ಹೊಸ ಟ್ರಾಫಿಕ್ ರೂಲ್ಸ್ ಜಾರಿ - ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಜೇಬು ಖಾಲಿಯಾಗುವುದು ಗ್ಯಾರಂಟಿ..

ದೇಶಾದ್ಯಂತ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇವೆ. ಹೀಗಾಗಿ ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಹೌದು, ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು, ಬೇರೊಬ್ಬರು ಮಾಡುವ ತಪ್ಪಿನಿಂದಾಗಿ ಅಪಘಾತಗಳಲ್ಲಿ ಅಮಾಕರೇ ಹೆಚ್ಚು ಜೀವಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯಿದ್ದ ದಂಡದ ಮೊತ್ತಗಳನ್ನು ದುಪ್ಪಟ್ಟು ಮಾಡಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುವ ಪ್ರವೃತ್ತಿಯನ್ನು ತಡೆಯಲು ಈ ಹೊಸ ಅಸ್ತ್ರವು ಪರಿಣಾಮಕಾರಿಯಾಗಲಿದೆ ಎಂದು ಹೇಳಲಾಗಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಹಾಗಾದರೆ, ಹೊಸ ನಿಯಮದನ್ವಯ ಯಾವ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ಎಷ್ಟು ದಂಡ ವಿಧಿಸಲಾಗುತ್ತೆ ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ. ಇದರಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದ್ದು, ವಾಹನ ಸವಾರರು ಮತ್ತೊಮ್ಮೆ ತಪ್ಪು ಮಾಡುವುದಕ್ಕೆ ಮುಂಚೆ ಹತ್ತು ಬಾರಿ ಯೋಚಿಸುವಂತಿವೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಸ್ಪೀಡ್ ಡ್ರೈವಿಂಗ್

ನಗರ ಪ್ರದೇಶಗಳಲ್ಲಿ ದಿನನಿತ್ಯದ ವಾಹನ ದಟ್ಟಣೆ ಮಧ್ಯೆದಲ್ಲೂ ಬಹುತೇಕ ವಾಹನ ಸವಾರರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಪ್ರಮಾಣಕ್ಕೆ ಮುಂದಾಗುತ್ತಾರೆ. ಇದು ಅಪಘಾತಗಳಿಗೆ ಮೊದಲ ಹೆಜ್ಜೆಯಾಗಿದ್ದು, ಇಂದಿನಿಂದ ನೀವು ವೇಗವಾಗಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ರೂ.1 ಸಾವಿರ ದಂಡ ಪಾವಸಿಬೇಕಾಗುತ್ತೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ರ‍್ಯಾಶ್ ಡ್ರೈವಿಂಗ್

ಇಂದಿನ ಯುವಕರಿಗೆ ರ‍್ಯಾಶ್ ಡ್ರೈವ್ ಮಾಡುವುದು ಅಂದ್ರೆ ಒಂದು ಥರಾ ಕ್ರೇಜ್. ಆದ್ರೆ ಇದರಿಂದ ಅದೆಷ್ಟೋ ಅಮಾಯಕರು ಪ್ರಾಣಕಳೆದುಕೊಂಡಿದ್ದಾರೆ. ರ‍್ಯಾಶ್ ಡ್ರೈವಿಂಗ್ ವಿರುದ್ಧ ಇದೀಗ ಕಠಿಣ ಕ್ರಮ ಜರಗಿಸಲಾಗುತ್ತಿದ್ದು, ರ‍್ಯಾಶ್ ಡ್ರೈವಿಂಗ್ ವೇಳೆ ಒಂದನೇ ಬಾರಿ ಸಿಕ್ಕಿಬಿದ್ದಲ್ಲಿ ರೂ.1 ಸಾವಿರ, 2ನೇ ಬಾರಿ ಸಿಕ್ಕಿಬಿದ್ದಲ್ಲಿ 2 ಸಾವಿರ ಹಾಗೂ 3ನೇ ಸಿಕ್ಕಿಬಿದ್ದಲ್ಲಿ ಚಾಲನಾ ಪರವಾನಿಗೆಯನ್ನೇ ರದ್ದುಗೊಳಿಸಲಾಗುತ್ತದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದಾಗೊಳಿಸಿದ ನಂತರವೂ ವಾಹನ ಚಾಲನೆಗೆ ಮುಂದಾದ್ದಲ್ಲಿ ಜೈಲಿಗೂ ಹೋಗುವ ಪರಿಸ್ಥಿತಿ ಎದುರಾಗಬಹುದಾಗಿದ್ದು, ಇಲ್ಲವೇ ಭಾರೀ ಪ್ರಮಾಣದ ದಂಡವನ್ನು ತೆರಬೇಕಾಗುತ್ತೆ. ಹೀಗಾಗಿ ರ‍್ಯಾಶ್ ಡ್ರೈವಿಂಗ್ ಮಾಡುವ ಹುಚ್ಚು ಸಹವಾಸಕ್ಕೆ ಇಂದೇ ಗುಡ್ ಬೈ ಹೇಳುವುದು ಒಳಿತು.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಚಾಲನೆ ವೇಳೆ ಮೊಬೈಲ್ ಬಳಿಕೆ

'ಒಂದು ಕೈಯಲ್ಲಿ ವಾಹನ ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್' ಇದು ಎಲ್ಲಾ ಕಡಿಗೂ ಕಂಡುಬರುವ ಸಾಮಾನ್ಯ ದೃಶ್ಯ. ಆದ್ರೆ ಇದರಿಂದ ಆಗುವ ಅನಾಹುತಗಳು ಮಾತ್ರ ಅಷ್ಟಿಷ್ಟಲ್ಲ. ಹೀಗಾಗಿ ಇನ್ಮುಂದೆ ಮೊಬೈಲ್‌ನಲ್ಲಿ ಹಾಯ್ ಆಗಿ ಮಾತನಾಡಿಕೊಂಡುವ ಪ್ರವೃತ್ತಿಯನ್ನು ಬಿಟ್ಟುಬಿಡುವುದು ಎಲ್ಲರಿಗೂ ಒಳ್ಳೆಯದು.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಒಂದು ವೇಳೆ ಮೊಬೈಲ್ ಬಳಸಿದ್ರೆ ಎನಾಗುತ್ತೆ ಎನ್ನುವ ಹುಚ್ಚು ಧೈರ್ಯವಿದ್ದಲ್ಲಿ ಜೇಬು ಗಟ್ಟಿಯಾಗಿರಲಿ. ಯಾಕೆಂದ್ರೆ ಹೊಸ ನಿಯಮದನ್ವಯ ಒಂದೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ ರೂ.1 ಸಾವಿರ, 2ನೇ ಬಾರಿ ಸಿಕ್ಕಿಬಿದ್ದಲ್ಲಿ 2 ಸಾವಿರ ಮತ್ತು ಮೂರನೇ ಬಾರಿಗೂ ಸಿಕ್ಕಿಬಿದ್ದಲ್ಲಿ ಅಧಿಕ ಮೊತ್ತದ ದಂಡದ ಜೊತೆಗೆ ಲೈಸೆನ್ಸ್ ಕೂಡಾ ಕೆಲದಿನಗಳ ಮಟ್ಟಿಗೆ ರದ್ದಾಗುತ್ತೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ವಿಮೆ ಇಲ್ಲದೇ ವಾಹನ ಚಾಲನೆ

ಪ್ರತಿಯೊಂದು ವಾಹನಕ್ಕೂ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ) ಇನ್ಸುರೆನ್ಸ್ ಹೊಂದಿರುವುದು ಈಗಾಗಲೇ ಕಡ್ಡಾಯವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಗಾಯಾಳು ಅಥವಾ ಸಾವನ್ನಪ್ಪಿದ ಬಲಿಪಶುಗೆ ಪರಿಹಾರ ಒದಗಿಸಲು ಇದು ಸಹಕಾರಿಯಾಗಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಇನ್ಸುರೆನ್ಸ್ ಖರೀದಿಸಿ ಇಲ್ಲವಾದ್ರೆ ರೂ.1 ಸಾವಿರ ದಂಡ ಖಾಯಂ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ರಾಂಗ್ ಪಾರ್ಕಿಂಗ್

ಹೆಚ್ಚುತ್ತಿರುವ ಹೊಸ ವಾಹನಗಳ ಸಂಖ್ಯೆಯಿಂದಾಗಿ ನಗರ ಪ್ರಮುಖ ರಸ್ತೆಗಳಲ್ಲಿ ಅತಿ ಟ್ರಾಫಿಕ್ ದಟ್ಟಣೆ ಕಂಡುಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣವೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್ ಮಾಡುವುದು ಒಂದಾಗಿದೆ. ಹೀಗಾಗಿ ರಾಂಗ್ ಸೈಡ್‌ನಲ್ಲಿ ಪಾರ್ಕ್ ಮಾಡುವ ವಾಹನಗಳಿಗೆ ರೂ.1 ಸಾವಿರ ದಂಡ ವಿಧಿಸಲಾಗುತ್ತಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಆ್ಯಂಬುಲೆನ್ಸ್‌ಗೆ ಅಡ್ಡಿ

ರೋಗಿಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ಸೇರಿಸುವಲ್ಲಿ ಆ್ಯಂಬುಲೆನ್ಸ್‌ಗಳ ಪಾತ್ರ ದೊಡ್ಡದು. ಆದ್ರೆ ರೋಗಿಗಳ ಆಕ್ರಂದನಕ್ಕೂ ಮರುಗದ ಕೆಲವರು ಆ್ಯಂಬುಲೆನ್ಸ್‌ಗೂ ದಾರಿ ಮಾಡಿಕೊಡದೇ ಅಡ್ಡಿಪಡಿಸುವ ಅದೆಷ್ಟೋ ಪ್ರಕರಣಗಳು ದಿನಂಪ್ರತಿ ನಡೆಯುತ್ತಿರುತ್ತವೆ. ಹೀಗಾಗಿ ಆ್ಯಂಬುಲೆನ್ಸ್‌ಗಳಿಗೆ ಅಡ್ಡಿಪಡಿಸುವ ವಾಹನ ಸವಾರರಿಗೆ ರೂ.10 ಸಾವಿರ ತನಕ ದಂಡವಿಧಿಸುವ ಅವಕಾಶವಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಹೆಲ್ಮೆಟ್‌ಯಿಲ್ಲದೇ ಚಾಲನೆ ಮತ್ತು ಸಿಗ್ನಲ್ ಜಂಪ್

ಬಹುತೇಕ ಬೈಕ್ ಸವಾರರು ಟ್ರಾಫಿಕ್ ಪೊಲೀಸರು ಇರುವ ಕಡೆಗಳಲ್ಲಿ ಮಾತ್ರವೇ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆದ್ರೆ ನಮ್ಮದೇ ಜೀವ ಕಾಪಾಡಲು ಇರುವ ಹೆಲ್ಮೆಟ್ ಬಳಕೆ ಮಾಡದೇ ಸಿಕ್ಕಿಬಿದ್ದಲ್ಲಿ ಈ ಹಿಂದೆ ಇದ್ದ ರೂ.100 ದಂಡವನ್ನು ಇದೀಗ ರೂ.500ಕ್ಕೆ ಏರಿಕೆ ಮಾಡಲಾಗಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಹಾಗೆಯೇ ಸಿಗ್ನಲ್ ಜಂಪ್ ಪ್ರಕರಣಗಳನ್ನು ಕೂಡಾ ಗಂಭೀರವಾಗಿ ಪರಿಣಮಿಸಿರುವ ಟ್ರಾಫಿಕ್ ಪೊಲೀಸರು ಸಿಸಿಟಿವಿ ಮೂಲಕ ಸಿಗ್ನಲ್ ಜಂಪ್ ಪ್ರಕರಣಗಳನ್ನು ಹತ್ತಿಕ್ಕಲು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ದಂಡದ ಮೊತ್ತವನ್ನು ರೂ.100ರಿಂದ ರೂ.500ಕ್ಕೆ ಏರಿಸಲಾಗಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಲೈನೆಸ್ಸ್ ಇಲ್ಲದೆಯೇ ವಾಹನ ಚಾಲನೆ

ಅಧಿಕೃತವಾಗಿ ಚಾಲನಾ ಪರವಾನಿಗೆ ಪಡೆಯದೇ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಲೆಸೆನ್ಸ್ ಹೊಂದದೆೇ ವಾಹನ ಚಾಲನೆಗೆ ಮುಂದಾದರೆ ರೂ.1 ಸಾವಿರ ದಂಡ ವಿಧಿಸಲಾಗುತ್ತಿದೆ. ಹಾಗೆಯೇ ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವ ಪೋಷಕರಿಗೂ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದ್ದು, ಪದೇ ಪದೇ ತಪ್ಪು ಕಂಡುಬಂದಲ್ಲಿ ಜೈಲಿಗೂ ಹೋಗಬೇಕಾದ ಪರಿಸ್ಥಿತಿ ಎದುರಾಗಬಹುದು.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಕುಡಿದು ವಾಹನ ಚಾಲನೆ

ವಿಕೇಂಡ್ ಬಂತೂ ಅಂದ್ರೆ ಸಾಕು ಎಲ್ಲೆಲ್ಲೂ ಎಣ್ಣೆ ಗಮತ್ತು ಇದ್ದೆ ಇರುತ್ತೆ. ಅದರಲ್ಲೂ ಕುಡಿದು ನಂತರ ವಾಹನ ಚಾಲನೆ ಮಾಡುವುದು ಕೂಡಾ ಒಂದು ಕ್ರೇಜ್ ಆಗಿ ಮಾರ್ಪಾಟ್ಟಿದ್ದು, ಇನ್ಮುಂದೆ ಕುಡಿದು ಸಿಕ್ಕಿಬಿದ್ದಲ್ಲಿ ರೂ. 10 ಸಾವಿರ ದಂಡದೊಂದಿಗೆ ಜೈಲುವಾಸವನ್ನು ಅನುಭವಿಸಬೇಕಾಗಿರುವುದು ಕಡ್ಡಾಯವಾಗಿದೆ.

ಇಂದಿನಿಂದಲೇ ಹೊಸ ರೂಲ್ಸ್ ಅನ್ವಯ- ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡಗಳು

ಇನ್ನು ತ್ರಿಬಲ್ ರೈಡಿಂಗ್, ಕಾನೂನು ಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದು, ಇಯರ್ ಫೋನ್ ಬಳಕೆ ಮತ್ತು ಫುಟ್‌ಪಾತ್‌ಗಳ ಮೇಲೆ ವಾಹನಗಳ ಚಾಲನೆ ಸೇರಿದಂತೆ ವಿವಿಧ ಮಾದರಿಯ ನಿಯಮ ಉಲ್ಲಂಘನೆಗಳ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನೀವು ಕೂಡಾ ಸಂಚಾರಿ ನಿಯಮಗಳನ್ನು ಮೀರಿ ದಂಡಕ್ಕೆ ಗುರಿಯಾಗಬೇಡಿ.

Most Read Articles

Kannada
English summary
New traffic rules have been implemented all over India. The new rules now come with more hefty fines for traffic violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X