ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಮಾರಾಟ ಹಾಗೂ ಮಾರುಕಟ್ಟೆಯ ಜಗತ್ತಿನಲ್ಲಿ, ಯಾವುದೇ ಕಂಪನಿಯ ವಸ್ತುಗಳನ್ನು ಮಾರಾಟ ಮಾಡುವ ಸುಲಭ ವಿಧಾನವೆಂದರೆ ಆ ವಸ್ತುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು. ಇದರಿಂದಾಗಿ ಆ ವಸ್ತುವು ಗ್ರಾಹಕರನ್ನು ಆಕರ್ಷಿಸುತ್ತದೆ.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಆದರೆ, ಈ ವಿಷಯವು ಇತ್ತೀಚಿನವರೆಗೂ ಭಾರತದ ಆಟೋ ಮೊಬೈಲ್ ಉದ್ಯಮಕ್ಕೆ ಅನ್ವಯಿಸಿರಲಿಲ್ಲ. ಈ ಕಾರಣಕ್ಕಾಗಿ, ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ವಿಫಲವಾದವು. ಈಗ ಕಾರುಗಳಿಗಾಗಿ ಗ್ರಾಹಕರು ಹೊಂದಿರುವ ಆಸಕ್ತಿಗಳು ಬದಲಾಗಿವೆ.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಈಗ ಭಾರತದ ಗ್ರಾಹಕರು ವಿಎಫ್‌ಎಂ, ಸ್ಪೇಸ್ ಹಾಗೂ ಆಫ್ಟರ್ ಸೇಲ್ಸ್ ಸರ್ವಿಸ್‍‍ನ ಜೊತೆಗೆ ಕಾರಿನ ವಿನ್ಯಾಸ ಹಾಗೂ ಸೌಂದರ್ಯವನ್ನು ಸಹ ಪ್ರಮುಖ ಅಂಶವೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಆದರೆ, ಈ ಹಿಂದೆ ಆಕರ್ಷಕವಾಗಿದ್ದ ಹಲವು ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗದೇ ಫ್ಲಾಪ್‌ಗಳೆಂದು ಪರಿಗಣಿಸಲ್ಪಟ್ಟವು. ಆ ಕಾರುಗಳು ಯಾವುವೆಂದು ಈ ಲೇಖನದಲ್ಲಿ ನೋಡೋಣ.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಫಿಯೆಟ್ ಪುಂಟೊ ಇವೊ

ಫಿಯೆಟ್ ಪುಂಟೊ ಇವೊ ಆಕರ್ಷಕವಾಗಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಈ ಕಾರಿನಿಂದ ಫಿಯೆಟ್ ಕಂಪನಿಗೆ ಹೆಚ್ಚಿನ ಲಾಭವಾಗಲಿಲ್ಲ. ಕಂಪನಿಯ ಕೆಲವು ತಪ್ಪುಗಳಿಂದಾಗಿ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಲು ವಿಫಲವಾಯಿತು.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಕೈಗೆಟಕುವ ದರದವನ್ನು ಹೊಂದಿದ್ದ ಈ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿದ್ದ ಸಾಲಿಡ್ ಕಾರುಗಳಲ್ಲಿ ಒಂದಾಗಿತ್ತು. 90 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ ಡೀಸೆಲ್ ಎಂಜಿನ್ ಹೊಂದಿದ್ದ ಈ ಕಾರು ಗುಡ್ಡಗಾಡು ಪ್ರದೇಶದಲ್ಲಿ ಉತ್ತಮವಾದ ಪರ್ಫಾಮೆನ್ಸ್ ನೀಡುತ್ತಿತ್ತು. ಪುಂಟೊ ಕಾರು ಹಲವಾರು ಫೀಚರ್‍‍ಗಳನ್ನು ಹೊಂದಿತ್ತು.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ ಆಸ್ಟನ್ ಮಾರ್ಟಿನ್‌ ಕಾರಿನಂತೆ ಕಾಣುತ್ತದೆ. ಆದರೆ ಈ ಕಾರು ಖರೀದಿದಾರರ ಗಮನ ಸೆಳೆಯಲು ವಿಫಲವಾಯಿತು. ಫೋರ್ಡ್ ಫಿಯೆಸ್ಟಾ ತನ್ನ ಫ್ಲಾಶಿ ಲುಕ್‍‍ನಿಂದಾಗಿ ಆಕರ್ಷಕವಾಗಿ ಕಾಣುತ್ತಿತ್ತು. ಸ್ಟೀಯರಿಂಗ್ ಹಾಗೂ ಹ್ಯಾಂಡ್ಲಿಂಗ್‍‍ಗಳು ಅದ್ಭುತವಾಗಿದ್ದವು. ಫಿಯೆಸ್ಟಾದಲ್ಲಿದ್ದ ಸಸ್ಪೆಂಷನ್ ಹದಗೆಟ್ಟ ರಸ್ತೆಗಳಲ್ಲಿ ಹಳಿಗಳ ಮೇಲಿರುವ ರೈಲಿನಲ್ಲಿ ಪ್ರಯಾಣಿಸಿದ ಅನುಭವದಂತಾಗುತ್ತಿತ್ತು.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಫಿಯೆಸ್ಟಾ ಕಾರಿನಲ್ಲಿ 1.5 ಲೀಟರ್ ಟಿಡಿಸಿಐ ​​ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 205 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಆಕರ್ಷಕವಾದ ಈ ಕಾರ್ ಅನ್ನು ಖರೀದಿಸಲು ಯಾರೊಬ್ಬರೂ ಆಸಕ್ತಿ ತೋರಲಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಫಿಯೆಟ್ ಲಿನಿಯಾ

ಫಿಯೆಟ್ ಕಂಪನಿಯ ಈ ಸೆಡಾನ್ ಕಾರಿನಲ್ಲಿ ಸಿ-ಸೆಗ್‍‍ಮೆಂಟಿನಲ್ಲಿರುವ ರೇರ್ ಗಾರ್ಡ್ ಅಳವಡಿಸಲಾಗಿತ್ತು. ಈ ಕಾರಿನಲ್ಲಿ ಅಳವಡಿಸಲಾಗಿದ್ದ ಟಿ-ಜೆಟ್ ಪೆಟ್ರೋಲ್ ಎಂಜಿನ್‍‍ನಿಂದಾಗಿ ಅತ್ಯಾಕರ್ಷಕವಾದ ಆಕ್ಸೆಲೆರೇಷನ್ ನೀಡುವುದರ ಜೊತೆಗೆ ಚಾಲಕರಿಗೆ ಚಾಲನೆಯ ರೋಮಾಂಚನವನ್ನು ನೀಡುತ್ತಿತ್ತು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಫಿಯೆಟ್ ಕಂಪನಿಯು ಈ ಕಾರ್ ಅನ್ನು ಡೀಸೆಲ್ ಎಂಜಿನ್‍‍ನಲ್ಲಿ ಏಕೆ ಬಿಡುಗಡೆಗೊಳಿಸಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಫಿಯೆಟ್ ಕಂಪನಿಯು ಲಿನಿಯಾ ಕಾರಿನ ಬದಲಿಗೆ ಮುಂಬರುವ ದಿನಗಳಲ್ಲಿ ಬೇರೆ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ರೆನಾಲ್ಟ್ ಫ್ಲುಯೆನ್ಸ್

ರೆನಾಲ್ಟ್ ಕಂಪನಿಯು ಭಾರತದಲ್ಲಿ ಆರಂಭದಲ್ಲಿ ಬಿಡುಗಡೆಗೊಳಿಸಿದ್ದ ಕಾರುಗಳಲ್ಲಿ ಫ್ಲುಯೆನ್ಸ್ ಕಾರು ಕೂಡ ಒಂದಾಗಿತ್ತು. ಡಿ ಸೆಗ್‍‍ಮೆಂಟ್‍‍ನ ಸೆಡಾನ್ ಕಾರು ವಿಶಿಷ್ಟವಾದ ಫ್ರೆಂಚ್ ವಿನ್ಯಾಸವನ್ನು ಹೊಂದಿತ್ತು. ಆ ಸಮಯದಲ್ಲಿ ಈ ಸೆಗ್‍‍ಮೆಂಟಿನಲ್ಲಿದ್ದ ಇತರ ಕಾರುಗಳಿಗಿಂತ ಸಾಕಷ್ಟು ಭಿನ್ನವಾಗಿತ್ತು.

ಆಕರ್ಷಕವಾಗಿದ್ದರೂ ಹೆಚ್ಚು ಮಾರಾಟವಾಗದ ಕಾರುಗಳಿವು..!

ಈ ಕಾರು ಗ್ರಾಹಕರನ್ನು ಸೆಳೆಯಲು ವಿಫಲವಾದ ಕಾರಣ 2017ರಲ್ಲಿ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಫ್ಲುಯೆನ್ಸ್ ಪ್ಲಶ್ ರೈಡ್, ಫ್ಯೂಯಲ್ ಎಫಿಶಿಯಂಟ್ ಟರ್ಬೊ ಡೀಸೆಲ್ ಎಂಜಿನ್, ಆಕರ್ಷಕವಾದ ಲುಕ್ ಹೊಂದಿದ್ದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲು ವಿಫಲವಾಯಿತು.

Most Read Articles

Kannada
English summary
Beautiful Flop Cars of India - Read in Kannada
Story first published: Tuesday, October 8, 2019, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X