ಲೋನ್ ಚಿಂತೆ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹೋಂಡಾ ಕಾರುಗಳು..!

ಕಾರು ಖರೀದಿ ಮಾಡದೇ ಮಾಲೀಕತ್ವ ಹೊಂದುವುದು ಹೇಗಿರುತ್ತೆ ಹೇಳಿ. ಹೌದು, ಹೋಂಡಾ ಸಂಸ್ಥೆಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಸದಸ್ಯತ್ವ ಆಧಾರದ ಮೇಲೆ ಕಾರು ಮಾಲೀಕತ್ವದ ಅವಕಾಶ ನೀಡುತ್ತಿದ್ದು, ನೀವು ಕೂಡಾ ಅಗತ್ಯವಾಗಿ ಟ್ರೈ ಮಾಡಬಹುದು.

ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಒಂದು ಕಾರು ಖರೀದಿ ಮಾಡುವುದು ಅಂದ್ರೆ ಸುಮ್ಮನೆನಾ? ಅದಕ್ಕೆ ಲೋನ್ ಬೇಕು, ನಂತರ ಪ್ರತಿ ತಿಂಗಳು ಇಎಂಐ ಕಟ್ಟುಬೇಕು. ಜೊತೆಗೆ ಮೆಂಟೆನೆನ್ಸ್ ಖರ್ಚು, ಇನ್ಸುರೆನ್ಸ್ ಹೀಗೆ ಎಲ್ಲಾ ಸೇರಿ ಸಾಕು ಸಾಕಾಗಿ ಹೋಗುತ್ತೆ. ಆದ್ರೆ ಇನ್ಮುಂದೆ ಆ ಚಿಂತೆ ಬೇಡವೇ ಬೇಡ ಅನ್ನುತ್ತಿರುವ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಲೋನ್, ಇಎಂಐ ತಲೆಬಿಸಿಯಿಲ್ಲದೆಯೇ ಕಾರು ಮಾಲೀಕರಾಗುವ ಅವಕಾಶವನ್ನು ನೀಡುತ್ತಿದೆ.

ಲೋನ್ ಚಿಂತೆ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹೋಂಡಾ ಕಾರುಗಳು..!

ಪ್ರತಿಯೊಬ್ಬರಿಗೂ ಸ್ವಂತಕ್ಕೆ ಸಣ್ಣದಾದ್ರು ಒಂದು ಕಾರನ್ನು ಹೊಂದಿರಲೇಬೇಕೇಂಬ ಆಸೆ ಇದ್ದೆ ಇರುತ್ತೆ. ಆದ್ರೆ ಹಣಕಾಸಿನ ವಿಚಾರಕ್ಕೆ ಬಂದಾಗ ಅದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆಯು ಹೊಸ ಪರಿಕಲ್ಪನೆಯೊಂದಿಗೆ ನಿರ್ದಿಷ್ಟ ದರಗಳಲ್ಲಿ ನಿಮಗೆ ಇಷ್ಟದ ಕಾರುಗಳನ್ನು ಒದಗಿಸುವ ಲೀಸ್‌ ಯೋಜನೆಗೆ ಚಾಲನೆ ನೀಡಿದೆ.

ಇತ್ತೀಚೆಗೆ ಸ್ವಂತ ಕಾರು ಖರೀದಿಗಿಂತ ಬಾಡಿಗೆ ಅಥವಾ ಲೀಸ್‌ಗೆ ಕಾರುಗಳನ್ನು ಹೊಂದುವ ಪರಿಪಾಠ ಹೆಚ್ಚುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಒರಿಕ್ಸ್ ಸಂಸ್ಥೆಯ ಜೊತೆಗೂಡಿ ಲೀಸ್ ಆಧಾರದ ಮೇಲೆ ನಿಮ್ಮ ಇಷ್ಟದ ಕಾರುಗಳನ್ನು ಒದಗಿಸಲು ಮುಂದಾಗಿದೆ.

ಹೊಸ ಯೋಜನೆಯ ಮೂಲಕ ಹೈ ಎಂಡ್ ಮಾದರಿಗಳಾದ ಸಿಟಿ ಸೆಡಾನ್, ಸಿವಿಕ್ ಸೆಡಾನ್ ಮತ್ತು ಸಿ-ಆರ್‌ವಿ ಎಸ್‌ಯುವಿ ಕಾರುಗಳನ್ನು ಲೀಸ್‌‌ಗೆ ನೀಡಲಿದ್ದು, ತಿಂಗಳು, ವರ್ಷದ ಆಧಾರ ಮೇಲೆ ಕಾರಿನ ಮಾಲೀಕತ್ವವನ್ನು ಹೊಂದಬಹುದಾಗಿದೆ. ಮಾಲೀಕತ್ವವನ್ನು ವ್ಯಯಕ್ತಿಕ ಬಳಕೆ, ಉದ್ಯಮಿಗಳಿಗೆ, ಕಾರ್ಪೊರೇಟ್ ಬಳಕೆಗೆ ಪ್ರತ್ಯೇಕ ದರಗಳಲ್ಲಿ ಹೊಸ ಕಾರು ಮಾಲೀಕತ್ವವನ್ನು ನೀಡಲಾಗುತ್ತಿದ್ದು, ಕಾರು ಮಾರಾಟದಲ್ಲಾದ ನಷ್ಟವನ್ನು ಸರಿದೂಗಿಸಲು ಈ ಹೊಸ ಯೋಜನೆ ಸಹಕಾರಿಯಾಗಿದೆ.

ಲೀಸ್ ಸಂದರ್ಭದಲ್ಲಿ ಕಾರಿನ ವಿಮೆ, ನಿರ್ವಹಣಾ ವೆಚ್ಚ, ರಸ್ತೆ ತೆರಿಗೆ, ಅಪಘಾತ ನಿರ್ವಹಣೆ ಸೇರಿದಂತೆ ಆನ್ ರೋಡ್ ಅಸಿಸ್ಟೆನ್ಸ್ ಸೌಲಭ್ಯ ಸಿಗಲಿದ್ದು, ದೇಶದ ಯಾವುದೇ ಮೂಲೆಯಲ್ಲಿದ್ದರು ನಿಮ್ಮ ಅವಶ್ಯಕತೆಗೆ ಅನುಗಣವಾಗಿ ನೆರವು ಸಿಗುತ್ತೆ.

ಹೀಗಿರುವಾಗ ಸ್ವಂತಕ್ಕೆ ಕಾರು ಖರೀದಿ ಮಾಡಿ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದಕ್ಕಿಂತ ನಿಮಗೆ ಇಷ್ಟವಾದ ಕಾರನ್ನು ಇಂತಿಷ್ಟ ತಿಂಗಳಿಗೆ ಅಂತಾ ಲೀಸ್‌ಗೆ ಪಡೆದು ಬೇಡವೆಂದಾಗ ವಾಪಸ್ ನೀಡಲು ಇದು ಸಹಕಾರಿಯಾಗಿದೆ.

ಜೊತೆಗೆ ಸ್ವಂತಕ್ಕೆ ಕಾರನ್ನು ಖರೀದಿ ಮಾಡಿದಾಗ ಪದೇ ಪದೇ ಕಾರು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದ್ರೆ ಪ್ರತಿ ಬಾರಿಯೂ ಕಾರು ಬದಲಿಸಲು ಹೋದಾಗಲೂ ನೀವು ಈ ಹಿಂದೆ ಖರೀದಿ ಮಾಡಿದ ಕಾರಿನ ಬೆಲೆ ಕಳೆದುಕೊಂಡು ನಷ್ಟದಲ್ಲಿ ಸುಳಿಯಲ್ಲಿ ಸಿಲುಕುವಿರಿ.

ಹೀಗಾಗಿ ಲೀಸ್‌ ಆಧಾರದ ಮೇಲೆ ಕಾರು ಮಾಲೀಕತ್ವವನ್ನು ಹೊಂದುವುದು ಒಂದು ಉತ್ತಮ ಮಾರ್ಗ ಎನ್ನಬಹುದಾಗಿದ್ದು, ಮಾರುಕಟ್ಟೆಯಲ್ಲಿ ಬರುವ ಹೊಸ ಬ್ರಾಂಡ್ ಕಾರುಗಳನ್ನು ಆಗಾಗ ಬದಲಿಸಲು ಇಲ್ಲಿ ಅವಕಾಶ ಸಿಗುತ್ತೆ.

ಇದರಿಂದ ವಿದೇಶಿಗಳಲ್ಲಿ ಇದೀಗ ಲೀಸ್ ಮೇಲೆ ಕಾರು ಮಾಲೀಕ್ವ ಹೊಂದುವುದು ಸಾಮಾನ್ಯವಾಗಿದ್ದು, ಹೊಸ ಕಾರುಗಳ ಮಾರಾಟಕ್ಕಿಂತ ಲೀಸ್ ಆಧಾರ ಮೇಲೆ ಕಾರನ್ನು ಒದಗಿಸುವುದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

Kannada
English summary
Honda Partners With Orix To Offer Car Leasing Schemes In India: Civic, CR-V & City Models On Offer.
Story first published: Tuesday, September 10, 2019, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X