ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ಕಾರುಗಳನ್ನು ಪರಿಚಯಿಸುವ ನಿರತವಾಗಿವೆ. ಈ ನಿಟ್ಟಿನಲ್ಲಿ ಹ್ಯುಂಡೈ ಕೂಡಾ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಕೊನಾ ಇವಿ ಕಾರು ಸಾಕಷ್ಟು ಆಕರ್ಷಣೆಗೆ ಕಾರಣವಾಗಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಹ್ಯುಂಡೈ ಸಂಸ್ಥೆಯು ಸದ್ಯ ಭಾರತದಲ್ಲಿ ಎಂಟ್ರಿ ಲೆವಲ್ ಸ್ಯಾಂಟ್ರೋ ಜೊತೆಗೆ ಪ್ರಮುಖ 8 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ನಾಲ್ಕು ಕಾರು ಮಾದರಿಗಳು ಸದ್ಯ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿವೆ. ಇದೇ ಕಾರಣಕ್ಕೆ ತನ್ನ ಭವಿಷ್ಯದ ಕಾರು ಮಾದರಿಗಳನ್ನು ಸಹ ಗ್ರಾಹಕರ ಆದ್ಯತೆಯ ಮೇರೆಗೆ ಪರಿಚಯಿಸುವ ಬಗ್ಗೆ ಮಹತ್ವದ ಸುಳಿವು ನೀಡಿರುವ ಹ್ಯುಂಡೈ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಭಾರತದಲ್ಲಿ ಸದ್ಯ ತಮಿಳುನಾಡಿನ ಚೆನ್ನೈ ಬಳಿ ಒಂದೇ ಒಂದು ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೂಡಿ ಬೀಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಕಾರು ಮಾರಾಟ ಮಾಡುತ್ತಿದೆ. ಇದೀಗ ಇದೇ ಘಟಕವನ್ನು ವಿಸ್ತರಿಸಲು ನಿರ್ಧರಿಸಿರುವ ಹ್ಯುಂಡೈ, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೂ ಸಹಕಾರಿಯಾಗುವಂತೆ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸುತ್ತಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಹ್ಯುಂಡೈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹೊಸ ಘಟಕಗಳಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸುವ ಹೊಸ ಘಟಕದ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಇನ್ನು ಹ್ಯುಂಡೈ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಈಗಾಗಲೇ ಮಾಹಿತಿ ಬಿಚ್ಚಿಟ್ಟಿದ್ದು, ಮೊದಲ ಹಂತವಾಗಿ ಕೊನಾ ಇವಿ ಕಾರು ಭಾರತೀಯ ರಸ್ತೆಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸುವ ನಿರೀಕ್ಷೆಯಲ್ಲಿದೆ. ಇದಕ್ಕೆ ಕಾರಣ, ಕಾರುಗಳ ಬೆಲೆಯನ್ನು ತಗ್ಗಿಸಲು ಹೊಸ ಕೊನಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ವಿವಿಧ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಸ್ಥಳೀಯವಾಗಿಯೇ ಬಿಡಿಭಾಗಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಇದರ ಜೊತೆ ಜೊತೆಗೆ ಎಲೆಕ್ಟ್ರಿಕ್ ವೆಹಿಕಲ್ ಬಿಡಿಭಾಗಗಳನ್ನು ನಿರ್ಮಾಣ ಕಾರ್ಯಕ್ಕೆ ಕೈ ಹಾಕುತ್ತಿರುವ ಹ್ಯುಂಡೈ ಸಂಸ್ಥೆಯು ಇದರಿಂದ ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ ಸಿದ್ದವಾಗಿರುವ ಕೋನಾ ಕಾರು ಮಾದರಿಗಳು ಪ್ರತಿ ಚಾರ್ಜ್‌ಗೆ 299 ಕಿ.ಮೀ ಮತ್ತು 469 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳು ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿವೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಹುಂಡೈ ಸಂಸ್ಥೆಯು ತನ್ನ ಮೊದಲ ಇವಿ ಕಾರನ್ನು 2019ರ ಸೆಪ್ಟೆಂಬರ್ ಹೊತ್ತಿಗೆ ಪರಿಚಯಿಸುವ ಇರಾದೆಯಲ್ಲಿದ್ದು, ಜೊತೆಗೆ ಲೋನಿಕ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಹೈಬ್ರಿಡ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಯಾವುದೇ ಸುಳಿವು ಇಲ್ಲಾವಾದರೂ ಎಲೆಕ್ಟ್ರಿಕ್ ಕಾರನ್ನು ಮಾತ್ರ ಭಾರತದಲ್ಲಿ ಪರಿಚಯಿಸುವುದು ಖಚಿತವಾಗಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಬ್ಯಾಟರಿ ವೈಶಿಷ್ಟ್ಯತೆ ಕೋನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೋನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕೋನಾ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳ್ಳಲಿದೆ ಹ್ಯುಂಡೈ ಕೊನಾ..!

ಕೊನಾ ಕಾರುಗಳ ಬೆಲೆ(ಅಂದಾಜು)

ಅತ್ಯುತ್ತಮ ಬ್ಯಾಟರಿ ಬಳಕೆಯ ಜೊತೆ ಅಧಿಕ ಮೈಲೇಜ್ ರೇಂಜ್ ಹೊಂದಿರುವ ಕೊನಾ ಕಾರುಗಳ ಬೆಲೆಯು ರೂ.13 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: EconomicTimesAuto

Most Read Articles

Kannada
English summary
Hyundai Considering Options For Electric Vehicle Components. Read in Kannada.
Story first published: Monday, April 22, 2019, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X