ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಭಾರತದಲ್ಲಿ ಕಳೆದ ಒಂದು ವರ್ಷದಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದರೂ ಸಹ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಹೊಸ ಕಾರುಗಳನ್ನು ಮಾರಾಟ ಮಾಡಿವೆ. ಇದೀಗ ಇದೇ ಹಾದಿಯಲ್ಲಿರುವ ಮತ್ತೊಂದು ಕಾರು ಉತ್ಪಾದನಾ ಸಂಸ್ಥೆಯು ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಹೌದು, ಚೀನಾ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗುತ್ತಿದ್ದು, ವಿವಿಧ ಕಾರು ಮಾದರಿಗಳ ಮೂಲಕ ಆಟೋ ಉದ್ಯಮದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ. ಇದಕ್ಕೂ ಮುನ್ನ ಮಾರುಕಟ್ಟೆ ಅಧ್ಯಯನ ನಡೆಸಿರುವ ಗ್ರೇಟ್ ವಾಲ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆಯಲಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಸದ್ಯಕ್ಕೆ ಹೊಸ ಕಾರು ಉತ್ಪಾದನಾ ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಲಿದೆ ಎನ್ನುವ ಕುರಿತು ಸ್ಪಷ್ಟನೆ ನೀಡದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ದಕ್ಷಿಣ ಭಾರತದತ್ತ ಮುಖಮಾಡಿದ್ದು, ಸೂಕ್ತ ಮೂಲಭೂತ ಸೌಕರ್ಯ ಒದಗಿಸುವ ರಾಜ್ಯಗಳಲ್ಲಿ ಹೊಸ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಸದ್ಯ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಬೆಂಗಳೂರು ಪ್ರಮುಖ ಆಕರ್ಷಣೆಯಾಗಿದ್ದು, ಅಂತಿಮವಾಗಿ ಹೊಸ ಕಾರು ಉತ್ಪಾದನಾ ಘಟಕವು ಯಾವ ರಾಜ್ಯದ ಪಾಲಾಗುತ್ತೆ ಎನ್ನುವುದೇ ಕಾಯ್ದುನೋಡಬೇಕಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

7 ಸಾವಿರ ಕೋಟಿ ಹೂಡಿಕೆಗೆ ಸಿದ್ದತೆ

ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಚೀನಿ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳು ಮತ್ತು ಅಧಿಕ ಸಾಮಾರ್ಥ್ಯದ ಆಫ್ ರೋಡ್ ಪಿಕ್ಅಪ್ ಟ್ರಕ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ತನ್ನ ಕಾರುಗಳ ಮಾರಾಟ ಸರಣಿಯನ್ನು ಪರಿಚಯಿಸಲು ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಜೊತೆಗೆ ಭಾರತದಿಂದಲೇ ಕಾರು ರಫ್ತು ಮಾಡಲು ಉದ್ದೇಶಿಸಿರುವ ಗ್ರೇಟ್ ವಾಲ್ ಸಂಸ್ಥೆಯು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಯಲ್ಲಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಭಾರತದಲ್ಲಿ ಸದ್ಯ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ರಫ್ತು ಪ್ರಮಾಣವನ್ನು ಹೆಚ್ಚಿಸಲು ಹಲವಾರು ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಮೊದಲ ಹಂತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್‌(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲಿದೆ.

MOST READ: ನಮ್ಮ ಬೆಂಗಳೂರು ತಲುಪಿದ ವೆಲ್‌ಫೈರ್- ಹೊಸ ಕಾರು ಬಿಡುಗಡೆಗೆ ಟೊಯೊಟಾ ಭರ್ಜರಿ ತಯಾರಿ..!

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಇನ್ನು ಗ್ರೇಟ್ ವಾಲ್ ಸಂಸ್ಥೆಯ ಕಾರು ಉತ್ಪನ್ನಗಳ ಬಗೆಗೆ ಹೇಳುವುದಾದರೇ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಇದರಲ್ಲಿ ಈಗಾಗಲೇ ಗ್ರೇಟ್ ವಾಲ್ ಅಂಗಸಂಸ್ಥೆಯಾದ ಹವಾಲ್ ನಿರ್ಮಾಣದ ಹೆಚ್6 ಎನ್ನುವ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯಾಗಿ ಹೆಚ್6 ರಸ್ತೆಗಿಳಿಯಲಿದೆ.

MOST READ: ಈ 6 ಕಾರಣಗಳಿಂದಾಗಿ ಫುಲ್ ಫೇಮಸ್ ಆಯ್ತು ಕಿಯಾ ಸೆಲ್ಟೊಸ್

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಹೆಚ್6 ಕಾರು ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18 ಲಕ್ಷ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿದ್ದು, ಫಾರ್ಚೂನರ್ ಮಾದರಿಯಲ್ಲಿ ವಿನ್ಯಾಸದೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಸದ್ದು ಮಾಡಲಿದೆ.

ಕಿಯಾ ಮತ್ತು ಎಂಜಿ ನಂತರ ಭಾರತದಲ್ಲಿ ಸದ್ದು ಮಾಡಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಮಾಹಿತಿಗಳ ಪ್ರಕಾರ ಹೊಸ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು 2022ರಿಂದ ಅಧಿಕೃತವಾಗಿ ಮಾರಾಟ ಆರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Chinese auto manufacturer, Great Wall Motors, has just registered its Indian subsidiary, Haval Motor India, and is planning to dedicate up to Rs 7,000 crore in order to make a presence felt, and dominate the Indian market.
Story first published: Wednesday, November 13, 2019, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X