ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಹೋಂಡಾ ಕಂಪನಿಯು ಭಾರತದಲ್ಲಿ ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ಸಿಟಿ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಬಿಎಸ್-6 ಹೋಂಡಾ ಸಿಟಿ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.91 ಲಕ್ಷಗಳಾಗಿದೆ. ಹೋಂಡಾ ಕಂಪನಿಯ ಸರಣಿಯಲ್ಲಿ ಬಿಡುಗಡೆಯಾದ ಮೊದಲ ಬಿಎಸ್-6 ಎಂಜಿನ್ ಹೊಂದಿರುವ ಕಾರು ಹೋಂಡಾ ಸಿಟಿಯಾಗಿದೆ. ಹೋಂಡಾ ಸಿಟಿ ಕಾರು ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸಿಯಾಜ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಹೊಸ ಹೋಂಡಾ ಸಿಟಿ ಕಾರು ಶಾರ್ಪರ್ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿರಲಿದೆ. ಇನ್ನೂ ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯು‍‍ನಿ‍ಟ್‍‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍‍ಲೈನ್ ಮತ್ತು ದೊಡ್ಡ ಒ‍ಆರ್‍‍ವಿಎಂ‍ಗಳಿವೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಹೊಸ ಹೋಂಡಾ ಸಿಟಿ ಕಾರಿಗೆ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳು ವಿಶೇಷ ಲುಕ್ ನೀಡಿವೆ. ಟೇಲ್‍‍ಲೈಟಿನಲ್ಲಿ ಎಲ್‍ಇ‍‍ಡಿ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಬಂಪರ್ ಸಿಸ್ಟಂಗಳು ವಿಶೇಷವಾಗಿದ್ದು ಬಲಶಾಲಿಯಾಗಿವೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಪೀಚರ್ಸ್

ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂಗಳಿವೆ. ಅ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಇನ್ನೂ ಸ್ಯಾಟಲೈಟ್-ಲಿಂಕ್ಡ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಲೈವ್ ಟ್ರಾಫಿಕ್ ಸಂಪೋರ್ಟ್ ಯುಎಸ್‌ಬಿ ವೈ-ಫೈ ರಿಸೀವರ್, ವಾಯ್ಸ್ ಕಾಮಂಡ್, ಬ್ಲೂಟೂತ್ ಹ್ಯಾಂಡ್‌ಫ್ರೀ ಟೆಲಿಫೋನಿ ಮತ್ತು ಆಡಿಯೊ ಮತ್ತು ವೈರ್‌ಲೆಸ್ ಇನ್ಫ್ರಾರೆಡ್ ರಿಮೋಟ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಸುರಕ್ಷತಾ ಫೀಚರ್ಸ್

ಹೊಸ ಹೋಂಡಾ ಸಿಟಿ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್‍‍ಬ್ಯಾಗ್, ಮಲ್ಟಿ ಆಂಗಲ್ ರೇರ್ ವೀವ್ ಕ್ಯಾಮರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟಾಬಿಲಿಟಿ ಮ್ಯಾನೇಜ್‍‍ಮೆಂಟ್ ಸಿಸ್ಟಂ ಹಾಗೂ ಎ‍‍ಬಿ‍ಎಸ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್‍‍ಗಳನ್ನು ನೀಡಲಾಗುವುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಹೊಸ ಸಿಟಿ ಕಾರಿನಲ್ಲಿ 1.5 ಲೀಟರ್ 4 ಸಿಲಿಂಡರ್, ವಾಟರ್ ಕೂಲ್ಡ್, ಎಸ್‍ಇ‍ಹೆಚ್‍‍ಸಿ, ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 119 ಬಿ‍‍ಹೆಚ್‍‍ಪಿ ಪವರ್ ಮತ್ತು 145 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಸಿವಿಟಿ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ 7 ಸ್ಪೀಡ್ ಪ್ಯಾಡಲ್ ಶಿಫ್ಟರ್ ಆಫರ್ ಕೂಡ ಇದೆ. ಸಿವಿಟಿ ಆವೃತ್ತಿಯು ಪ್ರತಿ ಲೀಟರಿಗೆ 17.4 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಬಿಡುಗಡೆಯಾಯ್ತು ಹೋಂಡಾ ಕಂಪನಿಯ ಮೊದಲ ಬಿಎಸ್-6 ಎಂಜಿನ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ವಾಹನದ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಈ ಕಾರಿನ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಕಂಪನಿಯು ಹೊಸ ಬಿಎಸ್-6 ಕಾರ್ ಅನ್ನು ಬಿ‍ಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಹೋಂಡಾ honda
English summary
BS6 Honda City petrol launched at Rs 9.91 lakh - Read in Kannada
Story first published: Tuesday, December 10, 2019, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X