ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ದುಡ್ಡಿದ್ದರೆ ಪ್ರತಿಯೊಬ್ಬನಿಗೂ ಕಾರು ಮಾಲೀಕರಾಗುವುದು ಸುಲಭದ ವಿಚಾರ. ಅದೇ ಕಾರು ನಿರ್ವಹಣೆ ಮಾಡುವುದು ಅಂದ್ರೆ ಕೆಲವರಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತೆ. ಹೀಗಾಗಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಿರುವ ಕಾರನ್ನು ವರ್ಷಾನುಗಟ್ಟಲೆ ಹೊಸತರಂತೆ ಕಾಣಲು ಕೆಲವು ಸಿಂಪಲ್ ಟಿಪ್ಸ್‌ಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಚಾರ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಹೊಸ ಕಾರು ಖರೀದಿಯ ನಂತರ ಬಹುತೇಕರು ತಮ್ಮ ಮನೆಯ ಸದಸ್ಯನಂತೆಯೇ ಅದನ್ನು ಕೇರ್ ಮಾಡಿಯೇ ಮಾಡುತ್ತಾರೆ. ಆದರೂ ಕೂಡಾ ಕೆಲವು ಸಂದರ್ಭಗಳಲ್ಲಿ ಹೊಸ ಕಾರಿನ ನಿರ್ವಹಣೆ ಕುರಿತಾಗಿ ನಾವು ತೋರುವ ಸಣ್ಣಪುಟ್ಟ ನಿರ್ಲಕ್ಷ್ಯಗಳು ಕೆಲವೊಮ್ಮೆ ಹೊಸ ಕಾರಿನ ಮೌಲ್ಯಕ್ಕೆ ಧಕ್ಕೆ ತರುತ್ತವೆ. ಹೀಗಾಗಿ ಕಾಲಕಾಲಕ್ಕೆ ಕಾರಿನ ನಿರ್ವಹಣೆ ಮಾಡುವುದು ಹೇಗೆ? ಅದಕ್ಕಿರುವ ಸರಳ ಉಪಾಯಗಳು ಯಾವವು ಎನ್ನುವುದರ ಕುರಿತು ನಾವಿಲ್ಲಿ ಚರ್ಚಿಸಿದ್ದೇವೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಕಾರು ಖರೀದಿ ನಂತರ ಸರಿಯಾಗಿ ನಿರ್ವಹಣೆ ಮಾಡುವುದು ಒಂದು ಸವಾಲಿನ ವಿಚಾರ ಅಂದ್ರೆ ತಪ್ಪಾಗುವುದಿಲ್ಲ. ನಮಗೆ ಮೆಲ್ನೋಟಕ್ಕೆ ಕಾರು ಚೆನ್ನಾಗಿಯೇ ಕಂಡರೂ ಸಹ ತಾಂತ್ರಿಕವಾಗಿ ಕೆಲವೊಮ್ಮೆ ಅನುಭವಿ ತಜ್ಞರನ್ನು ಭೇಟಿ ಮಾಡುವುದೇ ಒಳಿತು. ಇದು ಕಾರಿನ ಆಯಸ್ಸು ಹೆಚ್ಚುವುದಲ್ಲದೇ ಸುಖಕರ ಪ್ರಯಾಣದ ಮೊದಲ ಗುಟ್ಟು ಎನ್ನಬಹುದು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಇದಕ್ಕಾಗಿ ಹಲವು ಹೊಸ ಸವಾಲುಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 3ಎಂ ಕಾರ್ ಕೇರ್ ಸಂಸ್ಥೆಯು ಕಾರುಗಳ ನಿರ್ವಹಣೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸೇವೆಗಳನ್ನು ನೀಡುತ್ತಿದ್ದು, ಹಳೆಯ ಕಾರುಗಳಿಗೆ ಮರುಜೀವ ನೀಡುವ 3ಎಂ ಕಾರ್ ಕೇರ್ ಟಿಪ್ಸ್‌ಗಳು ಕಾರು ಮಾಲೀಕರನ್ನು ಸೆಳೆಯದೇ ಇರಲಾರವು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಸದ್ಯ 70 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3ಎಂ ಸಂಸ್ಥೆಯು ನಮ್ಮ ಬೆಂಗಳೂರಿನಲ್ಲಿಯೂ ಸಹ ತನ್ನ ಮೊದಲ ಕಾರ್ ಕೇರ್ ಸರ್ವಿಸ್ ಸೆಂಟರ್ ಅನ್ನು ತೆರೆದಿದ್ದು, ಡ್ರೈವ್‌ಸ್ಪಾರ್ಕ್ ತಂಡಕ್ಕೂ ಆಹ್ವಾನ ನೀಡುವ ಕಾರು ನಿರ್ವಹಣೆಯಲ್ಲಿ ಆಗುತ್ತಿರುವ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿತು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಬೆಂಗಳೂರಿನ ಕೊರಮಂಗಲದಲ್ಲಿ ಆರಂಭವಾಗಿರುವ 3ಎಂ ಕಾರ್ ಕೇರ್ ಸಂಸ್ಥೆಯು ಎಂಟ್ರಿ ಲೆವಲ್ ಕಾರುಗಳಿಂದ ಹಿಡಿದು ಹೈ ಎಂಡ್ ಕಾರು ಮಾದರಿಗಳಿಗೂ ಸೇವೆ ನೀಡುತ್ತಿದ್ದು, ಕಾರ್ ಕೇರ್ ಸೆಂಟರ್ ಭೇಟಿ ವೇಳೆ ಗ್ರಾಹಕರ ಮಾಹಿತಿಗಾಗಿ ಕೆಲವು ಮಹತ್ವದ ಮಾಹಿತಿಗಳನ್ನ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಇದೇ ವೇಳೆ ನಾವು ಕೂಡಾ 2010ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್ ಕಾರನ್ನು ಸಹ ಸರ್ವಿಸ್‌ಗಾಗಿ ನೀಡಲಾಗಿತ್ತು. ಸುಮಾರು 8 ವರ್ಷಗಳಷ್ಟು ಹಳೆಯದಾದ ಕಾರುನ್ನು ಹಲವು ಪ್ರಯತ್ನಗಳೊಂದಿಗೆ ಅತ್ಯುತ್ತಮ ಲುಕ್‌ ನೀಡುವಲ್ಲಿ ಪ್ರಯತ್ನಿಸಿದ 3ಎಂ ಕಾರ್ ಕೇರ್ ಸಂಸ್ಥೆಯ ಪ್ರಯತ್ನ ನಿಜಕ್ಕೂ ನಮಗೆ ಅಚ್ಚರಿ ತರಿಸಿತ್ತು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ವಿವಿಧ ಹಂತಗಳಲ್ಲಿ ಹಳೆಯ ಕಾರಿಗೆ ಹೊಸತನ ನೀಡಿದ 3ಎಂ ಸಂಸ್ಥೆಯು ಹೊಸ ತಂತ್ರಜ್ಞಾನ ಬಳಕೆಯ ಮೂಲಕ ಬೆಂಝ್ ಸಿ-ಕ್ಲಾಸ್ ಆಕಾರವನ್ನೇ ಬದಲಾಯಿಸಿದ್ದಲ್ಲದೇ ಕೆಲವು ಎಕ್ಸ್‌ಕ್ಲೂಸಿವ್ ಸರ್ವಿಸ್‌ಗಳನ್ನು ಪರಿಚಯ ಮಾಡಿತು.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, 3ಎಂ ಸಂಸ್ಥೆಯು ವಿಶೇಷವಾಗಿ ಕಾರಿನ ಪೇಂಟಿಂಗ್ ಮತ್ತು ಕಾರಿನ ಒಳಭಾಗದ ಬೀಡಿಭಾಗಗಳ ನಿರ್ವಹಣೆ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಕಾರುಗಳ ಸೇವೆಗಳ ಮೇಲೆ ಸೀಮಿತ ಅವಧಿಗೆ ವಾರಂಟಿಗಳನ್ನು ಸಹ ಆಫರ್ ಮಾಡುತ್ತಿದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

3ಎಂ ಸಂಸ್ಥೆಯಲ್ಲಿರುವ ಪ್ರಮುಖ ಸೇವೆಗಳು

* ಪೇಂಟ್ ಶೈನ್ ಮತ್ತು ಶೈಲ್ಡ್ ಕೋಟಿಂಗ್

* ವೆಂಚರ್‌ಶೈಲ್ಡ್ ಪೇಂಟ್ ಪ್ರೊಟೆಕ್ಷನ್ ಫರ್ಮ್

* ಇಂಟಿರಿಯರ್ ಟ್ರಿಟ್‌ಮೆಂಟ್

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಹೀಗೆ ವಿವಿಧ ಹಂತದ ಸೇವೆಗಳ ಮೂಲಕ ಕಾರು ನಿರ್ವಹಣೆಯನ್ನು ಸರಳಗೊಳಿಸುವ ಮೂಲಕ ಕಾರಿನ ಅಂದವನ್ನು ಹೆಚ್ಚಿಸುವ 3ಎಂ ಸಂಸ್ಥೆಯು ಕಾರಿನ ಮೂಲ ಪೇಂಟಿಂಗ್ ಅಂದಕ್ಕಿಂತ ಹೆಚ್ಚು ಆಕರ್ಷಣೆಯಾಗುವಂತೆ ಮಾಡುತ್ತದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಹಾಗೆಯೇ ಗ್ರಾಹಕರ ಸೇವೆಗಳಲ್ಲೂ ಗುಣಮಟ್ಟ ಕಾಯ್ದುಕೊಂಡಿದ್ದು, ಅಗತ್ಯ ಸಿಬ್ಬಂದಿ ಮತ್ತು ನುರಿತ ತಜ್ಞರೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕಾರುಗಳ ಪೇಂಟಿಂಗ್ ಮರುವಿನ್ಯಾಸ ಮಾಡಿಕೊಡುವುದಲ್ಲದೆ ವಿವಿಧ ಹಂತವಾಗಿ ಸರ್ವೀಸ್ ಮಾಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಮೊದಲಿಗೆ ಕಾರುಗಳ ಅಂದವನ್ನು ತಗ್ಗಿಸುವ ಗೀಚುಗಳು ಮತ್ತು ಕಲೆಗಳನ್ನು ಪತ್ತೆಹಚ್ಚಲು ಉತ್ತಮ ತಂತ್ರಜ್ಞಾನ ಪ್ರೇರಣೆಯ ಬೆಳಕಿನ ಅಡಿ ಪರಿಶೀಲನೆ ಮಾಡುವ 3ಎಂ ಸಂಸ್ಥೆಯು ಉತ್ತಮ ರೀತಿಯಲ್ಲಿ ಪೇಂಟಿಂಗ್ ವಿಧಾನವನ್ನು ಕೈಗೊಳ್ಳುತ್ತೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಈ ವೇಳೆ 4 ಹಂತದ ಪ್ರಕ್ರಿಯೆಗಳನ್ನ ಕೈಗೊಳ್ಳಲಾಗುತ್ತೆ.

* ಪರಿಶೀಲನೆ- ಮೇಲೆ ಹೇಳಿದ ಹಾಗೆ ಕಾರಿನ ಹೊಸ ಪೇಂಟಿಂಗ್‌ಗೂ ಮುನ್ನ ಕಾರಿನ ಮೇಲ್ಫಾವನ್ನು ಕೂಲಂಕೂಶವಾಗಿ ಪರಿಶೀಲನೆ ಮಾಡಿಯೇ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳುವ 3ಎಂ ಸಂಸ್ಥೆಯು ಧೂಳಿನ ಕಣಗಳನ್ನು ತೆಗೆದುಹಾಕಲು ಕೆಲವು ಹೊಸ ತಂತ್ರಗಳನ್ನು ಅನುಸರಿಸುತ್ತೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ತದನಂತರವಷ್ಟೇ 3ಎಂ ಪೇಂಟ್ ಶೈನ್ ಮತ್ತು ಶೈಲ್ಡ್ ಕೋಟಿಂಗ್ ಮಾಡುವ ಮೂಲಕ ಅದನ್ನು ಒಣಗಿಸಲು ಸಹ ಹೊಸ ತಂತ್ರಗಳನ್ನು ಅನುಸರಿಸುತ್ತೆ. ಈ ವೇಳೆ ಪೇಂಟಿಂಗ್ ಮುಕ್ತಾಯಗೊಂಡಿರುವ ಕಾರುಗಳನ್ನು ಅತ್ಯಂತ ನಾಜೂಕಾಗಿ ಧೂಳು, ನೀರು ಮತ್ತು ಹೊರಗಿನ ಯಾವುದೇ ಅಂಶಗಳು ಕಾರಿನ ಪೇಂಟ್‌ಗೆ ಧಕ್ಕೆ ತರದಂತೆ ಕಾಯಲಾಗುತ್ತೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ತದನಂತರ 3ಎಂ ಮೈಕ್ರೋ ಫೈಬರ್ ಕ್ಲಾಥ್ ಹೊದಿಕೆ ಮಾಡಿ ಪೇಂಟಿಂಗ್ ಆರಿಸಲು ಸಹಕರಿಸುವ 3ಎಂ ಸಂಸ್ಥೆಯು ಕಾರಿನ ಪ್ರತಿ ತಿರುವುಗಳನ್ನು ಸಹ ಹೊಸತರಂತೆ ಕಾಣುವಂತೆ ನೋಡಿಕೊಳ್ಳುತ್ತೆ. ಇದಕ್ಕಾಗಿಯೇ 3ಎಂ ಸಂಸ್ಥೆಯು ತನ್ನದೇ ಆದ ವಾಶ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳುತ್ತೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ವಾಶಿಂಗ್, ವ್ಯಾಕ್ಸಿಂಗ್ ಮತ್ತು ಪೂಲಿಶಿಂಗ್ ಪ್ರಕ್ರಿಯೆಗಳಿಗಾಗಿ ತನ್ನದೇ ಆದ ಸ್ವಂತ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ 3ಎಂ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಮೆಗ್ಯೂರ್ಸ್ ಟಾಪ್ ಕೋಟ್, ಗೋಲ್ಡ್ ಕ್ಲಾಸ್ ರೀಚ್ ಲೆದರ್ ಮತ್ತು ನ್ಯಾಚುರಲ್ ಶೈನ್ ಪ್ರೋಟೆಕ್ಟ್ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಮೇಲಿನ ಎಲ್ಲಾ ಅಂಶಗಳನ್ನು ಪ್ರಯೋಗಿಸಿದ ನಂತರ ಕಾರಿನ ಪೇಂಟಿಂಗ್‌ನಲ್ಲಿ ಭಾರೀ ಬದಲಾವಣೆಗಳಾಗಲಿದ್ದು, ಕಾರಿನ ಮೂಲ ಬಣ್ಣಕ್ಕೂ ಹಾಗೂ 3ಎಂ ಮ್ಯಾಜಿಕ್ ಬಳಕೆಯ ನಂತರ ಆಗುವ ಬದಲಾವಣೆಗಳಲ್ಲಿನ ಪ್ರಮುಖ ಅಂಶಗಳನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಈ ವೇಳೆ ನಾವು ನೀಡಿದ್ದ ಮರ್ಸಿಡಿಸ್ ಬೆಂಝ್ ಕೂಡಾ ಮಹತ್ವದ ಬದಲಾಣೆ ಪಡೆದುಕೊಂಡಿದ್ದಲ್ಲದೇ ಕಾರಿನ ಶೈನ್ ಹೆಚ್ಚುವ ಮೂಲಕ ಹೊಸ ಕಾರನ್ನೇ ಮಿರಿಸುವಂತೆ ಮಾಡಿದ್ದು ನಮ್ಮನ್ನು ಅಚ್ಚರಿಗೊಳಿಸಿತು. 3ಎಂ ಮ್ಯಾಜಿಕ್ ಬಳಕೆಯ ನಂತರ ಕಾರಿನ ಬ್ಯಾನೆಟ್, ಗ್ರಿಲ್, ಡೋರ್‌ಗಳು, ಟಾಪ್‌ರೂಫ್, ಚಕ್ರಗಳ ನೋಟವೇ ಬದಲಾಗಿದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಟ್ರೈ ಮಾಡಿ ನೋಡಿ!

ಕಾರುಗಳ ಪೇಟಿಂಗ್ ನಿರ್ವಹಣೆಯು ಕಾರಿಗೆ ಆಗಾಗ ಹೊಸ ಹುರುಪು ನೀಡುವುದು ಮುಖ್ಯ ವಿಚಾರ ಎನ್ನಬಹುದು. ಹೀಗಾಗಿ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ 3ಎಂ ಸರ್ವಿಸ್ ಪ್ಯಾಕೇಜ್‌ಗಳನ್ನು ನೀವು ಆಯ್ದುಕೊಳ್ಳಬಹುದಾಗಿದೆ.

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಸರ್ವೀಸ್ ಮತ್ತು ಬೆಲೆಗಳು( ಜಿಎಸ್‌ಟಿ ಸೇರಿ)

3ಎಂ ಪೇಂಟ್ ಪ್ರೊಟೆಕ್ಷನ್ ಫರ್ಮ್- ರೂ. 595

ಪಿಪಿಎಫ್ ಡೋರ್ ಟ್ರಿಮ್ಸ್ ಪ್ಲಸ್ ಹ್ಯಾಂಡಲ್ಸ್ - ರೂ.2,418

ಸ್ಕಾಟ್‌ಗಾರ್ಡ್ ಪೇಂಟ್ ಪ್ರೊಟೆಕ್ಷನ್ ಫರ್ಮ್(ಪ್ರೋ ಸೀರಿಸ್)- ರೂ.1,689

ಪಿಪಿಎಫ್ ವೆಂಚರ್‌ಶೈಲ್ಡ್ - ರೂ.910

ರೋಡೆಂಟ್ ರಿಪ್ಲೆಂಟ್ ಟ್ರಿಟ್‌ಮೆಂಟ್- ರೂ. 1,140

ವಾಶ್(ಸ್ಮಾಲ್)- ರೂ.435

ವಾಶ್(ಮೀಡಿಯಂ)- ರೂ.564

ವಾಶ್(ಲಾರ್ಜ್)- ರೂ. 692

ವಾಶ್(ಲಾರ್ಜ್)- ರೂ.820

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ 3ಎಂ ಕಾರ್ ಕೇರ್ ಟಿಪ್ಸ್ ತಪ್ಪದೇ ಪಾಲಿಸಿ..!

ಹೀಗೆ ಹಲವು ಮಾದರಿಯ ಸರ್ವಿಸ್‌ಗಳನ್ನು ನೀಡುವ ಮೂಲಕ ಕಾರಿನ ಪೇಟಿಂಗ್‌ನಲ್ಲಿ ಮಹತ್ವದ ಬದಲಾವಣೆ ತರುತ್ತಿರುವ 3ಎಂ ಸಂಸ್ಥೆಯು ತನ್ನದೇ ಆದ ಸ್ವಂತ ತಂತ್ರಜ್ಞಾನ ಬಳಕೆ ಉತ್ಪನ್ನಗಳೊಂದಿಗೆ ಉತ್ತಮ ಸೇವೆಗಳೊಂದಿಗೆ ಗ್ರಾಹಕರ ಆಕರ್ಷಣೆ ಮಾಡುತ್ತಿದ್ದು, ನೀವು ಕೂಡಾ ಒಂದು ಸರಿ ಟ್ರೈ ಮಾಡಬಹುದಾಗಿದೆ.

Most Read Articles

Kannada
English summary
How To Make Your Old Car Look New? — Visit Your Nearest 3M Car Care Outlet. Read in Kannada.
Story first published: Tuesday, January 29, 2019, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X