ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಮಿಷನ್ ಎಮಿಷನ್ ಪಾಸಿಬಲ್ ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಮೂಲಕ ಕೋನಾ ಎಲೆಕ್ಟ್ರಿಕ್ ಕಾರು ಮಾಡಲಿರುವ ಹೊಸ ಸಾಹಸಕ್ಕೆ ಸಾಕ್ಷಿಯಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಕೋನಾ ಎಲೆಕ್ಟ್ರಿಕ್ ಕಾರು ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿರುವ ಟಿಬೆಟ್‍‍ನ ರಾಜಧಾನಿ ಲ್ಹಾಸಾದಿಂದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ತಲುಪಲಿದೆ. ಇದರಿಂದಾಗಿ ಕೋನಾ ಎಲೆಕ್ಟ್ರಿಕ್ ಕಾರು ಈ ಸಾಧನೆ ಮಾಡಲಿರುವ ಭಾರತದ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಸ್ಟಾಂಡರ್ಡ್ ಮಾದರಿಯ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.23.86 ಲಕ್ಷಗಳಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರುವ ಪ್ರೀಮಿಯಂ ಕೋನಾ ಎಲೆಕ್ಟ್ರಿಕ್ ಕಾರಿಗೆ ಹೆಚ್ಚುವರಿಯಾಗಿ ರೂ.20,000ಗಳನ್ನು ಪಾವತಿಸಬೇಕಾಗುತ್ತದೆ. ಇಂಟರ್ನಲ್ ಕಂಬಸ್ಜನ್ ಎಂಜಿನ್‍‍ನ ಕೋನಾ ಕಾರಿನ ಯಶಸ್ಸಿನ ನಂತರ ಕೋನಾ ಎಲೆಕ್ಟ್ರಿಕ್ ಕಾರು ಅಂತರ್‍‍‍ರಾಷ್ಟ್ರಿಯ ಮಾರುಕಟ್ಟೆಗೆ ಕಾಲಿಟ್ಟಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಇಂಟರ್ನಲ್ ಕಂಬಸ್ಜನ್ ಎಂಜಿನ್ ಹೊಂದಿದ್ದ ಕೋನಾ ಕಾರ್ ಅನ್ನು 2017ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಎಲೆಕ್ಟ್ರಿಕ್ ಆವೃತ್ತಿಯ ಕಾರ್ ಅನ್ನು ದಕ್ಷಿಣ ಕೊರಿಯಾದಲ್ಲಿ 2018ರ ಮೊದಲ ಭಾಗದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ನಂತರದ ದಿನಗಳಲ್ಲಿ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಎಲೆಕ್ಟ್ರಿಕ್ ಹಾಗೂ ಇಂಟರ್ನಲ್ ಕಂಬಸ್ಜನ್ ಕೋನಾ ಕಾರುಗಳೆರಡೂ 2019ರ ನಾರ್ಥ್ ಅಮೇರಿಕನ್ ಯುಟಿಲಿಟಿ ವೆಹಿಕಲ್ ಪ್ರಶಸ್ತಿಯನ್ನು ಪಡೆದಿವೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಈ ಪ್ರಶಸ್ತಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಬ್‍‍ಕಾಂಪ್ಯಾಕ್ಟ್ ಕ್ರಾಸ್ ಓವರ್ ಎಸ್‍‍ಯುವಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ 39.2 ಕಿ.ವ್ಯಾನ ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 134 ಬಿ‍‍ಹೆಚ್‍‍ಪಿ ಪವರ್ ಹಾಗೂ 395 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಕೋನಾ ಎಲೆಕ್ಟ್ರಿಕ್ ಕಾರು ಕೇವಲ 9.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸೆಲರೇಟ್ ಮಾಡುತ್ತದೆ. ಬ್ಯಾಟರಿಯನ್ನು ಸುಲಭವಾಗಿ ಚಾರ್ಜ್ ಮಾಡಲು ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದ ಗ್ರಿಲ್‍‍ನಲ್ಲಿ ಅಳವಡಿಸಲಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ಈ ಎಲೆಕ್ಟ್ರಿಕ್ ಕಾರ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 452 ಕಿ.ಮೀವರೆಗೂ ಚಲಿಸಲಿದೆ. ಡಿಸಿ ಫಾಸ್ಟ್ ಚಾರ್ಜರ್ ಅನ್ನು ಸಿಸಿ‍ಎಸ್ ಟೈಪ್ 2 ಚಾರ್ಜಿಂಗ್ ಪೋರ್ಟ್ ಮೂಲಕ ಚಾರ್ಜ್ ಮಾಡಿದರೆ, ಬ್ಯಾಟರಿಯನ್ನು 57 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಮಾಡಬಹುದು.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಈ ಚಾರ್ಜಿಂಗ್ ಪೋರ್ಟ್‍‍ಗಳನ್ನು ಚೆನ್ನೈ, ದೆಹಲಿ, ಕೊಲ್ಕತ್ತಾ, ಮುಂಬೈನಲ್ಲಿರುವ ಹುಂಡೈನ ಆಯ್ದ ಡೀಲರ್‍‍ಗಳ ಬಳಿ ಮಾರಾಟ ಮಾಡಲಾಗುತ್ತದೆ. ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಸಾರ್ವಜನಿಕ ಚಾರ್ಜರ್ ಕೇಂದ್ರಗಳನ್ನು ಸ್ಥಾಪಿಸಲಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಮನೆ ಅಥವಾ ಕಚೇರಿಗಳಲ್ಲಿ ಅಳವಡಿಸುವ 7.2 ಕಿ.ವ್ಯಾನ ಲೆವೆಲ್ 2 ಎಸಿ ಚಾರ್ಜರ್‍‍ನಲ್ಲಿ ಕೋನಾ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆಗಲು 6 ಗಂಟೆಗಳಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

2.8 ಕಿ.ವ್ಯಾನ ಪೋರ್ಟಬಲ್ ಚಾರ್ಜರ್ ಅನ್ನು ಸಾಧಾರಣವಾದ ವಾಲ್ ಸಾಕೆಟ್‍‍ಗಳ ಮೂಲಕವೂ ಚಾರ್ಜ್ ಮಾಡಬಹುದಾಗಿದೆ. ಈ ವಿಧಾನದ ಮೂಲಕ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆಗಲು 19 ಗಂಟೆ ಬೇಕಾಗುತ್ತದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಇನ್ನು ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ಸದ್ಯ ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮತ್ತಷ್ಟು ಎಲೆಕ್ಟ್ರಿಕ್ ಕಾರು ಖರೀದಿದಾರರನ್ನು ಸೆಳೆಯಲು ಹ್ಯುಂಡೈ ಮಾಡಿರುವ ಹೊಸ ಪ್ಲ್ಯಾನ್ ಕಾರು ಖರೀದಿದಾರರ ಆಕರ್ಷಣೆಗೆ ಕಾರಣವಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಸದ್ಯ ಆಟೋ ಮಾರುಕಟ್ಟೆಯಲ್ಲಿ ಅದೆಷ್ಟೋ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರು ಖರೀದಿಯ ಆಸಕ್ತಿ ಇದ್ದರೂ ಕೂಡಾ ದೂರದ ಪ್ರಯಾಣದ ವೇಳೆ ಎದುರಾಗಬಹುದಾದ ಚಾರ್ಜಿಂಗ್ ಸಮಸ್ಯೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಹಿಂದೇಟು ಹಾಕುತ್ತಿರುವುದು ಸುಳ್ಳಲ್ಲ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಇದಕ್ಕಾಗಿ ಹೊಸ ಪರಿಹಾರ ಸೂಚಿಸಿರುವ ಹ್ಯುಂಡೈ ಸಂಸ್ಥೆಯು ಫಾಸ್ಟ್‌ಚಾರ್ಜಿಂಗ್ ಸೌಲಭ್ಯದ ಜೊತೆಗೆ ಇದೀಗ ವೆಹಿಕಲ್ ಟು ವೆಹಿಕಲ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಪರಿಚಯಿಸಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಅಂದರೆ ಕೊನಾ ಕಾರು ಮಾಲೀಕರು ಪ್ರಯಾಣದ ವೇಳೆ ಚಾರ್ಜ್ ಖಾಲಿಯಾದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರಿನ ಮೂಲಕ ಒಂದಿಷ್ಟು ಚಾರ್ಜ್ ಮಾಡಿಕೊಂಡು ಪ್ರಯಾಣ ಮುಂದುವರಿಸಬಹುದಾದ ಸೌಲಭ್ಯ ಇದಾಗಿದ್ದು, ಇದರಿಂದ ಚಾರ್ಜಿಂಗ್ ಸಮಸ್ಯೆಗೆ ಇದು ತಾತ್ಕಾಲಿಕ ಪರಿಹಾರವಾಗಲಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಜೊತೆಗೆ ಅತಿ ಕಡಿಮೆ ಅವಧಿ ಚಾರ್ಜಿಂಗ್ ಮಾಡಿಕೊಳ್ಳಲು ಪೂರಕವಾದ 7.2KW AC ಚಾರ್ಜರ್ ಸೌಲಭ್ಯವನ್ನು ಕೊನಾ ಖರೀದಿದಾರರಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ ಗ್ರಾಹಕರ ಬೇಡಿಕೆ ಮೇರೆಗೆ ಪೋರ್ಟಬಲ್ ಚಾರ್ಜರ್ ಮೂಲಕ ಕಾರು ಇರುವ ಸ್ಥಳಿಗಳಿಗೆ ಬಂದು ಚಾರ್ಜಿಂಗ್ ಮಾಡಿಕೊಡಲಾಗುತ್ತದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಹ್ಯುಂಡೈ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಂದ ಕೋನಾ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದರಿಂದ ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಯಾರೂ ಮಾಡದ ಸಾಹಸಕ್ಕೆ ಮುಂದಾದ ಹ್ಯುಂಡೈ ಕೋನಾ..!

ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Hyundai Kona will become India’s first EV to reach Mt.Everest base camp - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more