ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಹೊಸ ಹೊಸ ನಿಯಮಗಳ ಜಾರಿಯಿಂದಾಗಿ ಆಟೋ ಉದ್ಯಮದಲ್ಲಿ ಹೊಸ ವಾಹನ ಮಾರಾಟ ಪ್ರಕ್ರಿಯೆಯೂ ಮಂದಗತಿಯಲ್ಲಿ ಸಾಗಿದ್ದು, ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಭಾರೀ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡುತ್ತಿವೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಕಳೆದ ಐದಾರು ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತೀವ್ರ ನಷ್ಟ ಅನುಭವಿಸಿದ್ದು, ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಸಹ ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಾರು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಅಗಸ್ಟ್ ಅವಧಿಯಲ್ಲಿ ಆಯ್ದ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಹೋಂಡಾ ಕೂಡಾ ತನ್ನ ಜನಪ್ರಿಯ ಪ್ರೀಮಿಯಂ ಕಾರು ಆವೃತ್ತಿಗಳಾದ ಸಿಆರ್-ವಿ, ಸಿವಿಕ್, ಬಿಆರ್-ಬಿ, ಸಿಟಿ ಸೆಡಾನ್, ಜಾಝ್, ಡಬ್ಲ್ಯುಆರ್-ವಿ ಮತ್ತು ಅಮೇಜ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಸಿಆರ್-ವಿ ಎಸ್‌ಯುವಿ(ರೂ. 4 ಲಕ್ಷ)

ಹೋಂಡಾ ಸಂಸ್ಥೆಯ ಐಷಾರಾಮಿ ಕಾರು ಆವೃತ್ತಿಯಾದ ಸಿಆರ್-ವಿ ಕಾರಿನ ಮೇಲೆ ಗರಿಷ್ಠ ರೂ.4 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, 7-ಸೀಟರ್‌ನೊಂದಿಗೆ 2-0-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.28.33 ಲಕ್ಷ ಮತ್ತು ಟಾಪ್ ಮಾದರಿಗೆ ರೂ. 32.83 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ರೂ.4 ಲಕ್ಷ ಡಿಸ್ಕೌಂಟ್ ಪಡೆಯಬಹುದಾಗಿದೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಬಿಆರ್‌-ವಿ ಎಂಪಿವಿ(ರೂ. 1.15 ಲಕ್ಷ)

7 ಸೀಟರ್ ಮಲ್ಟಿ ಪರ್ಪಸ್ ವೆಹಿಕಲ್ ಮಾದರಿಯಾಗಿರುವ ಬಿಆರ್‌-ವಿ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.1.15 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಬಿಆರ್‌-ವಿ ಖರೀದಿಗೆ ಲಭ್ಯವಿದೆ. ರೂ. 1.15 ಲಕ್ಷ ಡಿಸ್ಕೌಂಟ್ ಅಲ್ಲದೇ ಆಯ್ದ ಡೀಲರ್ಸ್‌ಗಳಲ್ಲಿ ಬಿಆರ್‌-ವಿ ಖರೀದಿ ಮೇಲೆ ರೂ.36 ಸಾವಿರ ಮೌಲ್ಯ ಆಕ್ಸೆರಿಸ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಸಿವಿಕ್ ಸೆಡಾನ್(ರೂ.80 ಸಾವಿರ)

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಸಿವಿಕ್ ಐಷಾರಾಮಿ ಸೆಡಾನ್ ಮೇಲೆ ಹೋಂಡಾ ಸಂಸ್ಥೆಯು ರೂ.80 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, 1.6-ಲೀಟರ್ ಡೀಸೆಲ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಸಿಟಿ ಸೆಡಾನ್(ರೂ.67 ಸಾವಿರ)

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಿಟಿ ಸೆಡಾನ್ ಮಾದರಿಯ ಮೇಲೆ ಹೋಂಡಾ ಸಂಸ್ಥೆಯು ರೂ.67 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಟಿ ಕಾರು ಹೊಸ ಸುರಕ್ಷಾ ನೀತಿ ಅನುಸಾರವಾಗಿ ಇದೀಗ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್(ರೂ.55 ಸಾವಿರ)

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಜಾಝ್ ಕಾರಿನ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.55 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಾಝ್ ಕಾರು ಖರೀದಿಗೆ ಇದು ಸುವರ್ಣಾವಕಾಶ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ(ರೂ.50 ಸಾವಿರ)

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ಹೋಂಡಾ ಸಂಸ್ಥೆಯು ರೂ.50 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಜಾಝ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿರುವ ಡಬ್ಲ್ಯುಆರ್-ವಿ ಕಾರು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಉತ್ತಮ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಯಾಗಿದೆ.

ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಅಮೇಜ್ ಕಂಪ್ಯಾಕ್ಟ್ ಸೆಡಾನ್(ರೂ.47 ಸಾವಿರ)

ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಆವೃತ್ತಿಗೆ ತೀವ್ರ ಪೈಪೋಟಿ ನೀಡುತ್ತಿರುವ ಅಮೇಜ್ ಕಾರಿನ ಮೇಲೆ ಹೋಂಡಾ ಸಂಸ್ಥೆಯು ರೂ. 47 ಸಾವಿರ ಘೋಷಣೆ ಮಾಡಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಮೇಜ್ ಕಾರು ಗ್ರಾಹಕರ ಬೇಡಿಕೆಯೆಂತೆ ಬರೋಬ್ಬರಿ 20 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Honda dealers are offering massive discounts on select models. Read in Kannada.
Story first published: Wednesday, August 14, 2019, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X