ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ರಾಜ್ಯ ಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು, ಕೇಂದ್ರ ಸರ್ಕಾರವು ವಾಹನಗಳ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳಿಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ರೂ.3 ಕೋಟಿಗೆ ಮಾರಾಟ ಮಾಡುತ್ತಿರುವುದನ್ನು ಬಹಿರಂಗಪಡಿಸಿದೆ. ಈ ರೀತಿಯಾಗಿ ಡೇಟಾವನ್ನು ಮಾರಾಟ ಮಾಡುತ್ತಿರುವ ಸರ್ಕಾರವು ಇದುವರೆಗೂ ಸುಮಾರು ರೂ.65 ಕೋಟಿಗಳಷ್ಟು ಆದಾಯ ಗಳಿಸಿರುವುದಾಗಿ ತಿಳಿಸಿದೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಇತ್ತೀಚೆಗೆ ಆರ್ಥಿಕ ಸಮೀಕ್ಷೆ ಬಿಡುಗಡೆಯಾದಾಗ, ಅದರಲ್ಲಿನ ಒಂದು ನಿಬಂಧನೆಯು ಆದಾಯವನ್ನು ಗಳಿಸಲು ಡೇಟಾವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ತಿಳಿಸಿದೆ. ಸರ್ಕಾರವು ಈಗಾಗಲೇ ಇದನ್ನು ಮಾಡುತ್ತಿರುವಂತಿದೆ. ರಾಜ್ಯಸಭೆಯಲ್ಲಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿರವರು ಭಾರತೀಯರ ವಾಹನ ನೋಂದಣಿ ಹಾಗೂ ಚಾಲನಾ ಪರವಾನಗಿ ಡೇಟಾವನ್ನು ಮಾರಾಟ ಮಾಡಲಾಗುತ್ತಿದ್ದು ಅದರಿಂದಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ರಾಜ್ಯಸಭೆಯಲ್ಲಿ ಸರ್ಕಾರ ನೀಡಿರುವ ಉತ್ತರಗಳಿಂದ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳ ಮಾಹಿತಿಯ ಮಾರಾಟದಿಂದ ಉಂಟಾಗಬಹುದಾದ ಖಾಸಗಿತನದ ಕಾಳಜಿ ಹಾಗೂ ಸವಾಲುಗಳನ್ನು ಹೇಗೆ ನೋಡಿಕೊಳ್ಳಲಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಜ್ಯಸಭೆಯ ಕಾಂಗ್ರೆಸ್ ಸಂಸದ ಹುಸೈನ್ ದಲ್ವಾಯ್ ಅವರು ವಾಹನ್ ಹಾಗೂ ಸಾರಥಿ ಡೇಟಾಬೇಸ್‍‍ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದ್ದರೆ, ಅಂತಹ ಮಾರಾಟದ ಅಂದಾಜು ಆದಾಯದ ಬಗ್ಗೆ ತಿಳಿಸಲು ಕೋರಿದ್ದರು.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಈ ಪ್ರಶ್ನೆಗೆ ಜುಲೈ 8ರಂದು ಮಾಹಿತಿ ನೀಡಿರುವ ಕೇಂದ್ರ ಸರ್ಕಾರವು 87 ಖಾಸಗಿ ಹಾಗೂ 32 ಸರ್ಕಾರಿ ಸಂಸ್ಥೆಗಳಿಗೆ ವಾಹನ್ ಹಾಗೂ ಸಾರಥಿಯ ಡೇಟಾಬೇಸ್‍‍ಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದ್ದು, ಈ ರೀತಿಯ ಅವಕಾಶ ನೀಡಿದ್ದಕ್ಕಾಗಿ ಇದುವರೆಗೂ ರೂ.65 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ. ವಾಹನ್ ಹಾಗೂ ಸಾರಥಿ ಸಾಫ್ಟ್ ವೇರ್‍‍ಗಳು ವಾಹನಗಳ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸುತ್ತವೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ನ್ಯಾಷನಲ್ ಇನ್‍‍ಫಾರ್ಮ್ಯಾಟಿಕ್ಸ್ ಸೆಂಟರ್‍‍ನಿಂದ ಸಂಗ್ರಹಿಸಿ, ಸೆಂಟ್ರಲೈಸ್ಡ್ ನ್ಯಾಷನಲ್ ರಿಜಿಸ್ಟ್ರಿಯನ್ನು ನಿರ್ವಹಿಸುತ್ತದೆ. ಈ ಡೇಟಾ ಬೇಸ್‍‍ನಲ್ಲಿ ಸುಮಾರು 25 ಕೋಟಿಯಷ್ಟು ವಾಹನಗಳ ನೋಂದಣಿಯ ಮಾಹಿತಿ ಹಾಗೂ ಸುಮಾರು 15 ಕೋಟಿಯಷ್ಟು ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೃಹತ್ ದತ್ತಾಂಶ ಹಂಚಿಕೆ ನೀತಿ ಹಾಗೂ ಕಾರ್ಯವಿಧಾನ ಎಂಬ ನಿಯಮವನ್ನು ರಚಿಸಿದ್ದು, ವಾಹನ ನೋಂದಣಿಯ ದೊಡ್ಡ ಗಾತ್ರದ ಡೇಟಾಬೇಸ್ ಅನ್ನು ಕೆಲವೊಂದು ಕ್ಷೇತ್ರಗಳ ಜೊತೆಗೆ ಹಂಚಿಕೊಳ್ಳಲಿದೆ. ಬೃಹತ್ ದತ್ತಾಂಶವನ್ನು ಬಯಸುವ ಸಂಸ್ಥೆಗಳು 2019-20ರ ಹಣಕಾಸು ವರ್ಷದಲ್ಲಿ ರೂ.3 ಕೋಟಿ ನೀಡಿ ಡೇಟಾವನ್ನು ಪಡೆಯಬಹುದು ಎಂದು ಗಡ್ಕರಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಶಿಕ್ಷಣ ಸಂಸ್ಥೆಗಳು ಸಂಶೋಧನಾ ಉದ್ದೇಶಗಳು ಹಾಗೂ ಆಂತರಿಕ ಬಳಕೆಗೆ ಮಾತ್ರ ಈ ಡೇಟಾವನ್ನು ಬಳಸಿಕೊಳ್ಳಬೇಕು. 2019-20ರ ಆರ್ಥಿಕ ವರ್ಷದಲ್ಲಿ ರೂ.5 ಲಕ್ಷಗಳನ್ನು ಪಾವತಿಸಿದ ಶಿಕ್ಷಣ ಸಂಸ್ಥೆಗಳಿಗೆ ಒಂದು ಬಾರಿ ಬೃಹತ್ ಡೇಟಾವನ್ನು ಒದಗಿಸಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ. ಈ ರೀತಿಯಾಗಿ ವಾಹನ್ ಹಾಗೂ ಸಾರಥಿಯ ಡೇಟಾ‍‍ಬೇಸ್‍‍ಗಳಿಗೆ ಆಕ್ಸೆಸ್ ನೀಡಿ ಇದುವರೆಗೂ ರೂ.65 ಕೋಟಿ ಆದಾಯ ಪಡೆಯಲಾಗಿದೆ ಎಂದು ಗಡ್ಕರಿರವರು ತಿಳಿಸಿದ್ದಾರೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಸರ್ಕಾರವು ಕಳವು ಮಾಡಲಾದ ವಾಹನಗಳ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದಿಂದ ಪಡೆದು ವಾಹನ್ ಹಾಗೂ ಸಾರಥಿಗಳ ಜೊತೆಗೆ ಲಿಂಕ್ ಮಾಡಿದೆ. ಭಾರತದಲ್ಲಿ ಖಾಸಗಿ ಮಾಹಿತಿಗಳೂ ಸೇರಿದಂತೆ ಬೃಹತ್ ಪ್ರಮಾಣದ ಡೇಟಾಬೇಸ್‍‍ಗಳನ್ನು ಮಾರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇದುವರೆಗೂ ಡೇಟಾವನ್ನು ಅನಧಿಕೃತವಾಗಿ ಪಡೆದು ಅದನ್ನು ನಾಶ ಪಡಿಸಿರುವುದನ್ನು ನೋಡಿದ್ದೇವೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಕಳಪೆ ದರ್ಜೆಯ ಸೆಕ್ಯೂರಿಟಿ ಹೊಂದಿದ್ದ ವೆಬ್‍‍ಸೈಟ್ ಹಾಗೂ ಸರ್ವರ್‍‍ಗಳಿಂದ ಖಾಸಗಿಯವರು ಅನಧಿಕೃತವಾಗಿ ಮಾಹಿತಿ ಸಂಗ್ರಹಿಸಿ ಅದನ್ನು ಮಾರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಸರ್ಕಾರವೇ ಖುದ್ದಾಗಿ ಡೇಟಾವನ್ನು ಲಾಭಕ್ಕಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಾನ್ಯ ಸುಪ್ರೀಂ ಕೋರ್ಟ್ ಖಾಸಗಿತನವು ಆರ್ಟಿಕಲ್ 21ರ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿದ್ದರೂ, ಭಾರತದಲ್ಲಿ ಖಾಸಗಿ ಡೇಟಾದ ರಕ್ಷಣೆಗಾಗಿ ಯಾವುದೇ ಕಾನೂನು ಜಾರಿಯಲ್ಲಿಲ್ಲ. ಖಾಸಗಿತನವನ್ನು ರಕ್ಷಿಸುವ ಕಟ್ಟುನಿಟ್ಟಿನ ಕಾನೂನು ಇಲ್ಲದ ಕಾರಣ ಹಾಗೂ ಜನರು ಸಹ ಸಾಕಷ್ಟು ಮುಂಜಾಗ್ರತೆ ವಹಿಸದ ಕಾರಣ, ದೇಶದಲ್ಲಿ ಖಾಸಗಿತನವೆಂಬುದು ಹಾಸ್ಯಸ್ಪದವಾಗಿದೆ.

ವಾಹನ ಸವಾರರ ಮಾಹಿತಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯೇ?

ರಾಜ್ಯಸಭೆಯಲ್ಲಿ ಮಾಹಿತಿ ನೀಡಿರುವ ಸರ್ಕಾರವು, ವಾಹನಗಳ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಡೇಟಾಗಳ ಮಾಹಿತಿಯನ್ನು ಪಡೆದ ನಂತರ ಅವುಗಳನ್ನು ಯಾವ ರೀತಿಯಲ್ಲಿ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸಿಲ್ಲ. ಆದರೆ ಈ ರೀತಿಯ ಡೇಟಾಗಳಿಂದ ಆಟೋ ಮೊಬೈಲ್ ಉದ್ಯಮಕ್ಕೆ ಮಾತ್ರವಲ್ಲದೇ, ರಾಜಕೀಯ ಪಕ್ಷಗಳಿಗೆ ಹಾಗೂ ವಿಮಾ ಕಂಪನಿಗಳಿಗೆ ಅನುಕೂಲವಾಗಲಿದೆ.

Most Read Articles

Kannada
English summary
Govt selling vehicle and DL data of Indians for Rs 3 crore, 87 private companies already bought it - Read in kannada
Story first published: Friday, July 12, 2019, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X