ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಮಾರುತಿ ಸುಜುಕಿಯ ನಂತರ ಹ್ಯುಂಡೈ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಕೊರಿಯನ್ ಬ್ರ್ಯಾಂಡ್ ತನ್ನ ಕಾರುಗಳನ್ನು ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸ್ಥಿರವಾಗಿ ಪ್ರದರ್ಶಿಸುವ ಭಾರತದ ಏಕೈಕ ಬ್ರ್ಯಾಂಡ್ ಆಗಿದೆ. ಮಾರುತಿ ಸುಜುಕಿ ಮಾರುಕಟ್ಟಿಯಲ್ಲಿ ಕುಸಿತವನ್ನು ಎದುರಿಸುತ್ತಿರುವಾಗ ಹ್ಯುಂಡೈ ಅದರ ಲಾಭವನ್ನು ಪಡೆದುಕೊಂಡಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಗ್ರ್ಯಾಂಡ್ ಐ10 ನಿಯೋಸ್ ಮತ್ತು ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಹೆಚ್ಚಿನ ಸುಧಾರಣೆಯಾಗಿದೆ. ಹ್ಯುಂಡೈ ವೆನ್ಯೂ ಮೇ ತಿಂಗಳಲ್ಲಿ ಮಾರಾಟಕ್ಕೆ ಬಂದ ಬ್ರ್ಯಾಂಡ್‍‍ನ ಕಾಂಪ್ಯಾಕ್ಟ್ ಎಸ್‍‍ಯು‍ವಿಯಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಮಿಡ್‍ ಲೆವೆಲ್ ಹ್ಯಾಚ್‍‍ಬ್ಯಾಕ್ ಮಾದರಿಯಾಗಿದ್ದು, ಇದನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಬಿ‍ಡುಗಡೆಗೊಳಿಸಲಾಗಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಈ ಎರಡು ಮಾದರಿಗಳು ಬಿಡುಗಡೆಯಾದಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹ್ಯುಂಡೈ ವೆನ್ಯೂ ಕಳೆದ ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯು‍‍ವಿಯಾಗಿದೆ. ಇದರ ಪ್ರತಿಸ್ಪರ್ಧಿ ಮಾರುತಿ ವಿಟಾರಾ ಬ್ರೆಝಾವನ್ನು ಹಿಂದಿಕ್ಕಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಮತ್ತೊಂದೆಡೆ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‍‍ಬ್ಯಾಕ್ ಮೂರನೇ ತಲೆಮಾರಿನ ಪುನರಾವರ್ತನೆಯಾಗಿದೆ. ಭಾರತೀಯ ಶ್ರೇಣಿಯಲ್ಲಿ ಹಿಂದಿನ ಪೀಳಿಗೆಯ ಮಾದರಿಯೊಂದಿಗೆ ನಿಯೋಸ್ ಅನ್ನು ಮಾರಾಟ ಮಾಡಲಾಗುತ್ತಿದೆ. ಹ್ಯುಂಡೈ ಗ್ರ್ಯಾಂಡ್ ಐ ನಿಯೋಸ್ ದೇಶೀಯ ಮಾರುಕಟ್ಟೆಯಲ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಭಾರತದಲ್ಲಿ ಕೊರಿಯನ್ ಬ್ರ್ಯಾಂಡ್‍‍ಗೆ ಹೆಚ್ಚು ಮಾರಾಟವಾದ ಮಾದರಿ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಆಗಿದೆ. ಹ್ಯುಂಡೈ ಎಲೈಟ್ ಐ 20 ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍‍ನಿಂದ ಅತ್ಯಂತ ಜನಪ್ರಿಯ ಹ್ಯಾಚ್‍‍ಬ್ಯಾಕ್ ಆಗಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ಎಲೈಟ್ ಐ20 ಹ್ಯಾಚ್‍‍‍ಬ್ಯಾಕ್ 10,141 ಮಾರಾಟವಾಗಿದೆ. ಗ್ರ್ಯಾಂಡ್ ಐ 10ಹ್ಯಾಚ್‍‍ಬ್ಯಾಕ್ 9,358 ಯುನಿ‍‍ಟ್‍ಗಳು ಮಾರಾಟವಾಗಿ ಎರಡನೇ ಸ್ಥಾನದಲ್ಲಿದೆ. ಹ್ಯುಂಡೈ ವೆನ್ಯೂ 7,942 ಯುನಿ‍‍ಟ್‍‍ಗಳು ಮಾರಾಟವಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಹ್ಯುಂಡೈ ಬ್ರ್ಯಾಂಡ್‍‍ನಿಂದ ಮತ್ತೊಂದು ಜನಪ್ರಿಯ ಎಸ್‍‍ಯು‍ವಿ ಹ್ಯುಂಡೈ ಕ್ರೆಟಾ ಆಗಿದೆ. ಹ್ಯುಂಡೈ ಕ್ರೆಟಾ ಮಿಡ್ ಎಸ್‍‍ಯು‍ವಿಯಾಗಿದ್ದು, ಹೆಚ್ಚು ಮಾರಾಟವಾಗುವ ಎಸ್‍‍ಯು‍‍ವಿಗಳಲ್ಲಿ ಒಂದಾಗಿದೆ. ಆದರೆ ಕಳೆದ ಎರಡು ತಿಂಗಳುಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಎಸ್‍‍ಯುವಿ ಮಾರಾಟ ಕಡಿಮೆಯಾಗಿದೆ. ಹೊಸ ತಲೆಮಾರಿನ ಕಾರು ಬಿಡುಗಡೆ ಮಾಡಿ ಮಾರಾಟವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

2020ರ ಹ್ಯುಂಡೈ ಕ್ರೆಟಾವನ್ನು ದೇಶಿಯ ಮಾರುಕಟ್ಟೆಯಲ್ಲಿ ಅನೇಕ ಸಂದರ್ಭಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಮುಂದಿನ ವರ್ಷ ಹೊಸ ಹ್ಯುಂಡೈ ಕ್ರೆಟಾ ಬಿಡುಗಡೆಯಾಗಲಿದೆ. ಕ್ರೆಟಾ ಎಸ್‌ಯುವಿ ನಂತರದ ಸ್ಯಾಂಟ್ರೊ ಹ್ಯಾಚ್‌ಬ್ಯಾಕ್. ಎಂಟ್ರಿ ಲೆವೆಲ್ ಹ್ಯುಂಡೈ ಸ್ಯಾಂಟ್ರೊ ಹಿಂದಿನ ತಿಂಗಳಲ್ಲಿ 3,502 ಯುನಿಟ್ ಮಾರಾಟವನ್ನು ದಾಖಲಿಸಿದ್ದು, ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಹ್ಯುಂಡೈ ವೆರ್ನಾ 1,738 ಯು‍‍ನಿ‍‍ಟ್‍ಗಳು ಮಾರಾಟವಾಗಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ಕ್ರಮವಾಗಿ ಹ್ಯುಂಡೈ ಎಲಾಂಟ್ರಾ, ಹ್ಯುಂಡೈ ಟಕ್ಸನ್, ಹ್ಯುಂಡೈ ಕೊನ ಎವಿ ನಂತರದ ಸ್ಥಾನವನ್ನು ಪಡೆದುಕೊಂಡಿವೆ.

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಚೇತರಿಕೆ

ಹ್ಯುಂಡೈ ನಿಧಾನವಾಗಿ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಹಬ್ಬದ ವೇಳೆಯಲ್ಲಿ ವಾಹನಗಳ ಮಾರಾಟ ಹೆಚ್ಚಾಗಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ.

Most Read Articles

Kannada
English summary
Hyundai Car Sales India: A Model-Wise Break-Up Of Sales For September 2019 - Read in Kanada
Story first published: Friday, October 11, 2019, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X