ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಸಂಬಂಧ ಹತ್ತಾರು ಬೃಹತ್ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆ ತರುತ್ತಿದೆ. ಡೀಸೆಲ್ ಎಂಜಿನ್ ಬಸ್‌ಗಳನ್ನು ಸಂಖ್ಯೆಗಳನ್ನು ತಗ್ಗಿಸುತ್ತಿರುವ ಬೆನ್ನಲ್ಲೇ ವಿವಿಧ ನಗರಗಳಲ್ಲಿನ ಪ್ರಯಾಣಿಕ ಓಡಾಟಕ್ಕಾಗಿ ಬರೋಬ್ಬರಿ 5,559 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುತ್ತಿದೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯ ಅವಶ್ಯಕತೆಯಿದ್ದು, ಮಾಲಿನ್ಯ ಪ್ರಮಾಣದಲ್ಲಿ ಗರಿಷ್ಠ ಪಾಲು ಹೊಂದಿರುವ ಡೀಸೆಲ್ ಎಂಜಿನ್‌ ಬಳಕೆಯನ್ನು ತಗ್ಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಅಡಿ ಬರೋಬ್ಬರಿ 10 ಸಾವಿರ ಕೋಟಿ ವ್ಯಯ ಮಾಡುತ್ತಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಾಗಿ ಅತ್ಯುತ್ತಮ ಮೈಲೇಜ್ ಪ್ರೇರಿತ 5,559 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರವು ದೇಶದ 69 ಪ್ರಮುಖ ನಗರಗಳಿಗಾಗಿ 5,559 ಎಲೆಕ್ಟ್ರಿಕ್ ಬಸ್‌ಗಳನ್ನು ಫೇಮ್ 2 ಯೋಜನೆ ಅಡಿ ಮಂಜೂರು ಮಾಡಿದ್ದು, ಇದರಲ್ಲಿ 5,095 ಎಲೆಕ್ಟ್ರಿಕ್ ಬಸ್‌ಗಳು ನಗರ ಸಾರಿಗೆಗಾಗಿ, 400 ಎಲೆಕ್ಟ್ರಿಕ್ ಬಸ್‌ಗಳು ಇಂಟರ್ ಸಿಟಿ ಸಂಪರ್ಕಕ್ಕಾಗಿ ಮತ್ತು ಇನ್ನುಳಿದ 100 ಎಲೆಕ್ಟ್ರಿಕ್ ಅಂತರ್‌ರಾಜ್ಯ ಸಂಪರ್ಕಕ್ಕಾಗಿ ಬಳಕೆಯಾಗಲಿವೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿ ಬೃಹತ್ ಬೆಂಗಳೂರಿಗೂ ಸುಮಾರು 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಮಂಜೂರು ಆಗುವ ಸಾಧ್ಯತೆಗಳಿದ್ದು, ಅಂತರ್ ರಾಜ್ಯ ಎಲೆಕ್ಟ್ರಿಕ್ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸುವ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಅಧೀನಕ್ಕೆ ಒಳಪಡಲಿವೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಇನ್ನು ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಅಡಿ ಮುಂದಿನ ಎರಡು ವರ್ಷಗಳ ಅವಧಿಗಾಗಿ ಬರೋಬ್ಬರಿ ರೂ.10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಸುವ ಗ್ರಾಹಕರಿಗೆ ಸಬ್ಸಡಿ ಸೇರಿದಂತೆ ಚಾರ್ಜಿಂಗ್ ನಿರ್ಮಾಣ ಮಾಡುವ ಖಾಸಗಿ ಸಹಭಾಗಿತ್ವದ ಸಂಸ್ಥೆಗಳಿಗೂ ಸಹ ಸಬ್ಸಡಿ ನೀಡುತ್ತಿರುವುದು ಎಲೆಕ್ಟ್ರಿಕ್ ವಾಹನಗಳ ಕಾರ್ಯಾಚರಣೆಗೆ ಸಹಕಾರಿಯಾಗುತ್ತಿದೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಕೇಂದ್ರ ಸರ್ಕಾರವು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಗೆ ಸಹಕಾರಿಯಾಗುವಂತೆ ಜಿಎಸ್‌ಟಿ ದರವನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಿರುವುದು ಸಾಕಷ್ಟು ಸಹಕಾರಿಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಎಲೆಕ್ಚ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ವಾಹನಗಳ ಬೆಲೆಯನ್ನು ಇಳಿಕೆ ಮಾಡಿ ಮಾರಾಟ ಮಾಡುತ್ತಿವೆ.

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟದ ಮೇಲೆ ಹೆಚ್ಚಿನ ಮಟ್ಟದ ಸೆಸ್ ಸೇರಿದಂತೆ ದುಬಾರಿ ನೋಂದಣಿ ಶುಲ್ಕ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಅದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕ್ರಮಕೈಗೊಳ್ಳುತ್ತಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಕೇಂದ್ರ ಸರ್ಕಾರದ ಹೊಸ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಜಿಎಸ್‌ಟಿ ದರ ಕಡಿತ ಯೋಜನೆಯನ್ನು ಅಗಸ್ಟ್ 1ರಿಂದಲೇ ಅಧಿಕೃತವಾಗಿ ಜಾರಿಗೊಳಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿರುವ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆಗೆ ಮುನ್ನಡಿ ಬರೆದಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಇವಿ ಖರೀದಿ ಮೇಲೆ ತೆರಿಗೆ ವಿನಾಯ್ತಿ..!

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ಸಹ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

MOST READ: ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ಫೇಮ್ 2 ಯೋಜನೆ ಅಡಿ ಸಬ್ಸಡಿ ಸೇರಿದಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ಹಣ ವಿನಿಯೋಗ ಮಾಡಲಾಗುತ್ತಿದ್ದು, ಇದೀಗ ಜಿಟಿಎಸ್ ತಗ್ಗಿಸಿರುವುದು ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಿಲಿದೆ.

Most Read Articles

Kannada
English summary
Govt Sanctions 5,595 Electric Buses in 64 Cities Under 2nd Phase of FAME Scheme.
Story first published: Saturday, August 10, 2019, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X