ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈನ ಎಲೈಟ್ ಐ 20 ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೊಂದಿದೆ. ಜೊತೆಗೆ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರ್ ಆಗಿದೆ. ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟ್‍‍ನಲ್ಲಿ ಮಾರುತಿ ಸುಜುಕಿ ಬಲೆನೊ ಕಾರಿಗೆ ಪೈಪೋಟಿ ನೀಡುತ್ತಿದೆ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಎಲೈಟ್ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳ ವೈಶಿಷ್ಟೈಗಳು, ಎಂಜಿನ್, ಬೆಲೆ, ಸೌಕರ್ಯ ಮತ್ತು ಇತರ ಅಂಶಗಳ ವಿಷಯದಲ್ಲಿ ಒಂದಕ್ಕೊಂದು ಪೈಪೋಟಿ ನೀಡುತ್ತಿವೆ. ಹ್ಯುಂಡೈ ಹೊಸ ತಲೆಮಾರಿನ ಹ್ಯಾಚ್‍‍ಬ್ಯಾಕ್ ಮಾದರಿಯ ಐ20 ಕಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯುರೋಪ್ ಮತ್ತು ಭಾರತದಲ್ಲಿ ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಅಭಿವೃದ್ಧಿ ಹಂತದಲ್ಲಿರುವ ಮಾದರಿಯ ಯಾವುದೇ ಚಿತ್ರಗಳು ಹೊರಬಂದಿಲ್ಲ, ಆದರೆ ಬ್ರೆಜಿಲ್ ಗ್ರಾಫಿಕ್ಸ್ ಡಿಸೈನರ್ ಕ್ಲೆಬರ್ ಅವರು ಕಾರಿನ ಬಗ್ಗೆ ಕೆಲವು ವಿವರಣೆಗಳನ್ನು ನೀಡಿದ್ದಾರೆ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಪ್ರಸುತ ತಲೆಮಾರಿನ ಎಲೈಟ್ ಐ 20 ಕಾರುಗಳು ಭಾರತದಲ್ಲಿ ಮಾರಾಟವಾಗುತ್ತಿದ್ದು, ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಕಾರಿನ ಬಗ್ಗೆ ಕ್ಲೆಬರ್ ವಿವರಣೆ ಪ್ರಕಾರ ಕಾರು ಉತ್ತಮ ಕ್ಷಮತೆಯನ್ನು ಹೊಂದಿದ್ದು ಬಿಡುಗಡೆಯಾದ ಬಳಿಕ ಹೆಚ್ಚಿನ ಯಶಸ್ಸನ್ನು ಗಳಿಸಲಿದೆ. ಇದು ಕೇವಲ ಸ್ಪೈ ಆಧಾರಿತ ವಿವರಣೆಯಾದರೂ ಅಂತಿಮವಾಗಿ ಕಾರು ಬಿಡುಗಡೆಯಾದಾಗ ಬೇರೆ ರೀತಿಯಲ್ಲಿರ ಬಹುದು. ಕಾರಿನಲ್ಲಿರುವ ಫ್ರಂಟ್ ಗ್ರಿಲ್, ಹೆಡ್‍‍ಲ್ಯಾಂಪ್‍‍ಗಳು ದೇಶದಲ್ಲಿ ಬಿಡುಗಡೆಯಾದ ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವಂತೆ ಇರಲಿವೆ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಕಾರಿನಲ್ಲಿ ಮರು‍ವಿನ್ಯಾಸಗೊಳಿಸಲಾದ ಬಂಪರ್ ಮತ್ತು ಎಲ್ಇ‍ಡಿ ಡಿ‍ಆರ್‍ಎಲ್‍‍ಗಳ ವಿನ್ಯಾಸದಲ್ಲಿ ಬದಲಾವಣೆಗಳಾಗಬಹುದು. ಸೈಡ್ ಪ್ರೊಫೈಲ್, ಪ್ರಸ್ತುತ ತಲೆಮಾರಿನ ಕಾರಿನಲ್ಲಿರುವಂತಿದೆ. ಬಂಪರ್ ಅನ್ನು ನಯವಾದ ಒಆರ್‍‍ವಿ‍ಎಂ‍‍ಗಳ ಮೂಲಕ ನವೀಕರಿಸಲಾಗಿದೆ. ಹೊಸ ತಲೆಮಾರಿನ ಹ್ಯುಂಡೈ ಎಲೈಟ್ ಐ 20 ಕಾರು ಆಕರ್ಷಕವಾದ ವಿನ್ಯಾಸದಿಂದ ಕೂಡಿರಲಿದೆ. ಇಂಟಿರಿಯರ್ ವಿನ್ಯಾಸದ ಕುರಿತು ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಇದರೊಂದಿಗೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವ ಟಾಟಾ ಆಲ್ಟ್ರೋಜ್ ಮತ್ತು ಹೋಂಡಾ ಜಾಝ್ ಕಾರಿಗೆ ಪೈಪೋಟಿಯನ್ನು ನೀಡಲು ಕೊರಿಯಾ ಮೂಲದ ಹ್ಯುಂಡೈ ಸಜ್ಜಾಗುತ್ತಿದೆ. ಬ್ಲೂಲಿಂಕ್ ಕನೆಕ್ಟಿವಿಟಿ ವೈಶಿಷ್ಟ್ಯತೆ, ಅಪ್‍‍ಡೇಟ್ ಇನ್ಟ್ರೋಮೆಂಟ್ ಕ್ಲಸ್ಟರ್, ಹೊಸ ಡ್ಯಾಶ್‍‍ಬೋರ್ಡ್ ಹೊಸ ಎಲೈಟ್ ಐ 20 ಯಲ್ಲಿ ಕಂಡುಬರುವ ಹೊಸ ವಿನ್ಯಾಸವಾಗಿದೆ. ಡ್ಯಾಶ್‍ಬೋರ್ಡ್ ವಿನ್ಯಾಸವನ್ನು ಅಪ್‍ಡೇಟ್ ಮಾಡಲಾಗಿದೆ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಪ್ರಸುತ್ತದ ಎಲೈಟ್ ಐ20 ಕಾರಿನ 1.4 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 89ಬೆಹೆಚ್‍ಪಿ ಪವರ್ ಹಾಗು 219ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದು, 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪ್ರಸ್ತುತ ಪೆಟ್ರೋಲ್ ಆವೃತ್ತಿಯ ಹ್ಯುಂಡೈ ಎಲೈಟ್ ಐ20 ಕಾರು ಗಂಟೆಗೆ 154 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದ್ದು, ಡೀಸೆಲ್ ಆವೃತ್ತಿಗಳು ಗಂಟೆಗೆ 165 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಹೊಂದಿವೆ.

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಹೊಸ ಹ್ಯುಂಡೈ ಎಲೈಟ್ ಐ 20 ಅನ್ನು ಪ್ರಸ್ತುತ ಕಾರಿನ ಪ್ಲಾಟ್‍‍ಫಾರ್ಮ್‍‍ನ ಅಪ್‍ಡೇಟ್ ಮಾಡಲಾದ ಕಾರನ್ನು ಉತ್ಪಾದಿಸಿದೆ. ಇಂಟಿರಿಯರ್ ರೀತಿಯಲ್ಲೇ ಮುಂದಿನ ತಲೆಮಾರಿನ ಎಲೈ ಐ20 ಕಾರಿನ ಎಂಜಿನ್ ಆಯ್ಕೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಹೊಸ ಅಪಡೇಟ್ ಕಾರು ಬಿಎಸ್-6 ಪ್ರೇರಿತ ಎಂಜಿನ್ ಅನ್ನು ಹೊಂದಿರಬಹುದು. ಹೊಸ ಎಲೈಟ್ ಐ 20 ಕಾರಿನಲ್ಲಿ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಎಂಟಿ ಅಥವಾ ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಹೊಂದಿರಬಹುದು. ಡೀಸೆಲ್ ಎಂಜಿನ್ ಜೊತೆ 6-ಸ್ಪೀಡ್ ಎಂಟಿ ಗೇರ್‍‍ಬಾಕ್ಸ್ ಅನ್ನು ಜೋಡಿಸಬಹುದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೊಸ ಲುಕ್‍‍ನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಲೈಟ್ ಐ20

ಹೊಸ ಕಾರು 1.0 ಲೀಟರ್ ಟರ್ಬೋಜಾಜ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ 7-ಸ್ಪೀಡ್ ಗೇರ್‍‍‍ಬಾಕ್ಸ್ ಜೋಡಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಹ್ಯುಂಡೈ ಐ 20 ಕಾರು, ಇದೀಗ ಹ್ಯುಂಡೈ ಅದೇ ಆವೃತ್ತಿಯ ಹೊಸ ಕಾರನ್ನು ಬಿಡುಗಡೆ ಮಾಡುವುದರಿಂದ ಕಾರು ಪ್ರಿಯರು ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ.

Most Read Articles

Kannada
English summary
next-gen Hyundai Elite i20: New renders shows what it could look like - Read in English
Story first published: Saturday, September 7, 2019, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X