Just In
- 1 hr ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- 1 hr ago ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಫೋರ್ಸ್ ಗೂರ್ಖಾ 5-ಡೋರ್ ಬಿಡುಗಡೆಗೆ ಸಜ್ಜು
- 1 hr ago 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- 2 hrs ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
Don't Miss!
- News Reliance: ರಿಲಯನ್ಸ್ ಎಂದು ಹೆಸರು ಬರಲು ಕಾರಣವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Movies ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ
ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಕ್ರೆಟಾ ಎಸ್ಯುವಿ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.40ರಷ್ಟು ಕುಸಿದಿದೆ. ಕಳೆದ ತಿಂಗಳು ಹ್ಯುಂಡೈ ಕ್ರೆಟಾ ಎಸ್ಯುವಿಯು 6,641 ಯುನಿಟ್ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬರೊಬ್ಬರಿ 11,000 ಯುನಿಟ್ಗಳು ಮಾರಾಟವಾಗಿತ್ತು.
ಮಧ್ಯಮ ಗಾತ್ರದ ಎಸ್ಯುವಿ ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ ಈ ಸೆಗ್ಮೆಂಟ್ನಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ನಂತಹ ಪ್ರಬಲ ಪೈಪೋಟಿಯ ನಡುವೆ ಕ್ರೆಟಾ ಎಸ್ಯುವಿ ಮಾರಾಟವು ಉತ್ತಮವಾಗಿದೆ.
ಆದರೆ ಎರಡನೇ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಮುಂದೆ ಹ್ಯುಂಡೈ ಕ್ರೆಟಾ ಮಂಡಿಯೂರಿದೆ. ಹ್ಯುಂಡೈ ಕ್ರೆಟಾ ಎಸ್ಯುವಿಗಿಂತಲೂ ಕಿಯಾ ಸೆಲ್ಟೋಸ್ ಎಸ್ಯುವಿಗಳೇ ಅಧಿಕ ಮಾರಾಟವಾಗಿವೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಮಿಡ್ ಎಸ್ಯುವಿಯಲ್ಲಿ ಅತೀ ಹೆಚ್ಚು ಮಾರಾಟವಾಗಿ ಮೊದಲನೇ ಸ್ಥಾನಕ್ಕೇರಿದೆ.
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ನ 7,754 ಯುನಿಟ್ಗಳು ಮಾರಾಟವಾಗಿದೆ. ಆಗಸ್ಟ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ನ 6,236 ಯುನಿಟ್ಗಳು ಮಾರಾಟವಾಗಿದ್ದವು. ದಿನಗಳು ಕಳೆದಂತೆ ಕಿಯಾ ಸೆಲ್ಟೋಸ್ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ.
ಹ್ಯುಂಡೈ ಕ್ರೆಟಾ ಕೂಡ ತಿಂಗಳಿಗೊಮ್ಮೆ ಮಾರಾಟದಲ್ಲಿ ಸುಧಾರಣೆ ಕಾಣುತ್ತಿದೆ, ಆದರೆ ಕಿಯಾ ಸೆಲ್ಟೋಸ್ ಕ್ಕಿಂತ ಮಾರಾಟದಲ್ಲಿ 1,000 ಯುನಿಟ್ಗಳ ಹಿಂದೆ ಇದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್ಯುವಿಗಳ ಪಟ್ಟಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಎಂಜಿ ಹೆಕ್ಟರ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿವೆ.
ಹ್ಯುಂಡೈ ಕ್ರೆಟಾ
ಮಾರುತಿ ಎಸ್-ಕ್ರಾಸ್
ಸ್ಥಾನ | ಮಾದರಿಗಳು |
ಸೆಪ್ಟೆಂಬರ್
2019
|
ಸೆಪ್ಟೆಂಬರ್
2018
|
ವ್ಯಾತ್ಯಸ
(%)
|
1 | ಕಿಯಾ ಸೆಲ್ಟೋಸ್ | 7,754 | 0 | - |
2 | ಹ್ಯುಂಡೈ ಕ್ರೆಟಾ | 6,641 | 11,000 | -40 |
3 | ಮಹೀಂದ್ರಾ ಸ್ಕಾರ್ಪಿಯೋ | 3,600 | 3,941 | -9 |
4 | ಎಂ.ಜಿ ಹೆಕ್ಟರ್ | 2,608 | 0 | - |
5 | ಮಹೀಂದ್ರಾ ಎಕ್ಸ್ಯುವಿ 500 | 1,120 | 1,902 | 41 |
6 | ಮಾರುತಿ ಎಸ್-ಕ್ರಾಸ್ | 1,040 | 3,005 | 65 |
7 | ಟಾಟಾ ಹ್ಯಾರಿಯರ್ | 941 | 0 | - |
8 | ಜೀಪ್ ಕಂಪಾಸ್ | 603 | 1,196 | 50 |
9 | ರೆನಾಲ್ಟ್ ಡಸ್ಟರ್ | 544 | 616 | 12 |
10 | ನಿಸ್ಸಾನ್ ಕಿಕ್ಸ್ | 204 | 0 | - |
ಮಹೀಂದ್ರಾ ಸ್ಕಾರ್ಪಿಯೋ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 3.600 ಯುನಿಟ್ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 3,941 ಯುನಿಟ್ಗಳು ಮಾರಾಟವಾಗಿತ್ತು. ಇನ್ನೂ ಎಂಜಿ ಹೆಕ್ಟರ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 2.608 ಯುನಿಟ್ಗಳು ಮಾರಾಟವಾಗಿವೆ.
ಎಂಜಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲಿದೆ, ಇದರಿಂದ ತನ್ನ ಮಾರಾಟದಲ್ಲಿ ಇನ್ನಷ್ಟು ಸುಧಾರಿಸಬಹುದು ಎಂದು ಎಂಜಿ ಕಂಪನಿಯು ಹೇಳಿದೆ. ಮುಂದಿನ ದಿನಗಳಲ್ಲಿ ಎಂಜಿ ಹೆಕ್ಟರ್ ಮಾರಾಟದಲ್ಲಿ ಹುಂಡೈ ಕ್ರೆಟಾಗೆ ಬಾರಿ ಪೈಪೋಟಿಯನ್ನು ನೀಡಬಹುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮಾದರಿಯ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಒಳಗೊಂಡಿದೆ. ಈ ಎಂಜಿನ್ 2020ರ ಏಪ್ರಿಲ್ 1 ರಿಂದ ಜಾರಿಯಾಗಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಇರಲಿದೆ. ಈ ಎರಡು ಎಂಜಿನ್ಗಳ ಪೈಕಿ ಪೆಟ್ರೋಲ್ ಎಂಜಿನ್ 115 ಬಿಎಚ್ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗುವುದು.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಹ್ಯುಂಡೈ ಕ್ರೆಟಾ ದೀರ್ಘಕಾಲದವರೆಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಧ್ಯಮ ಗಾತ್ರದ ಎಸ್ಯುವಿಯಾಗಿದೆ. ಮಧ್ಯಮ ಗಾತ್ರದ ಎಸ್ಯುವಿ ಸೆಗ್ಮೆಂಟ್ನಲ್ಲಿ ಹೊಸ ಎಸ್ಯುವಿಗಳ ಎಂಟ್ರಿಯಾಗುತ್ತಿದಂತೆ ಕ್ರೆಟಾ ಎಸ್ಯುವಿ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದೆ. ಪ್ರಬಲ ಪೈಪೋಟಿಯಿಂದಾಗಿ ಕಳೆದ ತಿಂಗಳು ಮಿಡ್ ಎಸ್ಯುವಿ ವಿಭಾಗದ ಅತೀ ಹೆಚ್ಚು ಮಾರಾಟವಾಗುವ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದರೆ ಮುಂದಿನ ವರ್ಷ ಎರಡನೇ ತಲೆಮಾರಿನ ಕ್ರೆಟಾ ಎಸ್ಯುವಿಯನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಮೊದಲನೇ ಸ್ಥಾನಕ್ಕೇರುವ ಸಾಧ್ಯತೆಗಳಿವೆ.