ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

2018ರ ಮೇ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿದ್ದ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯು ಅತ್ಯಧಿಕ ಗ್ರಾಹಕರನ್ನು ಸೆಳೆಯುವ ಮೂಲಕ ಹೋಂಡಾ ಸಂಸ್ಥೆಯ 2018-19ರ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಹೆಚ್ಚುವರಿಯಾಗಿ ಮತ್ತೊಂದು ಹೈ ಎಂಡ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ನ್ಯೂ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರು ಮಾರಾಟ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿರುವುದು ಹೋಂಡಾ ಸಂಸ್ಥೆಗೆ ಅಚ್ಚರಿ ತರಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ 2019ರ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಈ ಹಿಂದೆ ಪರಿಚಯಿಸಲಾಗಿದ್ದ ಇ,ಎಸ್, ವಿ ಮತ್ತು ವಿಎಕ್ಸ್ ಜೊತೆಗೆ ಹೈಎಂಡ್ ಮಾದರಿಯಾಗಿ ವಿಎಕ್ಸ್ ಸಿವಿಟಿ ಆವೃತ್ತಿಯನ್ನು ಹೊಸದಾಗಿ ಪರಿಚಯಿಸಲಾಗಿದೆ.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಈ ಹಿಂದೆ 2018ರ ಮೇ ನಲ್ಲಿ ವಿಎಕ್ಸ್ ಆವೃತ್ತಿಯನ್ನು ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಯಲ್ಲಿ ಮಾತ್ರವೇ ಬಿಡುಗಡೆ ಮಾಡಿದ್ದ ಹೋಂಡಾ ಸಂಸ್ಥೆಯು, ಈ ಬಾರಿ ಗ್ರಾಹಕರ ಆದ್ಯತೆಯೆಂತೆ ವಿಎಕ್ಸ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒದಗಿಸಲಿದೆ.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಹೀಗಾಗಿ ಈ ಹಿಂದೆ ವಿಎಕ್ಸ್ ವೆರಿಯೆಂಟ್ ಬೆಲೆ ಇದೀಗ ಮತ್ತಷ್ಟು ಹೆಚ್ಚಳವಾಗಿದ್ದು, ವಿಎಕ್ಸ್ ಎಎಂಟಿ ಪೆಟ್ರೋಲ್ ಆವೃತ್ತಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8.56 ಲಕ್ಷಕ್ಕೆ ಮತ್ತು ವಿಎಕ್ಸ್ ಎಎಂಟಿ ಡೀಸೆಲ್ ಮಾದರಿಯ ಬೆಲೆಯನ್ನು ರೂ.9.56 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಇದರ ಹೊರತಾಗಿ ಅಮೇಜ್ ಮಾದರಿಯಲ್ಲಿ ಯಾವುದೇ ತಾಂತ್ರಿಕ ಬದಲಾವಣೆಯನ್ನು ತರದ ಹೋಂಡಾ ಸಂಸ್ಥೆಯು ಕೇವಲ ವಿಎಕ್ಸ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಆಯ್ಕೆ ಮಾತ್ರವೇ ನೀಡುತ್ತಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದೆ. ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಅಮೇಜ್ ಕಾರಿನ ಮೈಲೇಜ್

* ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19.5 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 27.8 ಕಿ.ಮಿ (ಪ್ರತಿ ಲೀಟರ್‌ಗೆ)

* ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 23.8 ಕಿ.ಮಿ (ಪ್ರತಿ ಲೀಟರ್‌ಗೆ)

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಖರೀದಿಗೆ ಲಭ್ಯವಿರುವ ಬಣ್ಣಗಳು ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ಬಣ್ಣಗಳಲ್ಲಿ ಲಭ್ಯವಿರುವ ಹೊಸ ಅಮೇಜ್ ಕಾರುಗಳು ರೆಡಿಯೆಂಟ್ ರೆಡ್, ವೈಟ್ ಆರ್ಕಿಡ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೊಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮಾರ್ಡನ್ ಸ್ಟ್ರಿಲ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಕಾರಿನ ವಿನ್ಯಾಸಗಳು

ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.

MOST READ: ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಎಸ್‌ಬಿಐನಿಂದ ಬಂಪರ್ ಆಫರ್

ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮತ್ತೊಂದು ಹೈ ಎಂಡ್ ವೆರಿಯೆಂಟ್

ಇನ್ನು ಕಳೆದ ವರ್ಷ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಮೂಲಕ ಕಾರು ಉತ್ಪಾದಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ನ್ಯೂ ಹೋಂಡಾ ಅಮೇಜ್ ಕಾರುಗಳು ಇದೀಗ ವಿನೂತನ ತಾಂತ್ರಿಕ ಅಂಶಗಳೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ವಿಎಕ್ಸ್ ಮಾದರಿಯಲ್ಲಿ ಸಿವಿಟಿ ಆಯ್ಕೆ ನೀಡಿರುವುದು ಮಾರುತಿ ಸುಜುಕಿ ಡಿಜೈರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಹೋಂಡಾ honda
English summary
Honda Amaze automatic launched in top-spec VX variant. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X