ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಜನಪ್ರಿಯ ಕಾರು ತಯಾರಕ ಕಂಪನಿ ಹೋಂಡಾ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಾಗಿ ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳತ್ತಿರುವ 5 ಆಸನವುಳ್ಳ ಹೆಚ್‍ಆರ್-ವಿ ಪ್ರೀಮಿಯಂ ಕ್ರಾಸ್ ಓವರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುತ್ತಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಹೋಂಡಾ ಇಂಡಿಯಾ ಸದ್ಯ ಅಕ್ರಾಡ್ ನ್ಯೂ ಜನರೇಷನ್ ಮತ್ತು ಮಧ್ಯಮ ಗಾತ್ರದ ಐಷಾರಾಮಿ ಆವೃತ್ತಿಯಾಗಿರುವ ಹೆಚ್ಆರ್‍-ವಿ ಸೇರಿದಂತೆ ಒಟ್ಟು 3 ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದು, ಹೆಚ್ಆರ್-ವಿ ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಹೆಚ್‍ಆರ್-ವಿ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿ 2014ರಲ್ಲೇ ಬಿಡುಗಡೆಗೊಂಡಿರುವ ಹೆಚ್ಆರ್-ವಿ ಕಾರು ಸಾಕಷ್ಟು ಬದಲಾವಣೆಗಳೊಂದಿಗೆ ಉತ್ತಮ ಮಾರಾಟ ಹೊಂದಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಸದ್ಯ ಈ ಕಾರು ಜಪಾನ್ ಮಾರುಕಟ್ಟೆಯಲ್ಲಿ ವೆಝೆಲ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತೀಯ ಮಾರುಕಟ್ಟೆಗಾಗಿ ಹೆಸರು ಬದಲಾಯಿಸಿರುವ ಹೋಂಡಾ ಸಂಸ್ಥೆಯು ಜಾಝ್ ಕಾರಿನ ಪ್ಲಾಟ್‍‍‍ಫಾರ್ಮ್‍‍ನಲ್ಲೇ ಹೊಸ ಕಾರುನ್ನು ಅಭಿವೃದ್ದಿಗೊಳಿಸಿ ಹೆಚ್‌ಆರ್-ವಿ ಹೆಸರಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಇದಕ್ಕಾಗಿಯೇ ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್‍-ವಿ ಕಾರಿನ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆಯಲಾಗಿದ್ದು, ಕಾರಿನ ಬೆಲೆ ತಗ್ಗಿಸಲು ಕೆಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಕೈಬಿಡಲಾಗಿದೆ. ಹಾಗೆಯೇ ಹೋಂಡಾ ಸಂಸ್ಥೆಯು ತನ್ನ ಹೊಸ ಮಾದರಿಯ 1.6-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಹೊಸ ಸಿವಿಕ್ ಕಾರಿಗೆ ಜೋಡಣೆ ಮಾಡಿ ಯಶಸ್ವಿಯಾಗಿದ್ದು, ಅದೇ ಎಂಜಿನ್ ಅನ್ನು ಇದೀಗ ಹೆಚ್‌ಆರ್-ವಿ ಆವೃತ್ತಿಯಲ್ಲೂ ಜೋಡಣೆಮಾಡುವ ಸಾಧ್ಯತೆಗಳಿವೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

2013ರ ಡೆಟ್ರಾಯ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವು ಬದಲಾವಣೆಗಳೊಂದಿಗೆ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಅಗಲವಾದ ಗ್ರಿಲ್, ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು, ಟ್ವಿಕ್ಡ್ ಫಾಗ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಹೊಸ ಫ್ರಂಟ್ ಬಂಪರ್ ಅನ್ನು ಅಳವಡಿಸಲಾಗಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಹಾಗೆಯೇ ಕಾರಿನ ಒಳಭಾಗದಲ್ಲಿ ಹೋಂಡಾ ಸಂಸ್ಥೆಯ ಸ್ಯಾಟ್‌ಲೈಟ್ ನ್ಯಾವಿಗೆಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಒಳಗೊಂಡ 11-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಮಾರುತಿ ಸುಜುಕಿ 6 ಸೀಟರ್ ಎಕ್ಸ್ಎಲ್6 ಬಿಡುಗಡೆ

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಇದಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಕೀ ಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಹಾಗೂ ಸೈಡ್ ಏರ್‌ಬ್ಯಾಗ್ಸ್, ಎಬಿಎಸ್, ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ನಂತಹ ಹಲವು ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್‍ಆರ್‍-ವಿ ಫೇಸ್‍‍ಲಿಫ್ಟ್ ಕಾರುಗಳು 4,295-ಎಂಎಂ ಉದ್ದ, 1,770-ಎಂಎಂ ಅಗಲ ಮತ್ತು 1,605-ಎಂಎಂ ಎತ್ತರವನ್ನು ಪಡೆದಿದ್ದು, 2,610ಎಂಎಂ ವ್ಹೀಲ್‍‍ಬೇಸ್ ಹಾಗು 470-ಲೀಟರ್‍ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಎಂಜಿನ್ ಸಾಮರ್ಥ್ಯ

ಹೊಸ ಹೆಚ್ಆರ್-ವಿ ಕಾರುಗಳು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.6 ಲೀಟರ್ ಐ-ವಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, ಪೆಟ್ರೋಲ್ ಎಂಜಿನ್‍‍ಗಳು 175-ಬಿಹೆಚ್‍‍ಪಿ ಮತ್ತು 220-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ವರ್ಷಾಂತ್ಯಕ್ಕೆ ಹೋಂಡಾ ವಿನೂತನ ಎಸ್‌ಯುವಿ ಹೆಚ್ಆರ್-ವಿ ಬಿಡುಗಡೆ ಖಚಿತ..!

ಇದರಿಂದಾಗಿ ಹೆಚ್ಆರ್-ವಿ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದ್ದು, ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಮಾರಾಟಕ್ಕೆ ಲಭ್ಯವಾಗಲಿದೆ.

Most Read Articles

Kannada
Read more on ಹೋಂಡಾ honda
English summary
According to reports, Honda is planning to launch HRV SUV in India soon.
Story first published: Saturday, August 24, 2019, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X