ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಭಾರತಕ್ಕೆ ಕಾಲಿಟ್ಟು ಎರಡು ದಶಕಗಳು ಕಳೆದಿವೆ. ಈ ಎರಡು ದಶಕಗಳಲ್ಲಿ ಹ್ಯುಂಡೈ ನಾಲ್ಕು ಚಕ್ರಗಳ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹ್ಯುಂಡೈ ಮೋಟಾರ್ ತನ್ನ ಸಾಂಪ್ರಾದಾಯಿಕ ವಾಹನಗಳಿಗೆ ಹೆಸರುವಾಸಿಯಾಗಿದೆ. ಈ ಆಟೋ ದೈತ್ಯ ಕಂಪನಿಯು ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಎಲೆಕ್ಟ್ರಿಕ್ ಮತ್ತು ಕನೆಕ್ಟೆಡ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿದೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈ ಇಂಡಿಯಾದ ಹೊಸ ಕಾರ್ಪೊರೇಟ್ ಪ್ರಚಾರದ ಸ್ಲೋಗನ್ ಒಂದಾನೊಂದು ಕಾಲದಲ್ಲಿ ಹ್ಯುಂಡೈ ಕಾರು ಕಂಪನಿಯಾಗಿತ್ತು ಎಂಬುದಾಗಿದ್ದು, ಭವಿಷ್ಯದಲ್ಲಿ ಕಂಪನಿಯು ಎಲೆಕ್ಟ್ರಿಕ್ ಮತ್ತು ಸ್ಮಾರ್ಟ್ ಮೊಬಿಲಿಟಿಯತ್ತ ಹೆಜ್ಜೆ ಹಾಕುತ್ತಿರುವುದರ ಪ್ರತೀಕವಾಗಿದೆ. ಹ್ಯುಂಡೈ ಕಂಪನಿಯು ಈಗ ತನ್ನನ್ನು ಬಹುಪ್ರಕಾರಗಳ ಮೊಬಿಲಿಟಿ ಸಲ್ಯೂಷನ್ ಕಂಪನಿ ಎಂದು ಬಿಂಬಿಸಿಕೊಳ್ಳುತ್ತಿದೆ. ಹ್ಯುಂಡೈ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿ‍ಇ‍ಒ ಎಸ್‍ಎಸ್‍ ಕಿಮ್ ರವರು ಕಂಪನಿಯ ಹೊಸ ಕಾರ್ಪೊರೇಟ್ ಕ್ಯಾಂಪೇನ್ ಬಗ್ಗೆ ಮಾತನಾಡಿದ್ದಾರೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಭವಿಷ್ಯದ ಮೊಬಿಲಿಟಿ ಸಲ್ಯೂಷನ್ ನಲ್ಲಿ ಮುಂದಿದ್ದು, ಭಾರತದ ದೃಷ್ಠಿಕೋನವಾದ, ಶೇರ್ಡ್, ಕನೆಕ್ಟೆಡ್ ಮತ್ತು ಝೀರೋ ಎಮಿಷನ್ ಮೊಬಿಲಿಟಿಗಳನ್ನು ಕಾರ್ಯರೂಪಕ್ಕೆ ತರಲು ಬದ್ದತೆಯನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಅದನ್ನು ತಮ್ಮ ಗ್ರಾಹಕರಿಗೆ ತಲುಪಿಸಲಿದೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ನಾವು ಮಾರುಕಟ್ಟೆಗೆ ಹೊಸ ತಲೆಮಾರಿನ ಮೊಬಿಲಿಟಿ ಸಲ್ಯೂಷನ್ ಬಿಡುಗಡೆ ಮಾಡಲಿದ್ದೇವೆ. ನಾವು ಮೊದಲಿನಿಂದಲೂ ನಮ್ಮ ಗ್ರಾಹಕರಿಗೆ ನಮ್ಮ ಸೇವೆಗಳನ್ನು ತಲುಪಿಸುತ್ತಾ ಬಂದಿದ್ದೇವೆ. ಮೊಬಿಲಿಟಿಯ ಭವಿಷ್ಯವು ಈಗ ನಮ್ಮ ಮುಂದಿದ್ದು, ಹ್ಯುಂಡೈ ತನ್ನ ಗ್ರಾಹಕರಿಗೆ ಉತ್ತಮವಾದ ಸೌಲಭ್ಯಗಳನ್ನು ಹಾಗೂ ಸೇವೆಯನ್ನು ಒದಗಿಸಲಿದೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ನಾವು ಐಟಿ ಟೆಕ್ನಾಲಜಿಯನ್ನು ಆದಷ್ಟು ನಿಯಂತ್ರಿಸಿ ಚಾಲಕನ ಸುರಕ್ಷತೆಗೆ, ಅನುಕೂಲಕ್ಕೆ, ಕ್ಷೇಮಕ್ಕೆ, ಯಾವಾಗಲೂ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು. ಹ್ಯುಂಡೈನ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ - ಶೇರ್ಡ್ ಮೊಬಿಲಿಟಿ, ಕನೆಕ್ಟೆಡ್ ಮೊಬಿಲಿಟಿ ಮತ್ತು ಕ್ಲೀನ್ ಮೊಬಿಲಿಟಿ - ಎಂಬ ಮೂರು ವಿಧಗಳಲ್ಲಿ ಇರಲಿದೆ. ಶೇರ್ಡ್ ಮೊಬಿಲಿಟಿಯ ಮೂಲಕ ಹ್ಯುಂಡೈ ಕಂಪನಿಯು ಕಾರ್ ಶೇರಿಂಗ್ ಮತ್ತು ಟ್ಯಾಕ್ಸಿ ಸರ್ವಿಸ್‍‍ಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಈಗಾಗಲೇ ತನ್ನ ಸೋದರ ಸಂಸ್ಥೆಯಾದ ಕಿಯಾದ ಸಹಭಾಗಿತ್ವದಲ್ಲಿ ಕ್ಯಾಬ್ ಸೇವೆಯಲ್ಲಿ ಅಗ್ರಸ್ಥಾನದಲ್ಲಿರುವ ಒಲಾದಲ್ಲಿ ಬಂಡವಾಳ ಹೂಡಿಕೆ ಮಾಡಿದೆ.

MOST READ: ಮಹೀಂದ್ರಾ ಕಾರುಗಳ ಮೇಲೆ ಮೇ ಅವಧಿಯಲ್ಲಿನ ಭರ್ಜರಿ ಆಫರ್‍‍ಗಳು

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈನ ಕನೆಕ್ಟೆಡ್ ಮೊಬಿಲಿಟಿಯ ಗುರಿಯು ಕನೆಕ್ಟೆಡ್ ಕಾರುಗಳ ಸಮೂಹವನ್ನು ಸೃಷ್ಠಿಸುವುದಾಗಿದ್ದು, ಇದರಲ್ಲಿ ಗ್ರಾಹಕರ ಕಾರುಗಳು ಬೇರೆ ಕಾರುಗಳ ಜೊತೆ, ವರ್ಕ್ ಸ್ಪೇಸ್‍‍ಗಳ ಜೊತೆ ಮತ್ತು ಬೇರೆ ಡಿವೈಸ್‍‍ಗಳ ಜೊತೆಯಲ್ಲಿ ಕನೆಕ್ಟ್ ಆಗಿರುತ್ತವೆ. ಹ್ಯುಂಡೈನ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯು‍‍ವಿ ಹ್ಯುಂಡೈ ಕಂಪನಿಯು ಕನೆಕ್ಟೆಡ್ ಮೊಬಿಲಿಟಿ ಯೋಜನೆಯಲ್ಲಿ ಇಟ್ಟ ಮೊದಲ ಹೆಜ್ಜೆಯಾಗಿದೆ. ಈ ವಾಹನವು 2019ರ ಮೇ 21ರಂದು ಬಿಡುಗಡೆಯಾಗಲಿದೆ.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಹ್ಯುಂಡೈ ಮುಂಬರುವ ದಿನಗಳಲ್ಲಿ ಕ್ಲೀನ್ ಮೊಬಿಲಿಟಿ ಸೇವೆಯನ್ನು ಆರಂಭಿಸಲಿದ್ದು, ಈ ಸೇವೆಗಳಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮತ್ತು ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ. ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಈಗಾಗಲೇ ತನ್ನ ಎಲೆಕ್ಟ್ರಿಕ್ ವಾಹನವಾದ ಹ್ಯುಂಡೈ ಕೋನಾವನ್ನು ಈ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಈ ವಾಹನವನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

ಸ್ಮಾರ್ಟ್ ಮೊಬಿಲಿಟಿ ಯೋಜನೆಗೆ ಚಾಲನೆ ನೀಡಿದ ಹ್ಯುಂಡೈ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕಂಪನಿಯು ಭವಿಷ್ಯದಲ್ಲಿನ ಯೋಜನೆಗಳಿಗಾಗಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ವಾಸ್ತವವಾಗಿ ಹ್ಯುಂಡೈ ಸುಮಾರು 7,000 ಕೋಟಿ ರೂಪಾಯಿಗಳನ್ನು ತನ್ನ ಯೋಜನೆಯನ್ನು ವಿಸ್ತರಿಸಲು ಮತ್ತು ಭಾರತದಲ್ಲಿ ಹೊಸ ಘಟಕಗಳನ್ನು ತೆರೆಯಲು ಹೂಡಿಕೆ ಮಾಡಲಿದೆ. ಹ್ಯುಂಡೈ ಕ್ಲೀನ್ ಮೊಬಿಲಿಟಿಯಲ್ಲಿ ಅಗ್ರಸ್ಥಾನದಲ್ಲಿರಲಿದೆ.

Most Read Articles

Kannada
English summary
Hyundai Announces Smart Mobility Plan — To Focus On Electric, Clean, Connected Cars - Read in kannada
Story first published: Thursday, May 9, 2019, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X