ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಕಾರುಗಳ ಕ್ರೇಜ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಇರುತ್ತದೆ. ಹಾಗೇ ಚೆನ್ನೈ ಮೂಲದ ವೈದ್ಯರೊಬ್ಬರಿಗೆ ಕಾರುಗಳ ಕ್ರೇಜ್ ಹೆಚ್ಚು ಇದೆ. ಇದರಿಂದಾಗಿ ತಮ್ಮ ಎರಡನೇ ತಲೆಮಾರಿನ ಹೋಂಡಾ ಸಿವಿಕ್ ಕಾರ್ ಅನ್ನು ಮಾಡಫೈ ಮಾಡಿದ್ದಾರೆ. ಸಾಮಾನ್ಯವಾದ ಹೋಂಡಾ ಸಿವಿಕ್ ಕಾರ್ ಅನ್ನು ಹೈ ಎಂಡ್ ಸಿವಿಕ್ ಟೈಪ್-ಆರ್ ಕಾರ್ ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ವೈದ್ಯರ ಬಳಿ ಇರುವ ಸಿವಿಕ್ ಐ-ವಿಟಿಇಸಿ ಕಾರ್ ಅನ್ನು ಮಾಡಿಫೈ ಮಾಡಲಾಗಿದೆ. ಕೇವಲ ಹೊರಾಂಗಣದ ಕಾಸ್ಮೇಟಿಕ್‍‍ಗಳನ್ನು ಬದಲಾವಣೆ ಮಾಡಲಾಗಿದೆ. ಕಾರಿನ ಇಂಟಿರಿಯರ್‍‍ನ ಫೀಚರ್ಸ್‍‍ಗಳನ್ನು ಮತ್ತು ಇಂಜಿನ್‍‍ಗಳ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಾಡಿಫೈ ಮಾಡಿದ ಚಿತ್ರವನ್ನು ಡಾ.ಅರುಣ್ ಅವರ ಫೇಸ್‍‍ಬುಕ್ ಖಾತೆಯಲ್ಲಿ ಅಪ್‍‍ಲೋಡ್ ಮಾಡಲಾಗಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಹೋಂಡಾ ಸಿವಿಕ್ ಟೈಪ್-ಆರ್ ರೀತಿಯಲ್ಲಿ ಮಾಡಿಫೈ ಮಾಡಿರುವ ಡಾ.ಪ್ರಶಾಂತ್ ಅರುಣ್ ಅವರು ಬಂಪರ್, ಸ್ಕರ್ಟ್ ಮತ್ತು ಸ್ಪಾಯ್ಲರ್‍‍‍ಗಳಂತಹ ಎಲ್ಲಾ ಪ್ರಮುಖ ಯುನಿ‍‍‍ಟ್‍ಗಳನ್ನು ಶೋಲಿಂಗನಲ್ಲೂರು ಮೂಲದ ಎಪಿಐ ಕಾರ್ಸ್‍ನಿಂದ ಆಮದು ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ದೇಶಿಯ ಮಾರುಕಟ್ಟೆಯ ಸಿವಿಕ್ ಐ-ವಿಟಿಇಸಿ ಕಾರು ಮಾಡಿಫೈ ಮಾಡಿದ ನಂತರ ಗ್ಲೋಬಲ್ ಸ್ಪೆಕ್ ಟೈಪ್ ಆರ್ ಕಾರ್ ಅನ್ನು ಹೋಲುತ್ತದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಕಾರಿನಲ್ಲಿ ಎಬಿಎಸ್ ಎಂದರೆ 'ಅಕ್ರಿಲೋನಿಟ್ರಿಲ್, ಬುಟಾಡಿನ್ ಮತ್ತು ಸ್ಟೈರೀನ್' ಅನ್ನು ಅಳವಡಿಸಲಾಗಿದೆ. ಹೋಂಡಾ ಸಿವಿಕ್ ಅನ್ನು ಬುಕ್ಕಿಂಗ್ ಮಾಡಿ ಡೀಲರ್‍‍ನಿಂದ ವಿತರಣೆಯನ್ನು ಪಡೆಯುವ ಮೊದಲೇ ಅವರು ಎಬಿಎಸ್ ಕಿಟ್ ಅನ್ನು ತರಿಸಿಕೊಂಡಿದ್ದಾರೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಹೋಂಡಾ ಸಿವಿಕ್ ಕಾರಿನ ಮಾಡಿಫೈ ಅನ್ನು ಎ‍‍ಪಿ‍ಐ ಕಾರ್ಸ್ ಮಾಡಿದೆ. ಮಾಡಿಫೈ ಮಾಡಿದ ಸಿವಿಕ್ ಕಾರು ಕಾಂಟ್ರಾಸ್ಟ್ ಮಿರರ್ ಮತ್ತು ಕಾರ್ಬ‍‍ನ್ ಫೈಬರ್ ಬಾನೆಟ್ ಅನ್ನು ಒಳಗೊಂಡಿದೆ. ಕಾರು ಫೆಂಡರ್‍‍ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಸಹ ಒಳಗೊಂಡಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಇತರ ಮಾರ್ಪಾಡುಗಳು 18 ಇಂಚಿನ ಸ್ಟೇಗೆರ್ಡ್ 8ಜೆ, 9ಜೆ ವೀಮನ್ ವ್ಹೀಲ್‍‍ಗಳು ಅಳವಡಿಸಲಾಗಿದೆ. ಮೈಕೆಲಿನ್ ಪೈಲಟ್ ಸ್ಪೋರ್ಟ್ ಟಯರ್‍‍ಗಳು ಮುಂಭಾಗದಲ್ಲಿ 235/40/18 ಮತ್ತು ಹಿಂಭಾಗದಲ್ಲಿ 245/40/18 ಹೊಂದಿದೆ. ಹೋಂಡಾ ಸಿವಿಕ್ ಟೈಪ್-ಆರ್‍‍ನಲ್ಲಿರುವ ಟಿಂಟೆಡ್ ವಿಂಡೋ ಮತ್ತು ಸೆರಾಮಿಕ್ ಕೋಟಿಂಗ್ ಅನ್ನು ಒಳಗೊಂಡಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಎಂಜಿನ್ ಯುನಿ‍‍ಟ್‍ಗಳಲ್ಲಿ ಮಾಡಿದ ಏಕೈಕ ಮಾರ್ಪಾಡು ಸ್ಟಾಕ್ ಒಂದರ ಕಸ್ಟಮ್ ಬಿಎಂಸಿ ಫಿಲ್ಟರ್ ಆಗಿದೆ. ಈ ಕಾರಿನ ಮೋಡಿಫೈಗೆ ಒಟ್ಟು ರೂ.3 ಲಕ್ಷದಷ್ಟು ಖರ್ಚು ಆಗಿದೆ. ಎರಡನೇ ತಲೆಮಾರಿನ ಹೋಂಡಾ ಸಿವಿಕ್ ಭಾರತದಲ್ಲಿ ಮಾರ್ಚ್ 2019ರಲ್ಲಿ ಬಿಡುಗಡೆಯಾಗಿತ್ತು. ಹೋಂಡಾ ಸಿವಿಕ್‍‍ನಲ್ಲಿ 1.8 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 174 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನೂ 1.6 ಲೀಟರ್ ಡೀಸೆಲ್ ಎಂಜಿನ್ 119 ಬಿ‍‍ಹೆಚ್‍‍ಪಿ ಪವರ್ ಮತ್ತು 300 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಸಿವಿ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಟೈಪ್ ಆರ್ ಕಾರ್‍‍ನಂತೆ ಮಾಡಿಫೈಗೊಂಡ ಹೋಂಡಾ ಸಿವಿಕ್

ಭಾರತದ ಎಕ್ಸ್ ಶೋರೂಂ ಪ್ರಕಾರ ಹೋಂಡಾ ಸಿವಿಕ್ ಬೆಲೆಯು ರೂ.17.94 ಲಕ್ಷದಿಂದ ರೂ.22.35 ಲಕ್ಷಗಳಾಗಿದೆ. ಭಾರತದಲ್ಲಿ ಹೋಂಡಾ ಕಂಪನಿಯು ಟೈಪ್-ಆರ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿಲ್ಲ. ಏಕೆಂದರೆ ಈ ಕಾರು ದುಬಾರಿಯಾಗಿದೆ. ಕಂಪನಿಯು ಕಾರ್ ಅನ್ನು ಸಿಬಿಯು ಆಗಿ ತರಬೇಕಾಗಿದೆ. ವೈದರಾದ ಡಾ. ಅರುಣ್ ಅವರ ಕಾರು ಕ್ರೇಜ್ ಅನ್ನು ಮೆಚ್ಚಲೇಬೇಕು.

Most Read Articles

Kannada
Read more on ಹೋಂಡಾ honda
English summary
Honda Civic Modified To Look Like Type-R Model: Owner Spends Rs 3 Lakh For Mods - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X