ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ನೀತಿ ಆಯೋಗದ ಶಿಫಾರಸ್ಸು ಅನ್ವಯ ಈ ಹಿಂದೆ ಡೀಸೆಲ್ ಕಾರುಗಳ ಬದಲಾಗಿ ಎಲೆಕ್ಟ್ರಿಕ್ ಕಾರುಗಳ ಬಳಕೆಯತ್ತ ಮಹತ್ವದ ಹೆಜ್ಜೆಯಿರಿಸಿದ್ದ ಸರ್ಕಾರಿ ಅಧಿಕಾರಿಗಳ ಅಧಿಕೃತ ಕಾರುಗಳ ಆಯ್ಕೆಯಲ್ಲಿ ಇದೀಗ ಮಹತ್ವದ ಬದಲಾವಣೆಯಾಗುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಮುಂಚೂಣಿಯಲ್ಲಿದ್ದ ಟಾಟಾ ಮತ್ತು ಮಹೀಂದ್ರಾ ಸ್ಥಾನದಲ್ಲಿಗ ಹ್ಯುಂಡೈ ಸಂಸ್ಥೆಯು ಸದ್ದು ಮಾಡತೊಡಗಿದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಹೌದು, ಕಳೆದ ಒಂದು ವರ್ಷದಿಂದ ಸರ್ಕಾರಿ ಅಧಿಕಾರಿಗಳ ಅಧಿಕೃತ ಕಾರುಗಳನ್ನು ಡೀಸೆಲ್ ಎಂಜಿನ್‌ನಿಂದ ಎಲೆಕ್ಟ್ರಿಕ್ ಕಾರುಗತ್ತ ಬದಲಾವಣೆ ಮಾಡುತ್ತಿರುವ ಹಿನ್ನಲೆ ಭಾರೀ ಬದಲಾವಣೆ ಕಾರಣವಾಗಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಟಾಟಾ ಮತ್ತು ಮಹೀಂದ್ರಾ ನಿರ್ಮಾಣದ ಟಿಗೋರ್ ಇವಿ ಹಾಗೂ ಇ-ವೆರಿಟೋ ಕಾರುಗಳು ರಸ್ತೆಗಿಳಿದಿವೆ. ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಬೇಡಿಕೆ ಹರಿದು ಬಂದಿರುವುದಲ್ಲದೇ ಈ ಹಿಂದಿನ ಟಾಟಾ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಬಹುತೇಕ ಸರ್ಕಾರಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ನೀತಿ ಆಯೋಗದ ಶಿಫಾರಸ್ಸು ಹಿನ್ನಲೆ ಈ ಹಿಂದೆ ಬೆಲೆ ಕಡಿಮೆ ಎನ್ನುವ ಕಾರಣಕ್ಕೆ ಸಾವಿರಾರು ಮಹೀಂದ್ರಾ ಮತ್ತು ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದ್ದ ಸರ್ಕಾರಿ ಅಧಿಕಾರಿಗಳು ಇದೀಗ ಅದೇ ಕಾರುಗಳನ್ನು ಬಳಕೆ ಹಿಂದೇಟು ಹಾಕುತ್ತಿರುವುದಲ್ಲದೇ ದುಬಾರಿ ಬೆಲೆಯ ಕೋನಾ ಕಾರಿನತ್ತ ಮುಖಮಾಡುತ್ತಿದ್ದಾರೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಅಸಲಿಗೆ ಟಾಟಾ ಮತ್ತು ಮಹೀಂದ್ರಾ ಎಲೆಕ್ಟಿಕ್ ಕಾರುಗಳು ಪ್ರತಿ ಚಾರ್ಜ್‌ಗೆ 110 ಕಿ.ಮೀ ನಿಂದ 130ಕಿ.ಮೀ ಮೈಲೇಜ್ ಪ್ರಮಾಣವನ್ನು ಮಾತ್ರವೇ ಹೊಂದಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್‌ಗಾಗಿ ಕನಿಷ್ಠ 7 ರಿಂದ 8 ಗಂಟೆ ಕಾಲಾವಕಾಶ ತೆಗೆದುಕೊಳ್ಳುತ್ತವೆ, ಹೀಗಾಗಿ ಬೆಲೆ ದುಬಾರಿ ದುಬಾರಿಯಾದರೂ ಅತ್ಯುತ್ತಮ ಮೈಲೇಜ್ ಪ್ರೇರಣೆ ಹೊಂದಿರುವ ಹ್ಯುಂಡೈ ಕೊನಾ ಖರೀದಿಗೆ ಮುಂದಾಗುತ್ತಿದ್ದಾರೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಕೋನಾ ಕಾರು ಬೆಲೆಯಲ್ಲಿ ತುಸು ದುಬಾರಿಯಾದರೂ ಕೂಡಾ ಅತ್ಯುತ್ತಮ ಮೈಲೇಜ್ ಜೊತೆಗೆ ಸುಧಾರಿತ ಗುಣಮಟ್ಟದ ಫೀಚರ್ಸ್, ಗರಿಷ್ಠ ಮಟ್ಟದ ಪ್ರಯಾಣಿಕ ಸುರಕ್ಷಾ ಸೌಲಭ್ಯಗಳು, ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಸೌಲಭ್ಯವು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕೊನಾ ಕಾರು ರೂ.23.71 ಲಕ್ಷ ಬೆಲೆ ಹೊಂದಿದ್ದು, ಪ್ರತಿ ಚಾರ್ಜ್ ಬರೋಬ್ಬರಿ 452 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಪಡೆದಿದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಹೊಸ ಎಲೆಕ್ಟ್ರಿಕ್ ಕಾರು ಸಾಮಾನ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಕೋನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದ್ದು, ಶೇ.80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 52 ನಿಮಿಷ ತೆಗೆದುಕೊಳ್ಳುತ್ತದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಹಾಗೆಯೇ ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

ಟಾಟಾ, ಮಹೀಂದ್ರಾ ಇವಿ ಕಾರುಗಳಿಂತಲೂ ದುಬಾರಿ ಬೆಲೆಯ ಹ್ಯುಂಡೈ ಕೊನಾ ಕಾರಿಗೆ ಹೆಚ್ಚು ಡಿಮ್ಯಾಂಡ್

ಇದೇ ಕಾರಣಕ್ಕೆ ಈ ಹಿಂದೆ ಅನಿವಾರ್ಯವಾಗಿ ಬೇರೆ ಆಯ್ಕೆಗಳಿಲ್ಲದೇ ಟಾಟಾ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಆಯ್ಕೆ ಮಾಡುತ್ತಿದ್ದ ಸರ್ಕಾರಿ ಅಧಿಕಾರಿಗಳು ಇದೀಗ ಹ್ಯುಂಡೈ ಕೊನಾ ಕಾರು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಾದ್ದಾರೆ.

Most Read Articles

Kannada
English summary
Hyundai Kona is the EV of choice for govt, Not Mahindra or Tata. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X