Just In
- 10 hrs ago ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- 11 hrs ago ಭಾರತದ ನಂ.1 ಕಾರು... ದಾಖಲೆಯ ಮಾರಾಟ... 5.5 ಲಕ್ಷ ಬೆಲೆ... 34 ಕಿ.ಮೀ ಮೈಲೇಜ್
- 11 hrs ago ಈ ಹ್ಯುಂಡೈ ಕಾರಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಇದು ನಿಮಗೆ ಬೇಕು ಅಂದ್ರೆ ಕಾಯಲೇಬೇಕು!
- 12 hrs ago ಈ ತಿಂಗಳಲ್ಲಿ ಕೈಗೆಟಕುವ ಬೆಲೆಯ ಎಸ್ಯುವಿಗಳು: ಮಿಸ್ ಮಾಡಬೇಡಿ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Don't Miss!
- Movies 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ..!
ವಾಹನಗಳ ಸುರಕ್ಷೆತೆಗಾಗಿ ಕೆಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಏಪ್ರಿಲ್ 1, 2019ರಿಂದಲೇ ಅನ್ವಯವಾಗುವಂತೆ ಹೊಸ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಸುಮಾರು ಒಂದು ದಶಕ ಹಿಂದೆಯೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳನ್ನು ಜಾರಿ ತರಲಾಗಿದ್ದರೂ ಸಹ ಇದುವರೆಗೆ ಹಲವಾರು ರಾಜ್ಯಗಳಲ್ಲಿ ಇದು ಕಡ್ಡಾಯವಾಗಿರಲಿಲ್ಲ. ಹೀಗಾಗಿ ವಾಹನಗಳ ಸುರಕ್ಷತೆಗಾಗಿ ಇದೀಗ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ನೋಂದಣಿಯಾಗುವ ಪ್ರತಿಯೊಂದು ವಾಹನವು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿರಬೇಕೆಂದು ಸುತ್ತೊಲೆ ಹೊರಡಿಸಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಸುರಕ್ಷಾ ನೀತಿ ಪ್ರಕಾರ, ಇಷ್ಟು ದಿನಗಳ ಕಾಲ ಕಾರು ಮಾಲೀಕರೇ ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್ಗಳನ್ನು ಇನ್ಮುಂದೆ ಕಾರು ಉತ್ಪಾದಕರೇ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್ಗಳಿರಲಿವೆ.
ಹೀಗಾಗಿ ಕಾರು ಮಾಲೀಕರು ಇನ್ಮುಂದೆ ಕಾರು ಉತ್ಪಾದಕರು ಪೂರೈಸುವ ನಂಬರ್ ಪ್ಲೇಟ್ಗಳನ್ನೇ ಉಪಯೋಗಿಸಬೇಕಿದ್ದು, ಹೊಸ ಕಾರು ಪೂರೈಕೆಯ ಸಂದರ್ಭದಲ್ಲೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ಸಹ ನೀಡಬೇಕಿದೆ.
ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದನಾ ಸಂಸ್ಥೆಗಳು ಪೂರೈಸುವ ನಂಬರ್ ಪ್ಲೇಟ್ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ. ಹೀಗಾಗಿ ವಾಹನಗಳಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ಮುಖ್ಯವಾಗಿ ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲಿದೆ.
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ನಲ್ಲಿ ಅಳವಡಿಸಲಾಗಿರುವ ಕ್ರೋಮಿಯಮ್ ಹಾಲೋಗ್ರಾಮ್ ತಂತ್ರಜ್ಞಾನವನ್ನು ಸ್ಟಾಂಪ್ ಮಾದರಿಯಲ್ಲಿ ಅಳವಡಿಸಲಾಗಿದ್ದು, ಲೇಸರ್ ರೀಡರ್ ಮೂಲಕ ವಾಹನದ ಪೂರ್ಣ ಪ್ರಮಾಣದ ಮಾಹಿತಿಯನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ.
ವಾಹನದ ನೋಂದಣಿ, ಮಾಲೀಕರ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮೂಲಕ ತಿಳಿದುಕೊಳ್ಳಲು ಸಾಧ್ಯವಿದ್ದು, ಹೊಸ ಮಾದರಿಯ ನಂಬರ್ ಪ್ಲೇಟ್ಗಳಿಗೆ ಕೇಂದ್ರ ಸರ್ಕಾರವು 15 ವರ್ಷಗಳ ವಾರಂಟಿ ನೀಡುತ್ತಿದೆ.
MOST READ: ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!
ಜೊತೆಗೆ ಕಾರುಗಳ ನಕಲಿ ನಂಬರ್ ಪ್ಲೇಟ್ಗಳ ಹಾವಳಿಗೂ ಬ್ರೇಕ್ ಬೀಳಲಿದ್ದು, ಈ ಮೂಲಕ ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.
ಇನ್ನು ಕಾರಿನ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.
MOST READ: ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್ಗಳು ಏನನ್ನು ಸೂಚಿಸುತ್ತವೆ ಗೊತ್ತಾ?
ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ನಂಬರ್ ಪ್ಲೇಟ್ ಒಂದಕ್ಕೆ ರೂ.900ರಿಂದ ಫ್ಯಾನ್ಸಿ ನಂಬರ್ ಪ್ಲೇಟ್ಗಳಿಗೆ ರೂ.40 ಸಾವಿರ ತನಕ ಬೆಲೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ವಾಹನ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದ ಏಜೆನ್ಸಿಗಳಿಗೂ ಇದರಿಂದ ಹೊಡೆತ ಬೀಳಲಿದೆ ಎನ್ನಬಹುದು.