ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲನೆಯ ಎಲೆಕ್ಟ್ರಿಕ್ ಕಾರು ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಎಕ್ಸ್ ಶೂರುಂ ಪ್ರಕಾರ ರೂ. 25.30 ಲಕ್ಷದ ಬೆಲೆಯನ್ನು ನಿಗದಿ ಮಾಡಲಾಗಿದೆ. ಹಾಗೆಯೆ ಹ್ಯುಂಡೈ ಸಂಸ್ಥೆಯು ಈ ಕಾರನ್ನು ಬಿಡುಗಡೆ ಮಾಡಿದ ದಿನವೇ ಈ ಕಾರಿನ ಟಿವಿಸಿಯನ್ನು ಸಹ ಬಿಡುಗಡೆ ಮಾಡಿದೆ.

ಹ್ಯುಂಡೈ ಕೋನಾ ಕಾರಿನ ಟಾಪ್ 5 ಅಂಶಗಳು

ಎಲೆಕ್ಟ್ರಿಕ್ ರೇಂಜ್

ಮಾಹಿತಿಗಳ ಪ್ರಕಾರ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 39.2 ಕಿವಿ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟೈರ್ಯು ಒಂದು ಬಾರಿಯ ಚಾರ್ಜ್‍ಗೆ 452 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಅಂದರೆ ನೀವು ಈ ಬ್ಯಾಟರಿಯಿಂದ ಬೇಂಗಳೂರಿನಿಂದ ಗೋಕರ್ಣದ ವರೆಗು ಹೋಗಬಹುದಾಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಕೋನಾ ಇವಿ ಕಾರಿನಲ್ಲಿ 64 ಕಿವಿ ಬ್ಯಾಟರಿಯನ್ನು ನೀಡಲಾಗಿದ್ದು, ಈ ಬ್ಯಾಟರಿಯು ಸುಮಾರು 575 ಕಿಲೀಮೀಟರ್ ರೇಂಜ್ ಅನ್ನು ನೀಡುತ್ತದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಸಧ್ಯಕ್ಕೆ 64 ಬ್ಯಾಟರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯಾವುದೇ ಯೋಜನೆಯ್ನನು ಹ್ಯುಂಡೈ ಸಂಸ್ಥೆಯು ಬಹಿರಂಗಪಡಿಸಲಿಲ್ಲ. 39.2 ಕಿವಿ ಬ್ಯಾಟರಿಯು 134.13 ಬಿಹೆಚ್‍ಪಿ ಮತ್ತು 395 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಈ ಕಾರು 9.7 ಸೆಕೆಂಡಿನಲ್ಲಿ 0 ಇಂದ 10 ಕಿಲೋಮೀಟರ್‍‍ನಷ್ಟು ಆಕ್ಸಿಲರೇಷನ್ ಅನ್ನು ನೀಡಲಿದ್ದು, ಕಾರಿನ ಚಾರ್ಜಿಂಗ್ ಅನ್ನು ಮಾಡಲಿ ಚಾರ್ಜಿಂಗ್ ಪಾಯಿಂಟ್ ಅನ್ನು ಕಾರಿನ ಮುಂಭಾಗಲ್ಲಿ ನೀಡಲಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಚಾರ್ಜಿಂಗ್ ಆಯ್ಕೆಗಳು

ಹ್ಯುಂಡೈ ಇಂಡಿಯಾ ಕೋನಾ ಎಲೆಕ್ಟ್ರಿಕ್ ಕಾರಿನ ಗ್ರಾಹಕರಿಗೆ ಎರಡು ರೀತಿಯಾದ ಚಾರ್ಜರ್‍‍ಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಒಂದು 3 ಪಿನ್ ಸಾಕೆಟ್ ಆಧರಿತ 7 ಕಿವಿ ಎಸಿ ವಾಲ್ ಬಾಕ್ಸ್ ಚಾರ್ಜರ್ ಮತ್ತೊಂದು ಪೋರ್ಟಬಲ್ ಚಾರ್ಜರ್ ಅನ್ನು ತುರ್ತು ಸಮಯದಲ್ಲಿ ತೆಗೆದು ಚಾರ್ಜಿಂಗ್ ಮಾದಿಕೊಳ್ಳಬಹುದಾದ ಸೌಲಭ್ಯವನ್ನು ನೀಡುವ ಹಾಗೆ ಇದನ್ನು ಅಭಿವೃದ್ಧಿ ಮಾಡಲಾಗಿದೆ. ಈ ಕಾರಿನ ಚಾರ್ಜಿಂ‍ಗ್‍ಗಾಗಿ ಪರ್ಯಾಯ ಮಾರ್ಗ ಕೂಡಾ ಇದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಅದೇನೆಂದರೆ ಈ ಕಾರಿಗೆ ಡಿಸಿ ಚಾರ್ಜರ್ ಸೌಲಭ್ಯ ಕೂಡಾ ಲಭ್ಯವಿದ್ದು, ಇವುಗಳನ್ನು ನೀವು ನಿಮ್ಮ ಮನೆಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಕೇವಲ ಡೀಲರ್‍ ಔಟ್‍ಲೆಟ್‍ಗಳಲ್ಲಿ ಮಾತ್ರ ಇನ್ಸ್ಟಾಲ್ ಮಾಡಲಾಗಿದೆ. ಮನೆಯಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದಾದ 7ಕಿವಿ ಚಾರ್ಜರ್ ಸುಮಾರು 6 ಗಂಟೆಗಳ ಕಾಲ ಸಂಪೂರ್ಣವಾಗಿ ಚಾರ್ಜ್ ಆಗಬಲ್ಲದು. ಅದೇ ಚಾರ್ಜರ್ 1 ಗಂಟೆಯೊಳಗೆ ಹೆಚ್ಚುವರಿ 50 ಕಿ.ಮೀ ವ್ಯಾಪ್ತಿಯೊಂದಿಗೆ ಬ್ಯಾಟರಿಯನ್ನು ಟಾಪ್ ಅಪ್ ಮಾಡಬಹುದು.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮಾರಾಟದ ನಂತರದ ಬೆಂಬಲ

ಹ್ಯುಂಡೈ ಕೋನಾ ದೇಶದಲ್ಲಿ ಬಿಡುಗಡೆಗೊಂಡ ಮೊದಲ ಎಸ್‍ಯುವಿ ಕಾರು ಆದುದರಿಂದ, ಈ ಕಾರಿನ ಹೆಚ್ಚಿನ ಮಾರಾಟಕ್ಕಾಗಿ ಸಂಸ್ಥೆಯು ಮಾರಾಟದ ನಂತರವು ಗ್ರಾಹಕರಿಗೆ ಬೇಕಾದ ಕೆಲವು ಸೌಲತ್ತುಗಳನ್ನು ನೀಡಬೇಕಾಗುತ್ತದೆ, ಹೀಗಾಗಿ ಹ್ಯುಂಡೈ ಸಂಸ್ಥೆಯು ಈ ಕಾರು ಖರೀದಿಯ ಜೊತೆಯಾಗಿ 3 ವರ್ಷ/ಅನಿಯಮಿತ ಕಿಲೋಮೀಟರ್ ವೆಹಿಕಲ್ ವಾರೆಂಟಿ ಮತ್ತು 3 ವರ್ಷ/1,60,000 ಕಿಲೋಮೀಟರ್ ಬ್ಯಾಟರಿ ವಾರೆಂಟಿಯನ್ನು ನೀಡಲಾಗುತ್ತಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಹ್ಯುಂಡೈ ಸಂಸ್ಥೆಯು ತಮ್ಮ ಕೋನಾ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿರುವ ನಿಯಮಿತ ಡೀಲರ್‍‍ಗಳ ಬಳಿ ಮಾತ್ರ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಹ್ಯುಂಡೈ ದೇಶದ 11 ನಗರಗಳಲ್ಲಿನ 15 ಡೀಲರ್‍‍ಶಿಪ್‍ಗಳಲ್ಲಿ ಮಾತ್ರ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ಮಾರಾಟ ಮಾಡಲಿದ್ದು, ಈ ಡೀಲರ್‍‍ಶಿಪ್‍ಗಳಲ್ಲಿ ಫಾಸ್ಟ್ ಚಾರ್ಜರ್ ಸೌಲಭ್ಯಗಳನ್ನು ಕೂಡಾ ಇನ್ಸ್ಟಾಲ್ ಮಾಡಲಾಗಿರುತ್ತದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಇವುಗಳ ಜೊತೆಗೆ ಹ್ಯುಂಡೈ ಸಂಸ್ಥೆಯು ಮ್ಯಾಪ್ ಇಂಡಿಯಾದ ಜೊತೆಗೂಡಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಡಿಸ್ಪ್ಲೇ ಮಾಡಲು ಎಲ್ಲವೆ ಎಂದು ತಮ್ಮ ವೆಬ್‍ಸೈಟ್ ಹಾಗು ಮೊಬೈಲ್ ಆಪ್‍ನಲ್ಲಿ ತೋರಿಸುತ್ತದೆ. ಇಷ್ಟೆ ಅಲ್ಲದೆಯೆ ಹ್ಯುಂಡೈ ಫ್ಯುಯಲ್ ಕಂಪೆನಿಯಾದ ಐಒಸಿಎಲ್ ಇನ್ನು ಸಂಪರ್ಕಿಸಲಾಗಿದ್ದು, ಶೀಘ್ರವೇ ಪೆಟ್ರೋಲ್ ಬಂಕ್‍ಗಳಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸಹ ಇನ್ಸ್ಟಾಲ್ ಮಾಡುವ ಕಾರ್ಯದಲ್ಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ವೈಶಿಷ್ಟ್ಯತೆಗಳು

ಎಲೆಕ್ಟ್ರಿಕ್ ಬಿಟ್ ಅನ್ನು ಹೊರತುಪಡಿಸಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದೆ. ಈ ಕಾರಿನಲ್ಲಿ ಆಪಲ್ ಕಾರ್‍‍ಪ್ಲೇ ಮತ್ತು ಆಂಡ್ರ್ಯಾಡ್ ಆಟೋ ಸಪೋರ್ಟ್ ಮಾಡುವ 17.7 ಇಂಚಿನ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಹೀಟೆಡ್ ಮತ್ತು ವೆಂಟಿಲೇಟೆಡ್ ಸೀಟ್‍ಗಳು, ಸನ್‍‍ರೂಫ್, ಎಲ್ಇಡಿ ಡಿಆರ್‍ಎಲ್ ಮತ್ತು ಹೆಡ್‍ಲೈಟ್ಸ್ ಸೇರಿದಂತೆ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಇನ್ನು ಹ್ಯುಂಡೈ ಕೋನಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‍‍ಬ್ಯಾಗ್‍ಗಳು, ಎಬಿಎಸ್‍ನೊಂದಿಗೆ ಇಬಿಡಿ, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಹಿಲ್-ಸ್ಟಾರ್ಟ್ ಅಸಿಸ್ಟ್, ರಿವರ್ಸ್ ಕ್ಯಾಮೆರಾ, ಟಿಪಿಎಂಎಸ್ (ಟೈರ್ ಪ್ರೆಷುರ್ ಮಾನಿಟರಿಂಗ್ ಸಿಸ್ಟಂ) ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ವರ್ಚುವಲ್ ಸೌಂಡ್ ಎಂಬ ಸುರಕ್ಷಾ ಸಾಧನಗಳನ್ನು ನೀಡಲಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಇವುಗಳ ಜೊತೆಗೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನಲ್ಲಿ ಇಕೊ, ಇಕೊ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ನಾಲ್ಕು ವಿವಿಧ ಡ್ರೈವಿಂಗ್ ಮೋಡ್‍ಗಳನ್ನು ನೀಡಲಾಗಿದೆ. ಹಾಗೆಯೆ ಇದರಲ್ಲಿ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಲು ವೈಯಕ್ತಿಕ ಎಸಿ ವ್ಯವಸ್ಥೆಯನ್ನು ಸಹ ಬಳಸಬಹುದಾದ ಸೌಕರ್ಯವನ್ನು ನೀಡಲಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಬೆಲೆ ಮತ್ತು ಎದುರಾಳಿಗಳು

ಒಂದೇ ಬಣ್ಣ ಹೊಂದಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಎಕ್ಸ್ ಶೋರುಂ ಪ್ರಕಾರ ರೂ. 25.30 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ಕಾರಿನ ಡ್ಯುಯಲ್ ಟೋನ್ ಪೆಯಿಂಟ್ ಸ್ಕೀಮ್‍ನ ಕಾರುಗಳು ರೂ. 25.50 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರು ದೇಶಿಯ ಮಾರುಕಟ್ಟೆಗೆ ಸಂಪ್ಲೀಟ್ಲಿ ಬ್ಯುಲ್ಡ್ ಯೂನಿಟ್ (ಸಿಬಿಯು) ಮಾರ್ಗದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದುಮ್ ಇನ್ನಿತರೆ ಭಾಗಗಳನ್ನು ಚೆನ್ನೈನಲ್ಲಿರುವ ಹ್ಯುಂಡೈ ಪ್ಲಾಂಟ್‍ನಲ್ಲಿ ಜೋಡಿಸಲಾಗುತ್ತದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಟಿವಿಸಿ ಇಲ್ಲಿದೆ ನೋಡಿ...

ಇನ್ನು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಎದುರಾಳಿಗಳ ಬಗ್ಗೆ ಹೇಳುವುದಾದರೆ, ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ ಈ ಕಾರಿಗೆ ಯಾವುದೇ ಎದುರಾಳಿಗಳು ಇಲ್ಲವಾದರೂ, ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಮತ್ತು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಬಲ್ಲದು.

Most Read Articles

Kannada
English summary
Hyundai Kona India's First Electric SUV Official TVC. Read In Kannada
Story first published: Saturday, July 13, 2019, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X