ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ತಮ್ಮ ಪ್ರೀತಿ ಪಾತ್ರರಿಗೆ ಕಾಣಿಕೆಗಳನ್ನು ನೀಡುವುದು ಒಂದು ತರಹದ ಖುಷಿಯನ್ನು ನೀಡುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಕಾಣಿಕೆ ನೀಡುವುದರ ಮುಂದೆ ಬೇರೆಲ್ಲಾ ಕಾಣಿಕೆಗಳೂ ಗೌಣವಾಗಿವೆ. ಈ ಮೊದಲು ಸಹ ಈ ರೀತಿಯಲ್ಲಿ ಕಾರುಗಳನ್ನು ತಮ್ಮ ಪ್ರೀತಿ ಪಾತ್ರರಿಗೆ ಕಾಣಿಕೆ ನೀಡುವುದನ್ನು ನೋಡಿದ್ದೇವೆ.

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಬೆರಳೆಣಿಕೆಯಷ್ಟು ಜನ ಮಾತ್ರ ದುಬಾರಿ ಬೆಲೆಯ ಕಾರುಗಳನ್ನು ಸರ್ಪ್ರೈಸ್ ಗಿಫ್ಟ್ ನೀಡುತ್ತಾರೆ. ನಾವು ಈಗ ಹೇಳಲು ಹೊರಟಿರುವುದು ಆ ರೀತಿಯ ಒಂದು ಸರ್ಪ್ರೈಸ್ ಗಿಫ್ಟ್ ಬಗ್ಗೆ. ಈ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲಿ. ಇಲ್ಲಿ ಪತಿಯೊಬ್ಬರು ತಮ್ಮ ಪತ್ನಿಗೆ ಲ್ಯಾಂಬೊರ್ಗಿನಿ ಹುರಾಕನ್ ಎಲ್‍‍ಪಿ610-4 ಕಾರ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ. ಆಟೋ‍‍ಮೊಬಿಲಿ ಅರ್ಡೆಂಟ್, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವೀಡಿಯೊದಲ್ಲಿ ಈ ದಂಪತಿಗಳು ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂತಹ ಕ್ಷಣಗಳನ್ನು ತೋರಿಸಲಾಗಿದೆ.

ಲಾ ಫೆಮ್ ಸಿ‍ಇ‍‍ಒ ಡಾ ನಿಲುಫೆರ್ ಷರೀಫ್‍‍ರವರಿಗೆ ಅವರ ಪತಿ, ಜಿಯಾಲೊ ಇಂಟಿ ಫಿನಿಶ್ ಹೊಂದಿರುವ ಲ್ಯಾಂಬೊರ್ಗಿನಿ ಹುರಾಕನ್ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಈ ಕಾರು ರಸ್ತೆಗಿಳಿದಾಗ ಜನರ ಗಮನವನ್ನು ತನ್ನತ್ತ ಸೆಳೆಯಲಿದೆ.

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಗಂಡನು ತನ್ನ ಹೆಂಡತಿಗೆ ದುಬಾರಿ ಐಷಾರಾಮಿ ಕಾರುಗಳನ್ನು ಕಾಣಿಕೆಯಾಗಿ ನೀಡುವುದು ಬಲು ಅಪರೂಪ. ಇತ್ತೀಚಿಗೆ ಯು‍ಎ‍ಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಬ್ಬರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಕಾರ್ ಅನ್ನು ಕಾಣಿಕೆಯಾಗಿ ನೀಡಿದ್ದರು.

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಇದರಿಂದಾಗಿ ಆ ಮಹಿಳೆ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಲಿನನ್ ಕಾರು ಹೊಂದಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯನ್ನು ಪಡೆದರು. ಇನ್ನು ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3.7 ಕೋಟಿಗಳಾಗಿದ್ದು, ಬೆಂಗಳೂರಿನಲ್ಲಿ ತೆರಿಗೆಗಳನ್ನೆಲ್ಲಾ ಪಾವತಿಸಿ ರಸ್ತೆಗಿಳಿದ ನಂತರ ರೂ.4.8 ಕೋಟಿಗಳಾಗಲಿದೆ. ಭಾರತದಲ್ಲಿರುವ ಹುರಾಕನ್ ಕಾರು ಪವರ್‍‍ಫುಲ್ ಆವೃತ್ತಿಯಾಗಿದ್ದು, ಎಲ್ಲಾ ನಾಲ್ಕು ಚಕ್ರಗಳಿಗೂ ಪವರ್ ಕಳುಹಿಸುತ್ತದೆ.

MOST READ: ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಆದ ಕಾರಣ ಈ ಕಾರಿನ ಬೆಲೆಯು ಜಾಸ್ತಿಯಿದೆ. ಹುರಾಕನ್ ಕಾರಿನ ಮೂಲ ಮಾದರಿಯು ಕೇವಲ ಆರ್‍‍ಡಬ್ಲ್ಯು‍‍ಡಿ ಸೆಟ್ ಅಪ್ ಹೊಂದಿದೆ. ಭಾರತದಲ್ಲಿ ಹಲವಾರು ಮಂದಿ ಈ ಲ್ಯಾಂಬೊರ್ಗಿನಿ ಹುರಾಕನ್ ಕಾರನ್ನು ಹೊಂದಿದ್ದಾರೆ.

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಇದರಲ್ಲಿರುವ ಏರ್ ಸಸ್ಪೆಂಷನ್‍‍ನಿಂದಾಗಿ ಈ ಕಾರು 45 ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿ, ಕೆಟ್ಟದಾಗಿರುವ ರಸ್ತೆಗಳಲ್ಲಿ, ಕಾನೂನು ಬಾಹಿರವಾಗಿ ಹಾಕಲಾಗಿರುವ ಹಂಪ್‍‍ಗಳಲ್ಲಿ ಸರಾಗವಾಗಿ ಚಲಿಸುತ್ತದೆ. ಕಾರ್ಬನ್ ಫೈಬರ್ ಹಾಗೂ ಅಲ್ಯುಮಿನಿಯಂನಿಂದ ತಯಾರಿಸಲಾಗಿರುವ ಈ ಕಾರು ಹೆಚ್ಚು ಬಲಶಾಲಿಯಾಗಿರುವುದರ ಜೊತೆಗೆ ಕಡಿಮೆ ತೂಕವನ್ನು ಹೊಂದಿದೆ.

MOST READ: ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಈ ಕಾರಿನಲ್ಲಿ ಅಳವಡಿಸಲಾಗಿರುವ ವಿ10 ಎಂಜಿನ್ 602 ಬಿ‍‍‍ಹೆಚ್‍‍ಪಿ ಹಾಗೂ 560 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಮೂರು ವಿವಿಧ ಬಗೆಯ ಡ್ರೈವಿಂಗ್ ಮೋಡ್‍‍ಗಳನ್ನು ಅಳವಡಿಸಲಾಗಿದೆ. ಕಾರಿನ ಪವರ್ ಔ‍‍ಟ್‍‍ಪುಟ್, ಸ್ಟೀಯರಿಂಗ್‍‍ಗಳು ಬಲಿಷ್ಟವಾಗಿವೆ.

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಈ ಕಾರು 0-100 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಕಾರಿನಲ್ಲಿರುವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನಿಂದಾಗಿ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೂ ಪವರ್ ದೊರೆಯುತ್ತದೆ. ಇಟಲಿ ಮೂಲದ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ, ಗಲ್ಲಾರ್ಡೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಹುರಾಕನ್ ಕಾರನ್ನು ಬಿಡುಗಡೆಗೊಳಿಸಿತು.

MOST READ: ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಬಿಡುಗಡೆಯಾದಾಗಿನಿಂದ ಈ ಕಾರು ಈ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಲ್ಯಾಂಬೊರ್ಗಿನಿ ಕೆಲವು ತಿಂಗಳುಗಳ ಹಿಂದಷ್ಟೆ ಉರುಸ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು, ಈ ಕಾರು ಭಾರತದಲ್ಲಿ ಹಾಗೂ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ.

Source: Automobiliardent/Instagram

Most Read Articles

Kannada
English summary
Husband gifts wife a Lamborghini Huracan supercar in India - Read in kannada
Story first published: Tuesday, June 18, 2019, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X