ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಕಳೆದ 19 ವರ್ಷಗಳಲ್ಲಿ ಮೊದಲ ಬಾರಿಗೆ ಭಾರೀ ಹಿನ್ನಡೆ ಅನುಭವಿಸಿರುವ ಭಾರತೀಯ ಆಟೋ ಉದ್ಯಮವನ್ನು ಮತ್ತೆ ಹಳಿಗೆ ತರಲು ಕೇಂದ್ರ ಸರ್ಕಾರವು ಕೆಲವು ಮಹತ್ವ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದ್ದು, ಇಂಧನ ಆಧರಿತ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸುವ ಸುಳಿವು ನೀಡಿದೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಸತತ ಕುಸಿತದಿಂದಾಗಿ ಕಂಗೆಟ್ಟಿರುವ ಭಾರತೀಯ ಆಟೋಮೊಬೈಲ್ ಉದ್ಯಮ ಚೇತರಿಕೆಗಾಗಿ ಹಲವು ಸುತ್ತಿನ ಮಾತಕತೆಯ ನಂತರ ಜಿಎಸ್‌ಟಿ ಇಳಿಕೆ ಬಗ್ಗೆ ಸುಳಿವು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸದ್ಯ ಹೊಸ ಇಂಧನ ಆಧರಿತ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಶೇ.28 ಜಿಎಸ್‌ಟಿ ಪ್ರಮಾಣವನ್ನು ಶೀಘ್ರವೇ ಜಾರಿಗೆ ಬರುವಂತೆ ಹೊಸ ದರಗಳನ್ನು ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಆಟೋಮೊಬೈಲ್ ಕ್ಷೇತ್ರದ ಕುಸಿತವು ದೇಶದ ಒಟ್ಟಾರೆ ಆರ್ಥಿಕ ಕ್ಷೇತ್ರದ ಕುಸಿತದ ಪ್ರತಿಬಿಂಬವಾಗಿದ್ದು, ಆಟೋ ಉದ್ಯಮವನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿರುವ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಪುನರುಚ್ಚರಿಸಿದ್ದಾರೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಇದರ ಜೊತೆಗೆ ಇಂಧನ ಆಧರಿತ ವಾಹನಗಳನ್ನು ನಿರ್ಬಂಧಿಸುವ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಜಾರಿಗೆ ತರಲಾಗಿದ್ದ ನೋಂದಣಿ ಶುಲ್ಕ ಹೆಚ್ಚಳ, ದುಬಾರಿ ಸೆಸ್ ಸೇರಿದಂತೆ ಹಲವು ಕಠಿಣ ಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದ್ದು, ಜಿಎಸ್‌ಟಿ ಪ್ರಮಾಣವನ್ನು ತಗ್ಗಿಸಿದ್ದಲ್ಲಿ ಹೊಸ ವಾಹನಗಳ ಬೆಲೆಯು ಗಣನೀಯವಾಗಿ ತಗ್ಗಲಿದೆ ಎಂದಿದ್ದಾರೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಇನ್ನು ಭವಿಷ್ಯ ವಾಹನಗಳ ಮಾದರಿಯಾದ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ವಿಶೇಷ ಆದ್ಯತೆಯನ್ನು ಮುಂದುವರಿಸುವ ಬಗ್ಗೆಯು ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವರು, ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಹಂತ ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಕಡಿತಗೊಳಿಸುವುದು ನಿಶ್ಚಿತ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಜೊತೆ ಜೊತೆಗೆ ಬಿಎಸ್-4 ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಮುಂದುವರಿಯಲಿದ್ದು, 2020 ಏಪ್ರಿಲ್ 1ರ ನಂತರ ಬಿಎಸ್-6 ನಿಯಮ ಜಾರಿಗೆಯಾಗಲಿದೆ ಎಂದಿದ್ದಾರೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಹಳೆಯ ವಾಹನಗಳಿಗೆ ಹೊಸ ಸ್ಕ್ರ್ಯಾರ್ಪಿಂಗ್ ನೀತಿ?

ಹೊಸ ವಾಹನಗಳ ಜೊತೆಗೆ ಮಾಲಿನ್ಯ ಉತ್ಪಾದನೆಯನ್ನು ಪರಿಣಾಮಕಾರಿ ತಗ್ಗಿಸುವುದನ್ನು ಪ್ರಮುಖ ಯೋಜನೆಯಾಗಿ ಘೋಷಿಸುತ್ತಿರುವ ಕೇಂದ್ರ ಸರ್ಕಾರವು ಶೀಘ್ರದಲ್ಲೇ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹೊಸ ಸ್ಕ್ರಾರ್ಪಿಂಗ್ ನೀತಿ ಅಡಿ ಗುಜುರಿ ಸೇರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಬಗ್ಗೆ ಸುಳಿವು ನೀಡಿದೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಇದರಿಂದ ಹೊಸ ವಾಹನಗಳ ಅಭಿವೃದ್ದಿ ಹಾಗೂ ಮಾರಾಟವು ಹೆಚ್ಚಳವಾಗುವುದರೊಂದಿಗೆ ಸ್ಕ್ರಾರ್ಪಿಂಗ್‌ನಿಂದ ಬಂದ ಬೀಡಿಭಾಗಗಳ ಮರುಬಳಕೆಯಿಂದಾಗಿಯೂ ಹೊಸ ವಾಹನ ಉತ್ಪಾದನಾ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದು ಎನ್ನಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ವಾಹನ ಸಾಲದ ಬಡ್ಡಿದರ ಇಳಿಕೆ

ಗ್ರಾಹಕರಿಗೆ ಹೊಸ ವಾಹನಗಳ ಖರೀದಿಗೆ ಸಹಕಾರಿಯಾಗುವಂತೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಮತ್ತು ಎಲೆಕ್ಟ್ರಿಕ್ ವಾಹನ ಮಾರಾಟದ ಮೇಲೂ ಹೆಚ್ಚು ಗಮನಹರಿಸುತ್ತಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರವು ಭವಿಷ್ಯ ವಾಹನಗಳ ಮೇಲೆ ಹೆಚ್ಚು ಗಮನಹರಿಸುವಂತೆ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಮಹತ್ವದ ಸೂಚನೆ ನೀಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಎಲೆಕ್ಟ್ರಿಕ್ ವಾಹನಗಳ ಮೇಲೆ ಜಿಎಸ್‌ಟಿ ಪ್ರಮಾಣವನ್ನು ಕಳೆದ ಕೆಲದಿನಗಳ ಹಿಂದಷ್ಟೇ ಶೇ. 12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಇದರೊಂದಿಗೆ ಆದಾಯ ತೆರಿಗೆಯಲ್ಲಿ ರೂ.1.50 ಲಕ್ಷದ ತನಕ ವಿನಾಯ್ತಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಸರ್ಕಾರಿ ಇಲಾಖೆಗಳಿಗೆ ಹೊಸ ವಾಹನಗಳನ್ನು ಖರೀದಿಸಲು ಮತ್ತು ಹಳೆಯ ವಾಹನಗಳನ್ನು ಬದಲಿಸಲು ಹಾಕಲಾಗಿದ್ದ ನಿಷೇಧವನ್ನು ತೆಗೆದುಹಾಕಲಾಗಿದೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಕೆಲ ದಿನಗಳ ಹಿಂದಷ್ಟೇ ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿತ್ತು.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಜೊತೆಗೆ ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಹೊಸ ವಾಹನ ಮಾರಾಟದ ಮೇಲೆ ಅಷ್ಟೇ ಅಲ್ಲದೇ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೂ ಇದು ಪರಿಣಾಮ ಬೀರಿತ್ತು. ಹೊಸ ವಾಹನಗಳ ಮಾರಾಟ ಪ್ರಮಾಣವು 2019ರ ಆರಂಭದಿಂದಲೇ ಕುಸಿತ ಕಾಣುತ್ತಿದ್ದು, ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಕರ ವಾಹನಗಳ ಮಾರಾಟ ಪ್ರಮಾಣವು ಶೇ.30ಕ್ಕೆ ಕುಸಿತ ಕಂಡಿದೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

2018ರ ಜುಲೈ ಅವಧಿಗೂ 2019ರ ಜುಲೈ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದ್ದಲ್ಲಿ, ಕಳೆದ ವರ್ಷದ ಜುಲೈನಲ್ಲಿ ಒಟ್ಟು 2,90,931 ಪ್ರಯಾಣಿಕ ವಾಹನಗಳು ಮಾರಾಟವಾದರೇ ಪ್ರಸಕ್ತ ವರ್ಷದ ಜುಲೈ ಅವಧಿಯಲ್ಲಿ ಕೇವಲ 2,00,790 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ.

ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಈ ಹಿನ್ನಲೆ ಆಟೋ ಉದ್ಯಮದ ಕುಸಿತವನ್ನು ತಡೆಯಲು ಮಧ್ಯಪ್ರವೇಶಿಸಿರುವ ಕೇಂದ್ರ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಆಟೋಉದ್ಯಮವು ಮತ್ತೆ ಹಳಿಗೆ ಬರುವ ವಿಶ್ವಾಸ ವ್ಯಕ್ತವಾಗಿದೆ.

Most Read Articles

Kannada
English summary
GST Rates On Automobiles To Be Reduced To Boost Sales In Auto Sector. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X