ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸಿದ ಹ್ಯುಂಡೈ

ಹೊಸ ಕಾರು ಮಾರಾಟದಲ್ಲಿ ಭಾರೀ ಪೈಪೋಟಿ ಶುರುವಾಗಿದ್ದು, ಪ್ರತಿಯೊಂದು ಕಾರು ಉತ್ಪಾದನಾ ಸಂಸ್ಥೆಗಳು ಸಹ ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆಯಲು ನಾನಾ ಮಾರಾಟ ತಂತ್ರಗಳನ್ನು ರೂಪಿಸುತ್ತಿವೆ. ಹ್ಯುಂಡೈ ಸಂಸ್ಥೆಯು ಇದೇ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಸಂಸ್ಥೆಯ ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸುವುದಕ್ಕೂ ಮುನ್ನ ಮಾರುತಿ ಸುಜುಕಿ ಸಂಸ್ಥೆ ಮತ್ತು ಟೊಯೊಟಾ ಮೋಟಾರ್ಸ್ ಸಹ ಇದೇ ಮಾದರಿಯ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಕಾರು ಮಾರಾಟ ನಂತರದ ಸೇವೆಗಳನ್ನು ಹೆಚ್ಚಿಸಿ ಗರಿಷ್ಠ ಕಾರು ಮಾರಾಟ ಮಾಡಲು ಪೈಪೋಟಿ ನಡೆಸುತ್ತಿವೆ.

ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸಿದ ಹ್ಯುಂಡೈ

ಮಾರುತಿ ಸುಜುಕಿ ಸಂಸ್ಥೆಯು ವಿವಿಧ ನಗರಗಳಲ್ಲಿ 24x7 ಕಾರ್ ಸರ್ವಿಸ್‌ಗಳನ್ನು ತೆರೆಯುವ ಮೂಲಕ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದು, ಟೊಯೊಟಾ ಸಹ ದೇಶದ ಪ್ರಮುಖ ನಗರಗಳಲ್ಲಿ ಮನೆಬಾಗಿಲಿಗೆ ಕಾರು ಸರ್ವಿಸ್ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡಿದೆ.

ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸಿದ ಹ್ಯುಂಡೈ

ಹೀಗಾಗಿ ದೇಶದಲ್ಲಿ ಮಾರುತಿ ಸುಜುಕಿ ನಂತರ 2ನೇ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದ್ದು, ಬಿಡಿಭಾಗಗಳನ್ನು ಹೊತ್ತು ಬರುವ ಮೊಬೈಲ್ ಬೈಕ್ ಗ್ರಾಹಕರಿಗೆ ಪ್ರಾಥಮಿಕ ಹಂತದ ಸೇವೆಗಳನ್ನು ನೀಡಲಿದೆ.

ಮನೆ ಬಾಗಿಲಿಗೆ ಕಾರ್ ಸರ್ವಿಸ್ ಸೌಲಭ್ಯ ಪರಿಚಯಿಸಿದ ಹ್ಯುಂಡೈ

ದೇಶದ 475 ಡೀಲರ್ಸ್‌ಗಳಲ್ಲಿ ಮೊಬೈಲ್ ಬೈಕ್ ಮೂಲಕ ಕಾರ್ ಸರ್ವಿಸ್ ನೀಡಲು ನಿರ್ಧರಿಸಿರುವ ಹ್ಯುಂಡೈ ಸಂಸ್ಥೆಯು 500 ಹೆಚ್ಚು ಬೈಕ್‌ಗಳನ್ನು ಖರೀದಿ ಮಾಡಿರುವುದಲ್ಲದೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸೇವೆ ಒದಗಿಸುತ್ತಿರುವುದಾಗಿ ಹೇಳಿಕೊಂಡಿದೆ.

ಬಿಡಿಭಾಗಗಳ ರಿಪೇರಿ, ಡ್ರೈ ವಾಶ್ ಮತ್ತು ಸಣ್ಣಪ್ರಮಾಣದ ಎಂಜಿನ್ ಸಮಸ್ಯೆಗಳಿದ್ದಲ್ಲಿ ಕಾರು ಇರುವ ಸ್ಥಳಕ್ಕೆ ಆಗಮಿಸುವ ಮೊಬೈಲ್ ಬೈಕ್ ಸರ್ವಿಸ್‌ಗಳು ದೊಡ್ಡ ಪ್ರಮಾಣದ ಸಮಸ್ಯೆಗಳಿದ್ದಲ್ಲಿ ಅಧಿಕೃತ ಸರ್ವಿಸ್ ಸೆಂಟರ್‍‌ಗಳಿಗೆ ಭೇಟಿ ನೀಡಬೇಕಾಗುತ್ತೆ.

Most Read Articles

Kannada
English summary
Hyundai ‘Door-Step’ Car Services Launched. Read in Kannada.
Story first published: Monday, February 18, 2019, 11:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X