ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಭಾರತದಲ್ಲಿ ಕೋಟ್ಯಂತರ ವಾಹನಗಳಿದ್ದು, ಪ್ರತಿ ನಿತ್ಯ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ವಾಹನಗಳು ಜಾಸ್ತಿಯಾದಷ್ಟು ವಾಹನಗಳ ಕಳ್ಳತನದ ಸಂಖ್ಯೆಗಳೂ ಸಹ ಜಾಸ್ತಿಯಾಗುತ್ತಿವೆ. ವಾಹನ ಕಳ್ಳತನವನ್ನು ತಡೆಗಟ್ಟಲು ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ವಾಹನಗಳ ಮಾಲೀಕರ ಅಜಾಗರೂಕತೆಯಿಂದಾಗಿ ವಾಹನಗಳ್ಳರು ಕಳ್ಳತನವನ್ನು ಮುಂದುವರೆಸುತ್ತಲೇ ಇದ್ದಾರೆ. ವಾಹನಗಳ ಕಳ್ಳತನವಾದಾಗ ಅವುಗಳನ್ನು ಪತ್ತೆ ಹಚ್ಚಲು ಜಿ‍‍ಪಿ‍ಎಸ್ ಟ್ರಾಕರ್‍‍ಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಜಿ‍‍ಪಿ‍ಎಸ್‍‍ಗಳನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳವುದು ದುಬಾರಿಯೇನಲ್ಲ. ಆದರೆ ವಾಹನಗಳ ಮಾಲೀಕರು ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ತಿಳಿದಿದ್ದಾರೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಜಿ‍‍ಪಿ‍ಎಸ್ ಇಲ್ಲದ ವಾಹನಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಕಳುವಾದ ವಾಹನಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಿನ ಕೆಲಸ. ಈ ಕಾರಣಕ್ಕೆ ಪೊಲೀಸ್ ಇಲಾಖೆಯು ಹೊಸದಾಗಿ ತಯಾರಾಗಲಿರುವ ಕಾರುಗಳಲ್ಲಿ ಜಿ‍‍ಪಿ‍ಎಸ್‍‍ಗಳನ್ನು ಕಡ್ಡಾಯವಾಗಿ ಅಳವಡಿಸುವಂತಹ ಕಾನೂನನ್ನು ಜಾರಿಗೆ ತರುವ ಆಲೋಚನೆಯಲ್ಲಿದೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಈ ಫೀಚರ್‍ ಅನ್ನು ಹೊಸ ಕಾರುಗಳಲ್ಲಿ ಕಡ್ಡಾಯ ಮಾಡಬೇಕೆಂಬ ಆಲೋಚನೆಯಲ್ಲಿದ್ದಾರೆ. ಗಾಜಿಯಾಬಾದ್ ನಗರವು ವಾಹನಗಳ ಕಳ್ಳತನಕ್ಕೆ ಕುಖ್ಯಾತಿಯನ್ನು ಪಡೆದಿದೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಈ ಬಗ್ಗೆ ಪೊಲೀಸರು ಅಂಬಾವಾಟ್‍‍‍ನಲ್ಲಿರುವ ಕಾರು ಮಾರಾಟಗಾರರ ಬಳಿ ಹೊಸ ಕಾರುಗಳಲ್ಲಿ ಜಿ‍‍ಪಿ‍ಎಸ್ ಅಳವಡಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಕಾರುಗಳಲ್ಲಿ ಜಿ‍‍ಪಿ‍ಎಸ್‍‍ಗಳಿದ್ದರೆ ಕಳುವಾದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂಬುದು ಇದರ ಹಿಂದಿರುವ ಕಾರಣವಾಗಿದೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಈ ಬಗ್ಗೆ ಮಾತನಾಡಿರುವ ಎ‍ಸ್‍ಎಸ್‍‍ಪಿ ಸುಧೀರ್ ಕುಮಾರ್ ಸಿಂಗ್‍‍ರವರು, ಈ ಜಿ‍‍ಪಿ‍ಎಸ್ ಉಪಕರಣಗಳಿಗೆ ಹೆಚ್ಚು ಖರ್ಚಾಗುವುದಿಲ್ಲ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಕಳುವಾದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಕಾರು ಮಾರಾಟಗಾರರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಗಾಜಿಯಾಬಾದ್ ವಾಹನಗಳ ಕಳ್ಳತನಕ್ಕೆ ಕುಖ್ಯಾತಿಯನ್ನು ಪಡೆದಿದ್ದರೂ ಇತ್ತೀಚಿಗೆ ವಾಹನ ಕಳ್ಳತನದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

2018ರ ಜನವರಿಯಿಂದ ಅಕ್ಟೋಬರ್‍‍ವರೆಗೆ 4,341 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷದ ಜನವರಿಯಿಂದ ಅಕ್ಟೋಬರ್‍‍ವರೆಗಿನ ಅವಧಿಯಲ್ಲಿ 3,334 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು ಬಯಸಿದ್ದಾರೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಗಮನಿಸಬೇಕಾದ ಸಂಗತಿಯೆಂದರೆ ಕಾರು ಮಾರಾಟಗಾರರೂ ಸಹ ಪೊಲೀಸರ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾರು ಮಾರಾಟಗಾರರ ಪ್ರಕಾರ ಕೆಲವೇ ಕೆಲವು ಮಂದಿ ಮಾತ್ರ ಜಿಪಿ‍ಎಸ್ ಅಳವಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜಾಗರೂಕತೆಯ ಕೊರತೆಯಿಂದಾಗಿ ಅಳವಡಿಸಿಕೊಳ್ಳುವುದಿಲ್ಲ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಕಾರು ಡೀಲರ್ ಸಿಬ್ಬಂದಿಯೊಬ್ಬರು ಹೇಳುವಂತೆ ಜಿ‍‍ಪಿ‍ಎಸ್ ಅಳವಡಿಸಲು ಸುಮಾರು ರೂ.10,000 ಖರ್ಚಾಗುತ್ತದೆ. ಕಾರು ಖರೀದಿಸುವ 10 ಜನರಲ್ಲಿ ಕೇವಲ 4 ಜನರು ಮಾತ್ರ ಜಿ‍‍ಪಿ‍ಎಸ್ ಅಳವಡಿಸಿಕೊಳ್ಳುತ್ತಾರೆ.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಈ ಉಪಕರಣವು ಕಾರು ಕಳುವಾದಾಗ ಕಾರು ಇರುವ ಸ್ಥಳವನ್ನು ತೋರಿಸುವುದರ ಜೊತೆಗೆ ಅಪಘಾತವಾದಾಗ ಕುಟುಂಬ ಸದಸ್ಯರಿಗೆ ಹಾಗೂ ಕಾರು ಗ್ರಾಹಕ ಸೇವಾ ಕೇಂದ್ರಕ್ಕೆ ಅಲರ್ಟ್ ನೀಡುತ್ತದೆ. ಜಿ‍ಪಿ‍ಎಸ್‍‍ನಲ್ಲಿರುವ ಮತ್ತೊಂದು ಉಪಯೋಗವೆಂದರೆ ನೀವು ನಿಮ್ಮ ಕಾರಿನ ದೂರವನ್ನು ನಿಗದಿಪಡಿಸಬಹುದು.

ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ನಿಗದಿಪಡಿಸಿರುವುದಕ್ಕಿಂತ ಹೆಚ್ಚು ದೂರ ಹೋದರೆ ನಿಮ್ಮನ್ನು ಎಚ್ಚರಿಸುತ್ತದೆ. ಗ್ರಾಹಕರಿಗೆ ಈ ಉಪಕರಣವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದರು. ಆದರೆ ಗ್ರಾಹಕರು ಈ ಪ್ರಯೋಜನಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಪ್ರತ್ಯೇಕ ವೆಚ್ಚವಾಗುವುದರಿಂದ ಇದರ ಅವಶ್ಯಕತೆವಿಲ್ಲವೆಂದು ಹೇಳುತ್ತಾರೆ.

Most Read Articles

Kannada
English summary
GPS trackers mandatory for new cars soon - Read in Kannada
Story first published: Wednesday, October 9, 2019, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X