ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಗಳಿಗೆ ಚಾಲನೆ ನೀಡಿದ್ದು, ಹ್ಯುಂಡೈ ಇಂಡಿಯಾ ಮತ್ತು ಕಿಯಾ ಮೋಟಾರ್ಸ್ ಸಹ ಈ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗಿವೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಹೌದು, ದಕ್ಷಿಣ ಕೊರಿಯಾದ ಆಟೋ ದಿಗ್ಗಜ ಸಂಸ್ಥೆಗಳಾದ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಭಾರತದಲ್ಲಿ ಸಾಮಾನ್ಯ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ವರ್ಷನ್ ಕಾರುಗಳನ್ನು ಬಿಡುಗಡೆಗೊಳಿಸುವುದಕ್ಕಾಗಿ ವಿವಿಧ ಮಾದರಿಯ ಕೆಲವು ಎಲೆಕ್ಟ್ರಿಕ್ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣಗೊಳಿಸುವ ಸಂಬಂಧ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಕೆಲವು ವರದಿಗಳ ಪ್ರಕಾರ, ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಭಾರತದಲ್ಲೇ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಮುಂದಾಗಿದ್ದು, ಸದ್ಯಕ್ಕೆ ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾದ ಕಾರುಗಳನ್ನು ಇಲ್ಲಿ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಇದು ಹೆಚ್ಚು ಸ್ಥಳೀಯವಾಗಿ ನಿರ್ಮಾಣವಾದ ಕಾರುಗಳಿಂತ ಎರಡು ಪಟ್ಟು ಹೆಚ್ಚು ವೆಚ್ಚದಾಯಕವಾಗಿದ್ದು, ಲಾಭಾಂಶದಲ್ಲೂ ಹೆಚ್ಚು ನೀರಿಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಬಹುತೇಕ ವಿದೇಶಿ ಕಾರು ಸಂಸ್ಥೆಗಳು ಅರಿತುಕೊಂಡಿವೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಒಂದು ವೇಳೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ವಿದೇಶಿಯಲ್ಲಿರುವ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕಗಳ ಮೇಲೆ ಅಲಂಬಿತವಾದಲ್ಲಿ ಕಾರುಗಳ ಬೆಲೆ ಹೆಚ್ಚಳವಾಗಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕಾರುಗಳನ್ನು ನಿರ್ಮಾಣ ಮಾಡಿ ಬೆಲೆ ತಗ್ಗಿಸುವುದರ ಜೊತೆಗೆ ಭಾರೀ ಪ್ರಮಾಣದಲ್ಲಿ ಕಾರುಗಳನ್ನು ಮಾರಾಟ ಮಾಡಬಹುದು ಎನ್ನುವುದು ಹ್ಯುಂಡೈ ಮತ್ತು ಕಿಯಾ ಲೆಕ್ಕಾಚಾರವಾಗಿದೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಸದ್ಯ ಭಾರತದಲ್ಲಿ ಎಂಟ್ರಿ ಲೆವಲ್ ಸ್ಯಾಂಟ್ರೋ ಜೊತೆಗೆ ಪ್ರಮುಖ 8 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ನಾಲ್ಕು ಕಾರು ಮಾದರಿಗಳು ಸದ್ಯ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿವೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಇದೇ ಕಾರಣಕ್ಕೆ ತನ್ನ ಭವಿಷ್ಯದ ಕಾರು ಮಾದರಿಗಳನ್ನು ಸಹ ಗ್ರಾಹಕರ ಆದ್ಯತೆಯ ಮೇರೆಗೆ ಪರಿಚಯಿಸುವ ಬಗ್ಗೆ ಮಹತ್ವದ ಸುಳಿವು ನೀಡಿರುವ ಹ್ಯುಂಡೈ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ತಮಿಳುನಾಡಿನ ಚೆನ್ನೈ ಬಳಿ ಒಂದೇ ಒಂದು ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೂಡಿ ಬೀಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಕಾರು ಮಾರಾಟ ಮಾಡುತ್ತಿದ್ದು, ಇದೀಗ ಇದೇ ಘಟಕವನ್ನು ವಿಸ್ತರಿಸಲು ನಿರ್ಧರಿಸಿರುವ ಹ್ಯುಂಡೈ, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೂ ಸಹಕಾರಿಯಾಗುವಂತೆ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲು ನಿರ್ಧರಿಸಿದೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹೊಸ ಘಟಕಗಳಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸುವ ಹೊಸ ಘಟಕದ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎನ್ನಲಾಗಿದೆ.

ಭಾರತದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ ಕಿಯಾ ಮತ್ತು ಹ್ಯುಂಡೈ

ಇನ್ನು ಕಿಯಾ ಸಂಸ್ಥೆಯು ಸಹ ಮುಂದಿನ ತಿಂಗಳು ತನ್ನ ಮೊದಲ ಕಾರನ್ನು ಭಾರತದಲ್ಲಿ ಬಿಡುಗಡೆಗಾಗಿ ಸಿದ್ದಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಯಾ ಸಹ ಕೆಲವು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಹೀಗಾಗಿ ಕಿಯಾ ಸಂಸ್ಥೆಯು ಸಹ ಭಾರತದಲ್ಲೇ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಿ ಬಿಡುಗಡೆಗಾಗಿ ಚಿಂತನೆ ನಡೆಸಿದೆ.

Most Read Articles

Kannada
English summary
South Korean car maker Hyundai and Kia is planning to start local assembly of electric cars in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X