ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ದಕ್ಷಿಣ ಕೊರಿಯಾದ ಅತಿದೊಡ್ಡ ಬಿಡಿ ಭಾಗಗಳ ತಯಾರಕರಾಗಿರುವ ಹ್ಯುಂಡೈ ಮೊಬಿಸ್ ಕ್ಯಾಮೆರಾ ಮಾನಿಟರಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಹೊಸ ತಲೆಮಾರಿನ ಕಾರುಗಳಲ್ಲಿ ಸೈಡ್ ವೀವ್ ಮಿರರ್‍‍ಗಳ ಬದಲಿಗೆ ಕ್ಯಾಮರಾಗಳನ್ನು ನೀಡಲಿದೆ.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಅಡ್ವಾನ್ಸ್ಡ್ ಸೆನ್ಸಾರ್ ಟೆಕ್ನಾಲಜಿ ಹೊಂದಿರುವ ಕಂಪನಿಯು ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಕೆಲವು ಜಾಗತಿಕ ಮೊಬಿಲಿಟಿ ಡೆವಲಪರ್‌ಗಳ ಜೊತೆ ಸೇರಿ, ಹೊಸ ಟೆಕ್ನಾಲಜಿಯನ್ನು ಕಾರು ತಯಾರಕರಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದ್ದಾರೆ.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಸೈಡ್ ವೀವ್ ಮಿರರ್‍‍‍ಗಳು ಕಿರಿದಾದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ. ಹೊಸ ಟೆಕ್ನಾಲಜಿಯಿಂದಾಗಿ ಸೈಡ್ ವೀವ್ ಮಿರರ್ ಈಗ ಕಾರುಗಳ ಒಳಗಿರಲಿದ್ದು, ಪಾರ್ಕಿಂಗ್ ಮಾಡಲು ಸುಲಭವಾಗಲಿದೆ.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಹ್ಯುಂಡೈ ಮೊಬಿಸ್‌ನ ಅಟಾನಾಮಸ್ ವೆಹಿಕಲ್ ಡೆವಲಪ್‍‍‍ಮೆಂಟ್‍‍ನ ಉಪಾಧ್ಯಕ್ಷರಾದ ಗ್ರೆಗೊರಿ ಬರಾಟಾಫ್‍‍ರವರು ಮಾತನಾಡಿ, ಭವಿಷ್ಯದ ಕಾರುಗಳಲ್ಲಿ ಎಲ್ಲಾ ಪ್ರಮುಖ ಯೂನಿಟ್‍‍ಗಳ ಕ್ರಿಯಾತ್ಮಕ ಹಾಗೂ ಡಿಸೈನ್ ಅಂಶಗಳನ್ನು ಅಪ್‍‍ಗ್ರೇಡ್‍ ಮಾಡಬೇಕಿದೆ. ಇವುಗಳನ್ನು ಇಂದಿನವರೆಗೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಕ್ಯಾಮೆರಾ ಮಾನಿಟರ್ ಸಿಸ್ಟಂ ಎನ್ನುವುದು ಹಿಂದಿನಿಂದ ಬರುವ ಕಾರುಗಳ ಡ್ರೈವಿಂಗ್‍‍ನ ಬಗ್ಗೆ ಮೇಲ್ವಿಚಾರಣೆ ಮಾಡುವ ಸಾಧನವಾಗಿದೆ. ನಿಮ್ಮ ಕಾರಿನೊಳಗೆ ಇರುವ ಮಾನಿಟರ್‌ಗಳಲ್ಲಿನ ನೈಜ ಘಟನೆಗಳ ಚಿತ್ರಗಳನ್ನು, ವೀಡಿಯೊಗಳನ್ನು ಪ್ರದರ್ಶಿಸುತ್ತದೆ.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ತಂತ್ರಜ್ಞಾನವು ವ್ಯಾಪಕವಾಗಿ ಬ್ಲೈಂಡ್ ಸ್ಪಾಟ್‍‍ಗಳನ್ನು ಕಡಿಮೆ ಮಾಡುವ ಮೂಲಕ ಚಾಲನಾ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೇ, ಕಾರಿನ ಬಾಹ್ಯ ವಿನ್ಯಾಸದಲ್ಲಿ ನವೀನ ಬದಲಾವಣೆಗಳನ್ನು ಸಹ ಶಕ್ತಗೊಳಿಸುತ್ತದೆ. ಸೈಡ್ ವೀವ್ ಮಿರರ್‍‍ಗಳನ್ನು ಮರೆಮಾಡುವುದರಿಂದ ಈ ತಂತ್ರಜ್ಞಾನವು ಇಂಧನ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹ್ಯುಂಡೈ ಹೇಳಿದೆ.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಕ್ಯಾಮೆರಾವು, ಸೈಡ್ ವೀವ್ ಮಿರರ್‌ಗಿಂತ 17 ಪಟ್ಟು ಹೆಚ್ಚು ಅಂದರೆ 35 ಡಿಗ್ರಿಯಷ್ಟು ಹೆಚ್ಚಿನ ವೀಕ್ಷಣೆಯನ್ನು ಹೊಂದಿದೆ. ಆದ್ದರಿಂದ, ಚಾಲಕನು ಬ್ಲೈಂಡ್ ಸ್ಪಾಟ್‍‍ಗಳನ್ನು ಗುರುತಿಸಲು ತಿರುಗಿ ನೋಡುವ ಅವಶ್ಯಕತೆಯಿಲ್ಲ, ಕಾರ್ ಅನ್ನು ಸುರಕ್ಷಿತವಾಗಿ ಓಡಿಸಬಹುದು.

ಕ್ಯಾಮರಾ ಮಾನಿಟರಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಿರುವ ಹ್ಯುಂಡೈ ಮೊಬಿಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕಂಪನಿಯು ತನ್ನ ಟೆಕ್ನಾಲಜಿಯನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಆದರೆ, ಜನರು ಈ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ. ಸಣ್ಣ ಜಾಗಗಳಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವ ಜನರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಆದರೆ ಕ್ಯಾಮೆರಾವು ಕಾರಿನ ಹಿಂಬದಿಯಲ್ಲಿರುವ ರೇರ್ ವೀವ್ ಮಿರರ್‍‍ಗಳನ್ನು ಬದಲಾಯಿಸಬಾರದು.

Most Read Articles

Kannada
English summary
Hyundai Mobis Develops First Camera Monitor System — Side-View Mirror Replacement - Read in kannada
Story first published: Tuesday, July 23, 2019, 10:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X