ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಕಂಪ್ಯಾಕ್ಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ 2ನೇ ಜನರೇಷನ್ ಅಮೇಜ್ ಕಾರು ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 1 ಲಕ್ಷ ಯುನಿಟ್ ಮಾರಾಟವಾಗಿದ್ದು, ಈ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಅಮೇಜ್ ಏಸ್ ಎನ್ನುವ ಸ್ಪೆಷಲ್ ಎಡಿಷನ್ ಒಂದನ್ನು ಬಿಡುಗಡೆ ಮಾಡಿದೆ.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

2018ರ ಮೇ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿದ್ದ 2ನೇ ಜನರೇಷನ್ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯು ಅತ್ಯಧಿಕ ಗ್ರಾಹಕರನ್ನು ಸೆಳೆಯುವ ಮೂಲಕ ಹೋಂಡಾ ಸಂಸ್ಥೆಯ 2018-19ರ ಅವಧಿಯ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಅತಿ ಕಡಿಮೆ ಅವಧಿಯಲ್ಲಿ 1 ಲಕ್ಷ ಯುನಿಟ್ ಮಾರಾಟವಾಗಿರುವ ಸಂಭ್ರಮಕ್ಕಾಗಿ ಸೀಮಿತ ಅವಧಿಗಾಗಿ ಅಮೇಜ್ ಏಸ್ ಎನ್ನುವ ಸ್ಪೆಷಲ್ ಎಡಿಷನ್ ಪರಿಚಯಿಸಿದೆ.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಅಮೇಜ್ ಹೈ ಎಂಡ್ ಆವೃತ್ತಿಯಾದ ವಿಎಕ್ಸ್‌ನಲ್ಲಿ ಏಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಅಷ್ಟೇ ಅಲ್ಲದೇ ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಅಮೇಜ್ ಏಸ್ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಏಸ್ ಪೆಟ್ರೋಲ್ ಮ್ಯಾನುವಲ್- ರೂ. 7.89 ಲಕ್ಷ

ಏಸ್ ಪೆಟ್ರೋಲ್ ಸಿವಿಟಿ- ರೂ. 8.72 ಲಕ್ಷ

ಏಸ್ ಡೀಸೆಲ್ ಮ್ಯಾನುವಲ್- ರೂ. 8.99 ಲಕ್ಷ

ಏಸ್ ಡೀಸೆಲ್ ಸಿವಿಟಿ- ರೂ. 9.72 ಲಕ್ಷ

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಸದ್ಯ ಮಾರುಕಟ್ಟೆಯಲ್ಲಿ ಅಮೇಜ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 16 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.88 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.59 ಲಕ್ಷ ಬೆಲೆ ಹೊಂದಿವೆ. ಇದೀಗ ಬಿಡುಗಡೆಯಾಗಿರುವ ಅಮೇಜ್ ಏಸ್ ಮಾದರಿಯು ಸೀಮಿತ ಅವಧಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಕೇವಲ 840 ಯುನಿಟ್‌ಗಳು ಮಾತ್ರವೇ ಮಾರಾಟ ಮಾಡಲಿದೆ.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಇನ್ನು ಸ್ಪೆಷಲ್ ಎಡಿಷನ್‌ನಲ್ಲಿ ಏಸ್ ಬ್ಯಾಡ್ಜ್‌ ಮತ್ತು ಕೆಲವು ಹೆಚ್ಚುವರಿ ಬಣ್ಣಗಳ ಆಯ್ಕೆಯನ್ನು ಹೊರತುಪಡಿಸಿ ಈ ಹಿಂದಿನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಸೀಟುಗಳ ಮೇಲೂ ಏಸ್ ಬ್ಯಾಡ್ಜ್ ಮಿಂಚಲಿದೆ.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಎಂಜಿನ್ ಸಾಮಾರ್ಥ್ಯ

1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಸೌಲಭ್ಯವನ್ನು ಹೊಂದಿರುವ ಅಮೇಜ್ ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಅಮೇಜ್ ಕಾರಿನ ಮೈಲೇಜ್

* ಮ್ಯಾನುವಲ್ ಗೇರ್‌ಬಾಕ್ಸ್ - ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 27 ಕಿ.ಮಿ (ಪ್ರತಿ ಲೀಟರ್‌ಗೆ)

* ಆಟೋಮ್ಯಾಟಿಕ್ ಗೇರ್‌ಬಾಕ್ಸ್- ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 23 ಕಿ.ಮಿ (ಪ್ರತಿ ಲೀಟರ್‌ಗೆ)

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಖರೀದಿಗೆ ಲಭ್ಯವಿರುವ ಬಣ್ಣಗಳು

ಬೇಡಿಕೆಗೆ ಅನುಗುಣವಾಗಿ ಒಟ್ಟು 5 ಬಣ್ಣಗಳಲ್ಲಿ ಲಭ್ಯವಿರುವ ಅಮೇಜ್ ಕಾರುಗಳು ರೆಡಿಯೆಂಟ್ ರೆಡ್, ವೈಟ್ ಆರ್ಕಿಡ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೊಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮಾರ್ಡನ್ ಸ್ಟ್ರಿಲ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಕಾರು ಮಾರಾಟದಲ್ಲಿ ಅಮೇಜ್ ಹೊಸ ದಾಖಲೆ- ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಹೋಂಡಾ..!

ಕಾರಿನ ವಿನ್ಯಾಸಗಳು

ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಬ್ಲ್ಯಾಕ್ ಅಲಾಯ್ ವೀಲ್ಹ್‌ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿರುವುದು ಆಕರ್ಷಕವಾಗಿದೆ.

Most Read Articles

Kannada
Read more on ಹೋಂಡಾ honda
English summary
Honda Cars India has launched Amaze Ace Edition in India starting price at Rs.7.89 lakhs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X