10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಹೋಂಡಾ ಸಂಸ್ಥೆಯು ತಮ್ಮ ಮೊದಲನೆಯ ತಲೆಮಾರಿನ ಸಿವಿಕ್ ಕಾರನ್ನು 1972ರಲ್ಲಿ ಬಿಡುಗಡೆಗೊಳಿಸಿದ್ದು, ಇಡೀಗ ಭಾರಾತದಲ್ಲಿ 10ನೆಯ ತಲೆಮಾರಿನ ಸಿವಿಕ್ ಸಿಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಲೇಖನದಲ್ಲಿ ಹೊಸ ಸಿವಿಕ್ ಕಾರಿನ, ಫೀಚರ್ಸ್, ಬೆಲೆ ಮತ್ತು ಇನ್ನಿತರೆ ಮಾಹಿತಿಯನ್ನು ತಿಳಿಯಿರಿ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಹೊಸ ಕಾರಿನ ಬೆಲೆ

ಹೋಂಡಾ ಸಿವಿಕ್ ಕಾರುಗಳು 3 ಪೆಟ್ರೋಲ್ ವೆರಿಯಂಟ್ ಹಾಗು ಎರಡು ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.17.69 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಹತ್ತಿರದಲ್ಲಿರುವ ಹೋಂಡಾ ಡೀಲರ್‍‍ನ ಬಳಿ 31,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಹೊಸ ತಲೆಮಾರಿನ ಸಿವಿಕ್ ಕಾರುಗಳು ಸ್ಕೋಡಾ ಒಕ್ಟಿವಿಯಾ ಆರ್‌ಎಸ್, ಹ್ಯುಂಡೈ ಎಲಾಂಟ್ರಾ ಮತ್ತು ಟೊಯೊಟಾ ಕರೊಲ್ಲಾ ಕಾರುಗಳಿಗೆ ತ್ರೀವ ಪೈಪೋಟಿ ನೀಡಲು ಸಕಲ ಸಿದ್ಧತೆ ಮಾಡಿಕೊಂಡು ಸಂಸ್ಥೆಯು ಬಿಡುಗಡೆಗೊಳಿಸಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..
Variant

Petrol CVT

Diesel MT

V

Rs 17,69,900

N/A

VX

Rs 19,19,900

Rs 20,49,900

ZX

Rs 20,99,900

Rs 22,29,900

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಎಂಜಿನ್ ಸಾಮರ್ಥ್ಯ

2019ರ ಹೊಸ ಹೋಂಡಾ ಸಿವಿಕ್ ಕಾರು ಈ ಬಾರಿ ಎರಡು ಎಂಜಿನ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಪೆಟ್ರೋಲ್ ಮಾದರಿಯ ಹೋಂಡಾ ಸಿವಿಕ್ ಕಾರು 1.8 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 139ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಇನ್ನು ಡೀಸೆಲ್ ಮಾದರಿಯ ಹೋಂಡಾ ಸಿವಿಕ್ ಕಾರುಗಳು 1.6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಮೈಲೇಜ್

ಹೀಗಾಗಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, 47 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 16.5 ಕಿ.ಮಿ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿಮಿ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, 17-ಇಂಚಿನ ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಲಭ್ಯವಿರುವ ಬಣ್ಣಗಳು

ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರುಗಳು ಗ್ರಾಹಕರ ರುಚಿಗೆ ಅನುಗುಣವಾಗಿ ಪ್ಲಾತಿನಂ ವೈಟ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತು ಗೋಲ್ಡೆನ್ ಬ್ರೌನ್ ಮೆಟಾಲಿಕ್ ಎಂಬ 5 ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದ ಹೋಂಡಾ..

ಬಿಡುಗಡೆಗೂ ಮುನ್ನವೇ ಹೊಸ ಹೋಂಡಾ ಸಿವಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ರೆಸ್ಪಾನ್ಸ್..!

ಹೌದು ಬಿಡುಗಡೆಗೂ ಕೆಲ ದಿನಗಳ ಮುಂದಷ್ಟೆ ಗ್ರಾಹಕರು ಈಗಾಗಲೆ ಈ ಕಾರಿನ ಖರೀದಿಗಾಗಿ ಮುಗಿ ಬೀಳುತ್ತಿರುವ ಕಾರಣ ಗ್ರೇಟರ್ ನೋಯ್ಡಾ ಕಾರಿನ ಪ್ರೊಡಕ್ಷನ್ ಅನ್ನು ಮತ್ತಶ್ಟು ಹೆಚ್ಚಿಸಿ, ಬುಕ್ಕಿಂಗ್ ಪಡೆದ ಗ್ರಾಹಕರಿಗೆ ಶೀಘ್ರವೇ ಕಾರನ್ನು ನೀಡಲಿದ್ದಾರೆ.

Most Read Articles

Kannada
English summary
2019 Honda Civic Launched In India — Prices Start At Rs 17.69 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X