ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಮೂರನೆಯ ತಲೆಮಾರಿನ ಹ್ಯುಂಡೈ ಗ್ರಾಂಡ್ ಐ10 ಕಾರು ಇದೇ ತಿಂಗಳ 20ರಂದು ಬಿಡುಗಡೆಗೊಳ್ಳಲಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾರನ್ನು ಗ್ರಾಂಡ್ ಐ10 ನಿಯೋಸ್ ಎಂದು ಕರೆಯಲಾಗುತ್ತದೆ. ಈ ಕಾರು ಜಾಗತೀಕ ಮಾರುಕಟ್ಟೆಯಲ್ಲಿಯೂ ಸಹ ಮಾರಾಟವಾಗಲಿದ್ದು, ಹ್ಯುಂಡೈ ಗ್ರಾಂಡ್ ಐ10 ಎಂಬ ಹೆಸರಲಿನಲ್ಲಿಯೇ ಮಾರಾಟವಾಗಲಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಹೊಸ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು ಪ್ರಸ್ತುತ ತಲೆಮಾರಿನ ಗ್ರಾಂಡ್ ಐ10 ಕಾರಿನೊಂದಿಗೆ ಮಾರಾಟವಾಗಲಿದ್ದು, ಪ್ರಸ್ತುತ ತಲೆಮಾರಿನ ಹ್ಯುಂಡೈ ಗ್ರಾಂಡ್ ಐ10 ಕಾರುಗಳಲ್ಲಿನ ಪೆಟ್ರೋಲ್ ಮಾದರಿಗಳು ಇನ್ನೂ ಲಭ್ಯವಿರಲಿದ್ದು, ಡೀಸೆಲ್ ಮಾದರಿಯ ಗ್ರಾಂಡ್ ಐ10 ಕಾರುಗಳ ಮಾರಾಟವನ್ನು ಸಂಸ್ಥೆಯು ಸ್ಥಗಿತಗೊಳಿಸಲಿದೆ. ಗ್ರಾಂಡ್ ಐ10 ನಿಯೋಸ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಸಹ ಇದೀಗ ಪ್ರಾರಂಭವಾಗಿದ್ದು, ಆಸಕ್ತ ಗ್ರಾಹಕರು ನಿಮ ಸ್ಮೀಪದಲ್ಲಿರುವ ಹ್ಯುಂಡೈ ಡೀಲರ್‍‍ನ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಹೆಸರಿಗೆ ತಕ್ಕ ಹಾಗೆ ಗ್ರಾಹಕರಿಗೆ ಅಧಿಕವಾದ ಎಕ್ಸ್ಪೀರಿಯೆನ್ಸ್ ಅನ್ನು ನೀಡಲಿದ್ದು, ಸಾಧಾರಣ ಗ್ರಾಂಡ್ ಐ10 ಕಾರಿಗಿಂತಲೂ ಹೆಚ್ಚಿನ ಸ್ಥಳವಕಾಶ, ಫೀಚರ್ಸ್ ಮತ್ತು ಪರ್ಫಾರ್ಮೆನ್ಸ್ ಅನ್ನು ಒದಗಿಸುತ್ತದೆ. ಗ್ರಾಂಡ್ ಐ10 ನಿಯೋಸ್ ಕಾರು ಹ್ಯುಂಡೈ ಸಂಸ್ಥೆಯಲ್ಲಿನ ಗ್ರಾಂಡ್ ಐ10 ಮತ್ತು ಐ20 ಕಾರುಗಳ ಮಧ್ಯದಲ್ಲಿ ಸ್ಥಾನವನ್ನು ಪಡೆದಿರಲಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಕಾರಿನ ಹೊರಭಾಗದಲ್ಲಿ ಕೇಸ್‍‍ಕೇಡಿಂಗ್ ಗ್ರಿಲ್, ಬೂಮರಾಂಗ್ ಮಾದರಿಯ ಎಲ್ಇಡಿ ಡಿಆರ್‍ಎಲ್‍‍ಗಳು, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಕ್ರೋಮ್ ಡೋರ್ ಹ್ಯಾಂಡಲ್‍‍ಗಳು, ಸ್ವೀಪ್ಪಿಂಗ್ ಸಿ-ಪಿಲ್ಲರ್ ಮತ್ತು ಅಗಲವಾದ ಬಂಪರ್ ಸೇರಿದಂತೆ ಡ್ಯುಯೆಲ್ ಟೋನ್ ಅಲಾಯ್ ವ್ಹೀಲ್‍‍ಗಳನ್ನು ಹೊತ್ತು ಬರಲಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಇನ್ನು ಸಾಧಾರಣ ಗ್ರಾಂಡ್ ಐ10 ಕಾರಿಗಿಂತಲೂ ಗ್ರಾಂಡ್ ಐ10 ನಿಯೋಸ್ ಕಾರು ಉದ್ದನೆಯ ಆಕಾರವನ್ನು ಪಡೆದುಕೊಂಡಿದ್ದು, ಅಂದರೆ ಒಳವಿನ್ಯಾಸದಲ್ಲಿ ಹೆಚ್ಚಿನ ಸ್ಥಳವಕಾಶವನ್ನು ಪಡೆಯಬಹುದಾಗಿದೆ. ಈ ಕಾರಿನ ಒಳಭಾಗದಲ್ಲಿ ಡ್ಯುಯೆಲ್ ಟೋನ್ ಫಿನಿಶ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಹಕರಿಸುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ರಿಯರ್ ಎಸಿವೆಂಟ್ಸ್ ಅನ್ನು ನೀಡಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಪ್ರಯಾಣದ ವೇಳೆ ಸಣ್ಣಪುಟ್ಟ ವಸ್ತುಗಳನ್ನು ಇರಿಸಿಕೊಳ್ಳಲು, ಡೋರ್ ಪಾಕೆಟ್ಸ್, ಗ್ಲೋವ್ ಬಾಕ್ಸ್ ನ ಮೇಲೆ ಕ್ಯೂಬಿ ಹೋಲ್ಸ್ ಮತ್ತು ಸೀಟ್‍‍ಗಳ ನಡುವೆ ಕಪ್ ಹೋಲ್ಡರ್‍‍ಗಳನ್ನು ನೀಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯೆಲ್ ಏರ್‍‍ಬ್ಯಾಗ್ಸ್, ಪಾರ್ಕಿಂಗ್ ಸೆನ್ಸಾರ್ಸ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಎಬಿಎಸ್‍‍ನೊಂದಿಗೆ ಇಬಿಡಿಯನ್ನು ನೀಡಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಎಂಜಿನ್ ಸಾಮರ್ಥ್ಯ

ಹೊಸ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರಲಿದ್ದು, ಈ ಎರಡೂ ಎಂಜಿನ್‍‍ಗಳು ಬಿಎಸ್-6 ನಿಯಮಾವಳಿಗಳನ್ನು ಹೊಂದಿರಲಿದೆ. ಕಾರಿನ ಪೆಟ್ರೋಲ್ ಮಾದರಿಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 83ಬಿಹೆಚ್‍ಪಿ ಮತ್ತು 116ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಇನ್ನು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ಡೀಸೆಲ್ ಮಾದರಿಗಳು 1.2 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 75 ಬಿಹೆಚ್ಪಿ ಮತ್ತು 194ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಈ ಎಂಜಿನ್‍‍ಗಳು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೆ ಹೊಂದಿರಲಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ವೇರಿಯೆಂಟ್ಸ್

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು ಎರ ಎಂಟಿ, ಮ್ಯಾಗ್ನ ಎಂಟಿ, ಮ್ಯಾಗ್ನಾ ಎಎಂಟಿ, ಸ್ಪೋರ್ಟ್ಸ್ ಎಂಟಿ, ಸ್ಪೋರ್ಟ್ಸ್ ಎಂಡಿ ಡ್ಯುಯೆಲ್ ಟೋನ್, ಆಸ್ಟ್ಸಾ ಎಂಟಿ ಎಂಬ ಪೆಟ್ರೋಲ್ ಮಾದರಿಯಲ್ಲಿ ಈ ಏಳು ವೇರಿಯೆಂಟ್‍‍ನಲ್ಲಿ ದೊರೆಯಲಿದೆ. ಇನ್ನು ಡೀಸೆಲ್ ಮಾದರಿಯಲ್ಲಿ ಮ್ಯಾಗ್ನಾ ಎಂಟಿ, ಸ್ಪೋರ್ಟ್ಸ್ ಎಂಟಿ ಮತ್ತು ಆಸ್ಟಾ ಎಂಟಿ ಎಂಬ ಮೂರು ವೇರಿಯೆಂಟ್‍‍ಗಳಲ್ಲಿ ದೊರೆಯಲಿದೆ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

ಬಣ್ಣಗಳು ಮತ್ತು ಬೆಲೆ

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು ರೆಡ್ಮ್ ವೈಟ್, ಗ್ರೇ, ಅಕ್ವಾ ಟೀಲ್ ಮತ್ತು ಆಲ್ಫಾ ಬ್ಲೂ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಗ್ರಾಂಡ್ ಐ10 ನಿಯೋಸ್ ಕಾರು ಸಾಧಾರಣ ಗ್ರಾಂಡ್ ಐ10 ಕಾರಿಗಿಂತಲೂ ಬೆಲೆಯಲ್ಲಿ ರೂ. 50,000 ಅಧಿಕವಿರಲಿದ್ದು, ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಫೋರ್ಡ್ ಫಿಗೋ ಕಾರುಗಖಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Hyundai Grand i10 Nios Varients, Colors, Engine, Specifications And Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X