ಪ್ರತಿ ಚಾರ್ಜ್‌ಗೆ 452 ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ, ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಹ್ಯುಂಡೈ ಸಂಸ್ಥೆಯು ಹೇಳಿದಂತೆ ತಮ್ಮ ಮೊದಲ ಎಲೆಕ್ಟ್ರಿಕ್ ಕಾರಾಗಿ ಕೋನಾ ಇವಿಯನ್ನು ಜುಲೈಯ 9 ರಂದು ಬಿಡುಗಡೆ ಮಾಡಲಿದ್ದು, ಇದರ ರೇಂಜ್ ಬಗ್ಗೆ ಯಾವ ಮಾಹಿತಿಯನ್ನು ಹೊರಹಾಕಿರಲಿಲ್ಲ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಆದರೆ ಇದೀಗ ಹ್ಯುಂಡೈ ಇಂಡಿಯಾ ಸಂಸ್ಥೆಯು ತಾವು ನಡೆಸಿದ ಸ್ಪಾಟ್ ಟೆಸ್ಟಿಂಗ್‍‍ಗಳಿಂದ ಇದೀಗ ಹ್ಯುಂಡೈ ಕೋನಾ ಒಂದು ಬಾರಿಯ ಚಾರ್ಜ್‍ಗೆ ಎಷ್ಟು ರೇಂಜ್ ನೀಡಬಲ್ಲದು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಈ ರೇಂಜ್ ಅನ್ನು ARAI ಕೂಡಾ ಪ್ರಮಾಣೀಕರಿಸಲಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಒಂದು ಬಾರಿಯ ಚಾರ್ಜಿಂಗ್‍‍ಗೆ 452 ಕಿಲೋಮೀಟರ್ ರೇಂಜ್ ಅನ್ನು ನೀಡಲಿದೆಯಂತೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಅಂದರೆ ಬೆಂಗಳೂರಿನಿಂದ ಈ ಕಾರನ್ನು ಸ್ಟಾರ್ಟ್ ಮಾಡಿದರೆ ಯಾವುದೇ ಅಡೆತಡೆಯಿಲ್ಲದೆ ಗೋಕರ್ಣದ ತನಕ ಸಂಚರಿಸಬಹುದಾಗಿದೆ. ಈ ಕಾರು ಖರೀದಿಯ ನಂತರ ಹ್ಯುಂಡೈ ಡೀಲರ್ ಅನ್ನು ಸಂಪರ್ಕಿಸಿ ನೀವು ನಿಮ್ಮ ಮನೆಯಲ್ಲಿಯೇ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಇನ್ಸ್ಟಾಲ್ ಮಾಡಿಸಿಕೊಳ್ಳಬಹುದಾಗಿದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಬಿಡುಗಡೆಗೂ ಮುನ್ನವೇ ಡೀಲರ್‍ ಯಾರ್ಡ್ ತಲುಪುತ್ತಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ದೇಶಿಯ ಮಾರಕಟ್ಟೆಗೆ ಸಿಬಿಯು (ಕಂಪ್ಲೀಟ್ಲಿ ಬ್ಯುಲ್ಡ್ ಯೂನಿಟ್) ಮಾರ್ಗದಲ್ಲಿ ಕಾಲಿಡಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಎರಡು ವೇರಿಯೆಂಟ್‍ನಲ್ಲಿ ಲಭ್ಯವಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಕಾರು ಯಾವ ವೇರಿಯೆಂಟ್ ಎಂಬ ಮಾಹಿತಿ ಇನ್ನು ಲಭ್ಯವಾಗಲಿಲ್ಲ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಬ್ಯಾಟರಿ ವೈಶಿಷ್ಟ್ಯತೆ

ಕೋನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೋನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕೋನಾ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಇದರಲ್ಲಿನ 300 ಕೆವಿ ಬ್ಯಾಟರಿಯು 300 ಕಿಲೋಮೀಟರ್ ರೇಂಜ್ ನೀಡಿತ್ತದೆ ಮತ್ತು 134 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಶಕ್ತಿ ಹೊಂದಿದ್ದು, ಈ ಬ್ಯಾಟರಿಯು ಸಂಪೂರ್ಣವಾಗಿ ಚರ್ಜ್ ಆಗಲು 6 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಮತ್ತು 9.3 ಸೆಕೆಂಡಿನಲ್ಲಿ 0 ಯಿಂದ 100 ಕಿಲೋಮೀಟರ್‍‍ನಷ್ಟು ಆಕ್ಸಿಲರೇಷನ್ ಅನ್ನು ಸಹ ಒದಗಿಸುತ್ತದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಮತ್ತೊಂದು ಕಡೆ ಈ ಕಾರಿನಲ್ಲಿ ಅಳವಡಿಸಲಾದ 64 ಕಿವಿ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು ಸಮರು 9 ಗಂಟೆಯ ಸಮಯ ಹಾಗು ಶೇಕಡಾ 80ರಷ್ಟು ಚಾರ್ಜ್ ಆಗಲು ಕೇವಲ ಒಂದೇ ಗಂಟೆಯ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಬ್ಯಾಟರಿಯು 203 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, 7.6 ಸೆಕೆಂಡಿಗೆ 0 ಇಂದ 100 ಕಿಲೋಮೀಟರ್‍‍ನ ಆಕ್ಸಿಲರೇಷನ್ ಅನ್ನು ಒದಗಿಸುತ್ತದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಇನ್ನು ಹ್ಯುಂಡೈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹೊಸ ಘಟಕಗಳಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸುವ ಹೊಸ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕದ ಸ್ಥಾಪನೆಗಾಗಿ ಹಂತ ಹಂತವಾಗಿ ಬರೋಬ್ಬರಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಸದ್ಯ ತಮಿಳುನಾಡಿನ ಚೆನ್ನೈ ಬಳಿ ಒಂದೇ ಒಂದು ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೂಡಿ ಬೀಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಕಾರು ಮಾರಾಟ ಮಾಡುತ್ತಿದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಇದೀಗ ಇದೇ ಘಟಕವನ್ನು ವಿಸ್ತರಿಸಲು ನಿರ್ಧರಿಸಿರುವ ಹ್ಯುಂಡೈ, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೂ ಸಹಕಾರಿಯಾಗುವಂತೆ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸುತ್ತಿದ್ದು, ಕೊನಾ ಸೇರಿದಂತೆ ಇನ್ನು ಮೂರು ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಇಲ್ಲಿಯೇ ನಿರ್ಮಾಣ ಮಾಡಿ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಯೋಜನೆಯಲ್ಲಿದೆ.

ಬರೊಬ್ಬರಿ 452 ಕಿಲೋಮೀಟರ್ ರೇಂಜ್ ನೀಡಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ತಮ್ಮ ಮೊದಲನೆಯ ಎಲೆಕ್ಟ್ರಿಕ್ ಕಾರಾದ ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಸುಮಾರು 25 ಲಕ್ಷದ ಬೆಲೆಯನ್ನು ಪಡೆಯುವ ಅವಕಾಶವಿದ್ದು, ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಯ ನಂತರ ಎಂಜಿ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಇಜೆಡ್ಎಸ್ ಎಂಬ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ. ಒಟ್ಟಿನಲ್ಲಿ ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಕೋನಾ ಇವಿ ಕಾರಿಗೆ ಎಷ್ಟರ ಮಟ್ಟಿಗೆ ಜನಪ್ರಿತಯೆ ಹೊಂದಲಿದೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
English summary
Hyundai Kona Electric Car Range Revealed. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X