ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಮೋಟಾರ್ಸ್ ಇಂಡಿಯಾ ಸದ್ದಿಲ್ಲದೆ 1.6 ಲೀಟರ್ ಡೀಸೆಲ್ ಎಂಜಿನ್ನಿನ ಕ್ರೆಟಾ ಎಸ್‍‍ಯು‍ವಿಯ ಇ ಪ್ಲಸ್ ಮತ್ತು ಇಎಕ್ಸ್ ರೂಪಾಂತರಗಳನ್ನು ಬಿಡುಗಡೆಗೊಳಿಸಿದೆ. ಹ್ಯುಂಡೈನ ಈ ಎರಡು ಲೋವರ್ ಸ್ಪೆಕ್ ರೂಪಾಂತರಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.10.87 ಲಕ್ಷ ಮತ್ತು ರೂ.11.90 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಕ್ರೆಟಾದ ಎರಡು ಬೇಸ್ ರೂಪಾಂತರಗಳನ್ನು ಈ ಹಿಂದೆ 1.4 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹ್ಯುಂಡೈ ಇದೀಗ ಇ ಪ್ಲಸ್ ಮತ್ತು ಇಎಕ್ಸ್ ರೂಪಾಂತರಗಳಲ್ಲಿ 1.6 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದೆ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಕ್ರೆಟಾದ 1.6 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯು 4000 ಆರ್‍‍ಪಿಎಂನಲ್ಲಿ 126 ಬಿಹೆಚ್‍‍ಪಿ ಪವರ್ ಮತ್ತು 1500-3000 ಆರ್‍‍ಪಿಎಂ ನಡುವೆ 240 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ, ಆದರೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿಲ್ಲ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಡೀಸೆಲ್ ಎಂಜಿನ್ ಸೇರ್ಪಡೆ‍ಯ ಹೊರತಾಗಿ ಹ್ಯುಂಡೈ ಕ್ರೆಟಾದ ಎರಡು ಲೋವರ್ ಸ್ಪೆಕ್ ರೂಪಾಂತಗಳಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇ ಪ್ಲಸ್ ಮತು ಇಎಕ್ಸ್ ರೂಪಾಂತರಗಳು ಮೊದಲಿನಂತೆಯೇ ಅದೇ ವೈಶಿಷ್ಟ್ಯಗಳು ಮತ್ತು ಉಪಕರಗಳು ಹಾಗೇ ಮುಂದುವರೆಯಲಿವೆ, ಈ ವಿಭಾಗದಲ್ಲಿ ಯಾವುದೇ ಬದಲಾವಣೆಗಳು ಹೊಂದಿಲ್ಲ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಈ ಕಾರಿನಲ್ಲಿ ಒಆರ್‍‍ವಿಎಂಗಳು, ಸ್ಟೀಲ್ ವ್ಹೀಲ್‍, ಸಿಲ್ವರ್ ಸ್ಕಿಡ್ ಪ್ಲೇಟ್‍‍ಗಳ ಜೊತೆಯಲ್ಲಿ ಡ್ಯುಯಲ್ ಟೋನ್ ಬಂಪರ್‍‍ಗಳು ಮತ್ತು ಬ್ಲ್ಯಾಕ್/ಸಿಲ್ವರ್ ಗ್ರಿಲ್‍‍ಗಳಿವೆ. ಈ ಎರಡು ರೂಪಾಂತರಗಳಲ್ಲಿನ ಇತರ ವೈಶಿಷ್ಟ್ಯಗಳು ಫಾಲೋ-ಮಿ-ಹೋಮ್ ಹೆಡ್‍‍ಲ್ಯಾಂ‍‍ಪ್‍‍ಗಳು, ಇಂಟಿಗ್ರೇ‍‍ಟೆ‍ಡ್ ಎಲ್‍ಇ‍ಡಿ ಟರ್ನ್ ಸಿಗ್ನಲ್‍‍ಗಳೊಂದಿಗೆ ಎಲೆಕ್ಟ್ರಿಕ್ ಒರ್‍‍ವಿಎಂಗಳನ್ನು ಹೊಂದಿವೆ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಕ್ರೆಟಾ ರೂಪಾಂತಗಳ ಕಾರಿನ ಇಂಟಿರಿಯರ್‍‍ನಲ್ಲಿ ಎಸಿ, ಹೊಂದಾಣಿಕ ಮಾಡಬಹುದಾದ ಚಾಲಕನ ಸೀಟ್, ಹಿಂಭಾಗದ ಎಸಿ ವೆಂಟ್ಸ್, ಸ್ಟೀರಿಂಗ್ ವ್ಹೀಲ್‍‍ಗಾಗಿ ಟಿಲ್ಟ್ ಪಂಕ್ಷನ್ ಮತ್ತು ಎಲೆಕ್ಟ್ರಿಕ್ ಟೈಲ್‍‍ಗೇಟ್ ಅನ್ನು ಹೊಂದಿದೆ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಇಎಕ್ಸ್ ಟ್ರಿಮ್ ಹೆಚ್ಚುವರಿಯಾಗಿ ರೇರ್ ಸೆಂಟ್ರಲ್ ಆರ್ಮ್ಮಸ್ಟ್ರೆಸ್ಟ್, ಎಲ್ಇಡಿ ಡಿಆರ್‍ಎಲ್, ಫ್ರಂಟ್ ಯುಎಸ್‍ಬಿ ಚಾರ್ಜರ್, ಸನ್‍‍ಗ್ಲಾಸ್ ಹೋಲ್ಡರ್‍‍ಗಳು, ಹೊಂದಾಣಿಕ ಮಾಡಬಹುದಾದ ಫ್ರಂಟ್ ಮತ್ತು ರೇರ್ ಹೆಡ್‍‍ರೆಸ್ಟ್, 5.0 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಬ್ಲಟೂತ್ ಕನೆಕ್ಟಿವಿಟಿ, ಹ್ಯುಂಡೈನ ಐ-ಬ್ಲೂ ರಿಮೋಟ್ ಅಪ್ಲಿಕೇಶನ್ ಮತ್ತು ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಕ್ರೆಟಾ ಇ ಪ್ಲಸ್ ಮತ್ತು ಇಎಕ್ಸ್ ರೂಪಾಂತರಗಳಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯಗಳನ್ನು ಅಳವಡಿಸಿದ್ದಾರೆ. ಸುರಕ್ಷತೆಗಾಗಿ ಫ್ರಂಟ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇ‍ಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್‍, ಡೇ/ನೈಟ್ ಐಆರ್‍‍ವಿಎಂ, ಫ್ರಂಟ್ ಸೀಟ್‍ಬೆಲ್ಟ್ ಪ್ರಿಟೆನ್ಷನರ್, ಹೈಸ್ಪೀಡ್ ವಾರ್ನಿಂಗ್ ಮತ್ತು ಸೀಟ್ ಬೆಲ್ಟೆ ರಿಮೈಂಡರ್ ಅನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಬೇಸ್ ಮಾದರಿಯ ಕಾರುಗಳು

ಹ್ಯುಂಡೈ ಕ್ರೆಟಾ, ಎಸ್‍‍ಯುವಿ ಸೆಗ್‍‍ಮೆಂಟ್‍ನಲ್ಲಿ ಹೆಚ್ಚು ಮಾರಾಟವಾಗುವ ಎಸ್‍‍ಯು‍ವಿಗಳಲ್ಲಿ ಒಂದಾಗಿದೆ. ಕ್ರೆಟಾ ಎಸ್‍‍ಯುವಿ ಭಾರತದಲ್ಲಿ ಒಂದೆರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಅಂದಿನಿಂದಲೇ ತನ್ನ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಇತ್ತೀಚೆಗೆ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್‍ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಉಂಟಾದ ಪೈಪೋಟಿಯಿಂದ ಕ್ರೆಟಾದ ಮಾರಾಟವು ಕುಸಿಯಿತು.

Most Read Articles

Kannada
English summary
Hyundai Creta Base Variants Launched With 1.6-Litre Diesel Engine: Prices Start At Rs 10.87 Lakh - Read in Kannada
Story first published: Thursday, October 17, 2019, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X