ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದೇ ಸುದ್ದಿ. ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು, ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪನಿಗಳವರೆಗೆ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿವೆ. ಕೆಲ ದಿನಗಳ ಹಿಂದಷ್ಟೇ ಬಿಹಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಎಲೆಕ್ಟ್ರಿಕ್ ಕಾರಿನಲ್ಲಿ ಸಂಚರಿಸಿ ಜನರ ಗಮನ ಸೆಳೆದಿದ್ದರು.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಈಗಿನ ಸರದಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‍‍ರವರದ್ದು. ಈಗ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಜಾವಡೇಕರ್‍‍ರವರು ಹ್ಯುಂಡೈ ಕಂಪನಿಯ ಎಲೆಕ್ಟ್ರಿಕ್ ಕಾರ್ ಆದ ಕೋನಾ ಕಾರಿನಲ್ಲಿ ಆಗಮಿಸಿದ್ದಾರೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾವಡೇಕರ್‍‍ರವರು ಸರ್ಕಾರವು ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬದಲಾಗಲಿದೆ ಎಂದು ಹೇಳಿದರು. ಇದರ ಜೊತೆಗೆ ಸಾರ್ವಜನಿಕರೂ ಸಹ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರದ ಜೊತೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಕೋನಾ ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹ್ಯುಂಡೈ ಮೋಟಾರ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಎನರ್ಜಿ ಎಫಿಶಿಯನ್ಸಿ ಸರ್ವಿಸಸ್ ಲಿಮಿಟೆಡ್ (ಇ‍ಇ‍ಎಸ್‍ಎಲ್) ಅಂತಿಮ ಗೊಳಿಸಿದೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಇ‍ಇ‍ಎಸ್‍ಎಲ್ ಈ ಬಿಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಆಟೋ ಕಂಪನಿಗಳ ಬದಲು ಹ್ಯುಂಡೈ ಮೋಟಾರ್ ಕಂಪನಿಯನ್ನು ಆಯ್ಕೆ ಮಾಡಿದೆ. ಟಾಟಾ ಟಿಗೋರ್ ಇವಿ ಹಾಗೂ ಮಹೀಂದ್ರಾ ಇ-ವೆರಿಟೊ ಸೆಡಾನ್ ಕಾರುಗಳು ಈ ಹಿಂದೆ ಸಮಸ್ಯೆಯನ್ನು ಎದುರಿಸಿದ್ದ ಕಾರಣಕ್ಕೆ ಈ ಎರಡು ಕಾರುಗಳನ್ನು ಆಯ್ಕೆ ಮಾಡಲಿಲ್ಲವೆಂದು ಇಇಎಸ್ಎಲ್ ತಿಳಿಸಿದೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಕೋನಾ ಎಲೆಕ್ಟ್ರಿಕ್ ಕಾರು, ಟಾಟಾ ಟಿಗೋರ್ ಇವಿ ಹಾಗೂ ಮಹೀಂದ್ರಾ ಇ-ವೆರಿಟೊಗಳಿಗಿಂತ ಭಿನ್ನವಾದ 134 ಹೆಚ್‌ಪಿ ಶಾಶ್ವತ-ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೈ-ವೋಲ್ಟೇಜ್ 39.2 ಕಿ.ವ್ಯಾನ ಸುಧಾರಿತ ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಈ ಎಲೆಕ್ಟ್ರಿಕ್ ಮೋಟರ್ 394.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಮುಂಭಾಗದ ವ್ಹೀಲ್‍‍ಗಳಲ್ಲಿ ಕೇವಲ 9.7 ಸೆಕೆಂಡುಗಳಲ್ಲಿ 0- 100 ಕಿ.ಮೀ ವೇಗವನ್ನು ಚಲಿಸುತ್ತದೆ. ಬ್ಯಾಟರಿ ವ್ಯವಸ್ಥೆಯು ಲಿಕ್ವಿಡ್ ಕೂಲಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಬ್ಯಾಟರಿ ಪ್ಯಾಕ್ ಹೆಚ್ಚಿನ ಎನರ್ಜಿ ಸಾಂದ್ರತೆಯನ್ನು ಸಹ ಹೊಂದಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಹ್ಯುಂಡೈ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗಾರರು ಕೋನಾ ಎಲೆಕ್ಟ್ರಿಕ್ ಚಾರ್ಜಿಂಗ್‍‍ಗಾಗಿ 7.2 ಕಿ.ವ್ಯಾ ಎಸಿ ಚಾರ್ಜರ್‍‍ಗಳನ್ನು ಹೊಂದಿದ್ದಾರೆ. ಆಯ್ದ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಗ್ರಾಹಕರಿಗೆ ತುರ್ತು ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಗ್ರಾಹಕರ ಅನುಕೂಲಕ್ಕಾಗಿ, ಕಂಪನಿಯ ವೆಬ್‌ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೋನಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳ ಬಗ್ಗೆ ಮಾಹಿತಿ ನೀಡಲು ಮ್ಯಾಪ್‌ಮೈಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ 6.9 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಿದ್ದು, ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಹೊಂದಿದೆ. ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ ಡಿಜಿಟಲ್ ಕ್ಲಸ್ಟರ್ ಸೂಪರ್‍‍ವಿಷನ್, ಪವರ್ ಡ್ರೈವರ್ ಸೀಟ್, ಲೆದರ್ ವೆಂಟಿಲೇಟೆಡ್ ಸೀಟ್, ಆಟೋಮ್ಯಾಟಿಕ್ ಏರ್ ಕಂಡೀಷನಿಂಗ್ ಹಾಗೂ ಸ್ಮಾರ್ಟ್ ಕೀ ಪುಶ್ ಬಟನ್ ಸ್ಟಾರ್ಟ್‍‍ಗಳಿವೆ.

ಸಂಸತ್ ಅಧಿವೇಶನಕ್ಕೆ ಎಲೆಕ್ಟ್ರಿಕ್ ಕಾರಿನಲ್ಲೇ ಬಂದ ಕೇಂದ್ರ ಸಚಿವ

ಹ್ಯುಂಡೈ ಕಂಪನಿಯು ಆಯ್ದ ನಗರಗಳ ಪೆಟ್ರೋಲ್ ಬಂಕ್‍‍ಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಆರಂಭಿಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೊತೆಗೆ ಕೈಜೋಡಿಸಿದೆ. ಹ್ಯುಂಡೈ ಈ ಬಂಕ್‍‍ಗಳಲ್ಲಿ ಫಾಸ್ಟ್ ಚಾರ್ಜರ್‍‍ಗಳನ್ನು ಅಳವಡಿಸಲಿದೆ. ಈ ಚಾರ್ಜರ್‍‍ಗಳು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ 80%ನಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲಿವೆ.

Most Read Articles

Kannada
English summary
Hyundai kona electric suv used by union minister - Read in Kannada
Story first published: Thursday, November 21, 2019, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X