ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಇಂಡಿಯಾ ಭಾರತದಲ್ಲಿನ ತನ್ನ ಗ್ರಾಹಕರಿಗಾಗಿ ಉಚಿತವಾಗಿ ಸರ್ವಿಸ್ ನೀಡುವ ಯೋಜನೆಯೊಂದನ್ನು ಘೋಷಿಸಿದ್ದು, ಉಚಿತ ಕಾರ್ ಕೇರ್ ಕ್ಲಿನಿಕ್ ಯೋಜನೆಯು ದೇಶಾದ್ಯಂತ ಏಪ್ರಿಲ್ 12ರಿಂದ ಏಪ್ರಿಲ್ 21 ರವರೆಗೆ ಹಮ್ಮಿಕೊಳ್ಳಲಾಗಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಈ ಯೋಜನೆಯು ದೇಶಾದ್ಯಂತ ಇರುವ ಎಲ್ಲಾ ಔಟ್‍ಲೆಟ್‍ಗಳಲ್ಲಿ ಲಭ್ಯವಿರಲಿದ್ದು, ಹ್ಯುಂಡೈ ಗ್ರಾಹಕರು ದೇಶಾದ್ಯಂತವಿರುವ 1,300 ಸರ್ವಿಸ್ ಕೇಂದ್ರಗಳಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಹ್ಯುಂಡೈ ಗ್ರಾಹಕರು ದೇಶಾದ್ಯಂತವಿರುವ ಸರ್ವಿಸ್ ಕ್ಯಾಂಪ್‍ಗಳಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಅವುಗಳಲ್ಲಿ ಬಿಡಿ ಭಾಗಗಳ ಮೇಲೆ, ಲೇಬರ್ ಚಾರ್ಜ್ ಜೊತೆ ರೋಡ್ ಸೈಡ್ ಅಸಿಸ್ಟೆಂಟ್ ಮೇಲೆ ಭಾರೀ ಪ್ರಮಾಣದ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಅಲ್ಲದೇ ಹ್ಯುಂಡೈ ಮೋಟಾರ್ಸ್ ಕಾರುಗಳ ಇಂಜಿನ್, ಟ್ರಾನ್ಸ್ಮಿಶನ್, ಎಲೆಕ್ಟ್ರಿಕಲ್ ಮತ್ತು ಎಕ್ಸ್ ಟಿರಿಯರ್‍‍ಗಳ ಸಮಗ್ರ ಪರಿಶೀಲನೆ ಮೇಲೂ 50 ಪಾಯಿಂಟ್‍ಗಳನ್ನು ಸಹ ನೀಡಲಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಬಿಡಿ ಭಾಗಗಳ ಮೇಲೆ ಶೇಕಡಾ 10, ಲೇಬರ್ ಚಾರ್ಜ್ ಮೇಲೆ ಶೇಕಡಾ 30, ರೋಡ್ ಸೈಡ್ ಅಸಿಸ್ಟೆಂಟ್ ಮೇಲೆ ಶೇಕಡಾ 20, ವಿಎಎಸ್ ಮೇಲೆ ಶೇಕಡಾ 40 ಮತ್ತು ಎಸಿ ಗ್ಯಾಸ್ ಮೇಲೆ ಶೇಕಡಾ 10ರವರೆಗೆ ರಿಯಾಯಿತಿ ಸಿಗಲಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಈ ಯೋಜನೆಯ ಅವಧಿಯಲ್ಲಿ ಯಾವುದಾದರೂ ಫ್ಯಾಮಿಲಿಯ ಸದಸ್ಯನ ಹುಟ್ಟುಹಬ್ಬವು ಬಂದಲ್ಲಿ ಫ್ಯಾಮಿಲಿ ಸಂಡೇ ಹೆಸರಿನಲ್ಲಿ ಬಿಡಿ ಭಾಗಗಳ ಮೇಲೆ ಶೇಕಡಾ 10ರ ರಿಯಾಯಿತಿ ಪಡೆಯಬಹುದಾಗಿದ್ದು, ಹ್ಯುಂಡೈ ಗ್ರಾಹಕರು ಮತದಾನ ಮಾಡಿರುವ ಗುರುತನ್ನು ತೋರಿಸಿದರೆ ಬಿಡಿ ಭಾಗಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಇಂಡಿಯಾದ ಎಂ.ಡಿ ಮತ್ತು ಸಿಇಒ ಎಸ್.ಎಸ್.ಕಿಮ್ ರವರ ಪ್ರಕಾರ, ಭಾರತದ ಅತ್ಯಂತ ಪ್ರೀತಿ ಪಾತ್ರವಾದ ಮತ್ತು ಪ್ರಾಮಾಣಿಕವಾದ ಬ್ರಾಂಡ್ ಗಳಲ್ಲಿ ಒಂದಾದ ಹ್ಯುಂಡೈ ಕಂಪನಿಯು ತನ್ನ ಗ್ರಾಹಕರು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚು ಸೇವೆಯನ್ನು ನೀಡಲು ಉತ್ಸುಕವಾಗಿದ್ದು, ಗ್ರಾಹಕರ ಸುರಕ್ಷೆಯೇ ನಮ್ಮ ಗುರಿಯಾಗಿದೆ ಎಂದಿದ್ದಾರೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಭಾರತದಲ್ಲಿ ತನ್ನ ಹೊಸ ಉತ್ಪನ್ನವಾದ ವೆನ್ಯೂ ಎಸ್‍ಯುವಿಯನ್ನು ಪರಿಚಯಿಸುವತ್ತ ಹ್ಯುಂಡೈ ಕಾರ್ಯ ನಿರತವಾಗಿದೆ. ಭಾರತ ಮತ್ತು ನಿಯಾಸ್‍ಗಳಲ್ಲಿ ಒಂದೇ ಬಾರಿಗೆ ಕಾರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೊರಿಯಾ ಮೂಲದ ಕಂಪನಿಯು ಈಗಾಗಲೇ ಹ್ಯುಂಡೈ ವೆನ್ಯೂವಿನ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಹ್ಯುಂಡೈ ವೆನ್ಯೂ ಕಾರು ಬ್ರಾಂಡ್ ಲೈನ್ ಅಪ್ ನಲ್ಲಿ, ಈಗಾಗಲೇ ಜನಪ್ರಿಯವಾಗಿರುವ ಕ್ರೆಟಾ ಕಾರಿಗಿಂತ ಕೆಳಗೆ ಇರಲಿದೆ. ವೆನ್ಯೂ ಕಾರು ಮಹೀಂದ್ರಾ ಎಕ್ಸ್ ಯುವಿ 300, ಮಾರುತಿ ವಿಟಾರ ಬ್ರಿಝಾ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಸಂಸ್ಥೆಯು ಕಾರ್ ಕೇರ್ ಕ್ಲಿನಿಕ್ ಯೋಜನೆಯಲ್ಲಿ ತನ್ನ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಕಳೆದ ವರ್ಷವೂ ಹ್ಯುಂಡೈ ಕಾರ್ ಕೇರ್ ಕ್ಲಿನಿಕ್ ಯೋಜನೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯಗಳನ್ನು ಪಡೆದಿದ್ದರು. ಈ ಬಾರಿಯೂ ಉಚಿತವಾಗಿ ಕಾರ್ಯಗಾರವನ್ನು ಆರಂಭಿಸಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

Most Read Articles

Kannada
English summary
Hyundai Announces Free ‘Car Care Clinic’ Service Program — Held Between 12th To 21st April 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X