ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ದೇಶದ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಮೊದಲ ಹಂತದ ಯೋಜನೆಯ ಕಾಮಗಾರಿಗಳು ತುರ್ತಾಗಿ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಬೇಕಿದ್ದ ಅಗತ್ಯ ಭೂ ಸ್ವಾದೀನ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ. ಹೀಗಾಗಿ ಯೋಜನೆಯು ಪೂರ್ಣಗೊಳ್ಳುವುದು ಮಾತ್ರ ಬಾಕಿಯಿದ್ದು, ಇದೀಗ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 4 ಸಾವಿರ ಕಿ.ಮಿ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಭಾರತ್‌ಮಾಲಾ ಯೋಜನೆಯು ದೇಶದಲ್ಲೇ ಮಹತ್ವದ ಆರ್ಥಿಕ ಸುಧಾರಣಾ ಹೆಜ್ಜೆ ಎಂದೇ ಬಿಂಬಿತವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ 50,000 ಕಿ. ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಬಳಿಕ ಬೃಹತ್ ಪ್ರಮಾಣದ ರಸ್ತೆ ನಿರ್ಮಾಣವಾಗುತ್ತಿರುವುದು ಇದೇ ಮೊದಲು ಎನ್ನಬಹುದು.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಗಡಿ ರಸ್ತೆಗಳು, ಅಂತಾರಾಷ್ಟ್ರೀಯ ಸಂಪರ್ಕ ರಸ್ತೆಗಳು, ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಕಾರಿಡಾರ್‌ಗಳ ಅಭಿವೃದ್ಧಿ ಈ ಮುಂತಾದ ಅಂಶಗಳನ್ನು ಒಳಗೊಂಡಿರುವ ಭಾರತ್‌ಮಾಲಾ ಯೋಜನೆಯ ಮೊದಲ ಹಂತದಲ್ಲಿ 20 ಸಾವಿರ ಕಿ. ಮೀ. ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಇದೀಗ ಇದೇ ಯೋಜನೆಯನ್ನು ವಿಸ್ತರಿಸಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಎರಡನೇ ಹಂತವಾಗಿ ಮತ್ತೆ ಹೆಚ್ಚುವರಿಯಾಗಿ 4 ಸಾವಿರ ಕಿ.ಮಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಅಗತ್ಯ ಹಣಕಾಸು ನೆರವು ನೀಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಪಶ್ಚಿಮ ಭಾಗವನ್ನು ಪೂರ್ವ ಭಾಗಕ್ಕೆ ಸಂಪರ್ಕಿಸುವ ಕನಸಿನ ಯೋಜನೆ ಇದಾಗಿದ್ದು, ಮೊದಲ ಹಂತದ ಯೋಜನೆಯನ್ನು ಪೂರ್ಣಗೊಳಿಸಲು 3ರಿಂದ 5 ವರ್ಷದ ಕಾಲಮಿತಿ ಹಾಕಿಕೊಳ್ಳಲಾಗಿದೆ. ಜೊತೆಗೆ ಹೊಸ ಯೋಜನೆಗಾಗಿ ರೂ. 5.5 ಲಕ್ಷ ಕೋಟಿ ಖರ್ಚು ಅಂದಾಜಿಸಲಾಗಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಹಾಗೆಯೇ 2 ಹಂತದ ಯೋಜನೆಗಾಗಿ ಮತ್ತಷ್ಟು ಹಣಕಾಸು ನೆರವು ಕೋರಿರುವ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದ ಎರಡು ಮಾರ್ಗಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಬೆಂಗಳೂರು-ಕಡಪಾ-ವಿಜಯವಾಡ ಮತ್ತು ಸೋಲಾಪುರ್-ಬೆಳಗಾವಿ ಮಾರ್ಗಗಳು ಭಾರತ್‌ಮಾಲ್ ಯೋಜನೆಯ 2ನೇ ಹಂತದಲ್ಲಿ ಅಭಿವೃದ್ಧಿಗೊಳ್ಳಲಿವೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಇದಲ್ಲದೇ ಪಾಟ್ನಾ-ರೌರಕೆಲಾ, ಜಾನ್ಸಿ-ರಾಯ್‌ಪುರ್, ಗೋರಖ್‌ಪುರ್-ಬೇರೇಲಿ ಮತ್ತು ವಾರಣಾಸಿ-ಗೋಖರ್‌ಪುರ್ ಮಾರ್ಗಗಳು ಕೂಡಾ 2ನೇ ಹಂತದ ಭಾರತ್‌ಮಾಲಾ ಯೋಜನೆ ಅಡಿ ಅಂತರಾಷ್ಟ್ರೀಯ ದರ್ಜೆಯೊಂದಿಗೆ ಅಭಿವೃದ್ಧಿಗೊಳ್ಳಲಿವೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಮೊದಲ ಹಂತದಲ್ಲಿ ಈಗಾಗಲೇ ಬೆಂಗಳೂರು-ಪುಣೆ ನಡುವಿನ 745 ಕಿ.ಮಿ ಉದ್ದದ ರಾಷ್ಟ್ರೀಯ ಹೆದ್ದಾರಿಯು ಆಯ್ಕೆಗೊಳ್ಳುವ ಮೂಲಕ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಸರಕು ಸಾಗಾಣಿಕೆಗೆ ವಾಹನಗಳಿಗೆ ಇದು ಸಾಕಷ್ಟುಅನುಕೂಲಕರವಾಗುತ್ತಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಇನ್ನು ಬೃಹತ್ ಯೋಜನೆಗಾಗಿ ಮಾರುಕಟ್ಟೆಯಿಂದ 2.09 ಲಕ್ಷ ಕೋಟಿ ಮತ್ತು ಖಾಸಗಿ ಹೂಡಿಕೆಯ ಮೂಲಕ 1.06 ಲಕ್ಷ ಕೋಟಿ, ಕೇಂದ್ರೀಯ ರಸ್ತೆ ನಿಧಿ ಅಥವಾ ಟೋಲ್‌ ಶುಲ್ಕದ ಮೂಲಕ 2.19 ಲಕ್ಷ ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ ಸರಕಾರ ಈ ಯೋಜನೆಗೆ ಹಣಕಾಸು ಸಂಗ್ರಹಿಸಲಿದೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಭಾರತ್‌ಮಾಲಾ ಯೋಜನೆಯಡಿ ನಿರ್ಮಾಣವಾಗುವ ರಸ್ತೆ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುತ್ತದೆ. ಹೀಗಾಗಿ ಪ್ರತಿ ಕಿಮೀಗೆ ರೂ. 13 ಕೋಟಿಗಳಂತೆ ಖರ್ಚಾಗಲಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತರ್‌ರಾಜ್ಯ ರಸ್ತೆ, ರಾಜ್ಯ ರಸ್ತೆಗಳು ಭಾರತ್‌ಮಾಲಾದಡಿ ಬರಲಿವೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಯೋಜನೆಯ ಉದ್ದೇಶ?

ವಿಶೇಷವೆಂದರೆ ಭಾರತ್‌ಮಾಲಾದಡಿ ನಿರ್ಮಾಣವಾಗಲಿರುವ ಎಲ್ಲ ರಸ್ತೆಗಳು ಬಹುತೇಕ ಒಂದೇ ರೀತಿ ಇರುತ್ತವೆ. ವರ್ಷಕ್ಕೆ 10,000 ಕಿ. ಮೀ. ರಸ್ತೆ ನಿರ್ಮಿಸುವ ಗುರಿಯಿರಿಸಿಕೊಳ್ಳಲಾಗಿದ್ದು, ಸರಕು ಸಾಗಣೆಯನ್ನು ತ್ವರಿತಗೊಳಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಇದರ‌ ಮುಖ್ಯ ಉದ್ದೇಶವಾಗಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಬೃಹತ್ ಪ್ರಮಾಣದ ಉದ್ಯೋಗ ಸೃಷ್ಠಿ

ಭಾರತ್‌ಮಾಲಾ ಯೋಜನೆಯಿಂದ ಸುಮಾರು 15 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದ್ದರೆ ಪರೋಕ್ಷವಾಗಿ ಇದಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ಉಕ್ಕು, ಸಿಮೆಂಟ್‌, ಪೈಂಟ್‌ ಮತ್ತಿತರ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯಲಿದೆ ಎನ್ನುವುದು ಉದ್ಯಮಿಗಳ ಅಭಿಮತವಾಗಿದೆ.

ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತ್‌ಮಾಲಾ ಯೋಜನೆ ಘೋಷಣೆಯಾಗುತ್ತಿದ್ದಂತೆ ಕೈಗಾರಿಕೋದ್ಯಮ ವಲಯದಿಂದ ಸಕಾರಾತ್ಮಕ ಪ್ರತಿಸ್ಪಂದನ ವ್ಯಕ್ತವಾಗಿದ್ದು, ಈ ಯೋಜನೆಯಿಂದ ದೇಶದ ಆರ್ಥಿಕ ಬೆಳವಣಿಗೆಯು ಇನ್ನೊಂದು ಮಜಲು ತಲುಪುವ ಎಲ್ಲ ಲಕ್ಷಣಗಳು ಇವೆ ಎಂಬುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

Most Read Articles

Kannada
English summary
Indian Highways To Cross New Boundaries Under Bharatmala 2.0. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X