲ್ಪಟ್ಟ ಹೊಸ ಕಾರುಗಳ ಮೇಲೆ ಶೇ.13 ರಷ್ಟು ರೋಡ್ ಟ್ಯಾಕ್ಸ್ ವಿಧಿಸಲಾಗುತ್ತಿದ್ದು, ಹೊಸ ಆದೇಶದ ನಂತರ ಎಲ್ಲಾ ಕಾರುಗಳ ರೋಡ್ ಟ್ಯಾಕ್ಸ್ ಪ್ರಮಾಣವು ಸಹ ಶೇ.50ಕ್ಕೆ ಇಳಿಕೆಯಾಗಲಿದೆ. ಹೊಸ ವಾಹನ ಮಾರಾಟವನ್ನು ಹೆಚ್ಚಿಸಲು ಈ ಆದೇಶವು ಸಾಕಷ್ಟು ಸಹಕಾರಿಯಾಗಿದ್ದು, ಗ್ರಾಹಕರಿಗೂ ಇದರಿಂದ ಆರ್ಥಿಕ ಹೊರೆ ತಪ್ಪಿಲಿದೆ.

ಇನ್ನು 2019ರ ಆರಂಭದಿಂದಲೇ ಹೊಸ ವಾಹನ ಮಾರಾಟದಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸುತ್ತಲೇ ಬಂದಿದ್ದು, ಆಟೋ ಮೊಬೈಲ್ ಕ್ಷೇತ್ರದ ಹಿನ್ನಡೆಗೆ ಅನೇಕ ಕಾರಣಗಳನ್ನು ಪಟ್ಟಿಮಾಡಲಾಗಿತ್ತು.

ಆಟೋ ಮೊಬೈಲ್ ಕ್ಷೇತ್ರ ಸುಧಾರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಕಾರು ಉತ್ಪಾದನಾ ಸಂಸ್ಥೆಗಳು ಹೆಚ್ಚಳವಾಗಿರುವ ಜಿಎಸ್‌ಟಿ ಇಳಿಕೆ ಮತ್ತು ಬಿಎಸ್-4 ವಾಹನ ಮಾರಾಟದ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಮನವಿ ಮಾಡಿದ್ದವು.
MOST READ: ದಸರಾ ಸಂಭ್ರಮಕ್ಕೆ ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಮಾರುತಿ ಸುಜುಕಿ

ಆದರೆ ಬಿಎಸ್-4 ವಾಹನ ಮಾರಾಟ ವಿಚಾರದಲ್ಲಿನ ಗೊಂದಲ ನಿವಾರಣೆ ಮಾಡಿದ್ದ ಕೇಂದ್ರ ಸರ್ಕಾರವು ಜಿಎಸ್‌ಟಿ ಇಳಿಕೆ ಹಿಂದೇಟು ಹಾಕಿತ್ತು. ತದನಂತರ ಜಿಎಸ್‌ಟಿ ಇಳಿಕೆಯ ಬದಲಾಗಿ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿ ಬಿಡಿಭಾಗಗಳ ಆಮದು ಮೇಲೆ ವೆಚ್ಚವನ್ನು ತಗ್ಗಿಸಿತ್ತು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟವು ಕಳೆದ ಎರಡು ತಿಂಗಳ ಅವಧಿಗಿಂತಲ ಇದೀಗ ತುಸು ಚೇತರಿಕೆ ಕಾಣುತ್ತಿದ್ದು, ಇದರ ಮಧ್ಯೆ ಗೋವಾ ಸರ್ಕಾರವು ಕೈಗೊಂಡಿರುವ ಕ್ರಮವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಮತ್ತಷ್ಟು ವರದಾನವಾಗಿದೆ.
MOST READ: ಮೈಲೇಜ್ ರೇಂಜ್ ವಿಸ್ತರಿತ ಟಾಟಾ ಹೊಸ ಟಿಗೋರ್ ಎಲೆಕ್ಟ್ರಿಕ್ ಬಿಡುಗಡೆ

ಗೋವಾ ಸರ್ಕಾರವು ಕೈಗೊಂಡಿರುವ ಕ್ರಮ ತಾತ್ಕಲಿಕವಾಗಿದ್ದರೂ ಸಹ ಹೊಸ ವಾಹನ ಬೆಲೆ ಹೆಚ್ಚಳದಿಂದ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರಿಗೆ ಸಹಕಾರಿಯಾಗಿದ್ದು, ಆಟೋ ಉತ್ಪಾದನಾ ಸಂಸ್ಥೆಗಳು ಭಾರೀ ಪ್ರಮಾಣದ ಹೊಸ ವಾಹನಗಳ ಮಾರಾಟ ನಿರೀಕ್ಷೆಯಲ್ಲಿವೆ.