ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಏರ್ ಬ್ಯಾಗ್‍ ಕಾರಿನಲ್ಲಿ ಅಳವಡಿಸುವ ಪ್ರಮುಖವಾದ ಸುರಕ್ಷಾ ಫೀಚರ್ ಆಗಿದೆ. ಯಾವುದಾದರೂ ವಾಹನವು ಏರ್ ಬ್ಯಾಗ್ ಹೊಂದಿರುವ ಕಾರ್ ಅನ್ನು ಜೋರಾಗಿ ಗುದ್ದಿದಾಗ, ಏರ್ ಬ್ಯಾಗ್ ತೆರೆದುಕೊಂಡು ಕಾರಿನಲ್ಲಿರುವವರ ಜೀವ ಉಳಿಸುತ್ತದೆ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಇತ್ತೀಚಿಗೆ ಬೆಂಗಳೂರಿನಲ್ಲಿ ಪಂಕ್ಚರ್ ಆದ ಟ್ರಕ್‍‍ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ಹಾರಿ ಎದುರಿಗೆ ಬರುತ್ತಿದ್ದ ಕಾರಿಗೆ 100 ಕಿ.ಮೀ ವೇಗದಲ್ಲಿ ಗುದ್ದಿತ್ತು. ಕಾರಿನಲ್ಲಿ ಅಳವಡಿಸಲಾಗಿದ್ದ ಏರ್ ಬ್ಯಾಗ್‍‍‍ನಿಂದಾಗಿ ಕಾರು ಚಾಲಕನ ಜೀವಕ್ಕೆ ಯಾವುದೇ ತೊಂದರೆಯಾಗಲಿಲ್ಲ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಕೇಂದ್ರ ಸರ್ಕಾರವು ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಕಾರಿನಲ್ಲಿಯೂ ಏರ್‍‍ಬ್ಯಾಗ್‍‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕಾರು ತಯಾರಕ ಕಂಪನಿಗಳಿಗೆ ಸೂಚಿಸಿದೆ. ಹೊಸದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಕಾರುಗಳು, ಏರ್ ಬ್ಯಾಗ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡುತ್ತಿವೆ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಕೆಲವು ಕಾರುಗಳಲ್ಲಿ ಎರಡು ಅಥವಾ ನಾಲ್ಕು ಏರ್ ಬ್ಯಾಗ್‍‍ಗಳಿರುತ್ತವೆ. ಟಾಪ್ ಎಂಡ್ ಕಾರುಗಳಲ್ಲಿ ಆರು ಏರ್ ಬ್ಯಾಗ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಯಾವುದೇ ಕಂಪನಿಗಳು ಕಾರಿನ ಮಧ್ಯ ಭಾಗದಲ್ಲಿ ಏರ್ ಬ್ಯಾಗ್‍‍ಗಳನ್ನು ನೀಡುತ್ತಿರಲಿಲ್ಲ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಸೆಂಟರ್ ಸೈಡಿನ ಏರ್‍‍ಬ್ಯಾಗ್‍‍ಗಳನ್ನು ಅಭಿವೃದ್ಧಿಪಡಿಸಿದೆ. ಈ ಏರ್‍‍ಬ್ಯಾಗ್‍‍ನಿಂದಾಗಿ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಅಂತರವಿರಲಿದೆ. ಹ್ಯುಂಡೈ ಕಂಪನಿಯು ಈ ಹೊಸ ಟೆಕ್ನಾಲಜಿಯನ್ನು ಮುಂಬರುವ ದಿನಗಳಲ್ಲಿ ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಅಳವಡಿಸಲಿದೆ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಈ ಹೊಸ ಏರ್‍‍ಬ್ಯಾಗ್‍‍ನಿಂದಾಗಿ ಚಾಲಕ ಹಾಗೂ ಪ್ರಯಾಣಿಕರ ನಡುವಿನ ಅಂತರ ಹೆಚ್ಚಲಿದೆ. ಇದರಿಂದಾಗಿ ಮುಂಭಾಗದ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ತಲೆಗೆ ಗಾಯವಾಗುವುದನ್ನು ತಡೆಯ ಬಹುದು. ಮುಂಭಾಗದ ಪ್ರಯಾಣಿಕ ಸೀಟಿನಲ್ಲಿ ಯಾರೂ ಕುಳಿತಿರದಿದ್ದರೆ, ಸೈಡ್‍‍ನಲ್ಲಿರುವ ಏರ್ ಬ್ಯಾಗ್ ಚಾಲಕನನ್ನು ರಕ್ಷಿಸಲಿದೆ.

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಈ ಸೆಂಟರ್ ಏರ್‍‍ಬ್ಯಾಗ್ ಅನ್ನು ಚಾಲಕನ ಸೀಟಿನಲ್ಲಿ ಅಳವಡಿಸಲಾಗುವುದು. ಯಾವುದೇ ಅಪಾಯ ಎದುರಾದರೆ ಈ ಏರ್‍‍ಬ್ಯಾಗ್ ತೆರೆದುಕೊಳ್ಳಲಿದೆ. ಹೊಸ ಸೆಂಟರ್ ಸೈಡ್ ಏರ್ ಬ್ಯಾಗ್ ಕಾರಿನಲ್ಲಿರುವ ಪ್ರಯಾಣಿಕರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ತಲೆಗೆ ಉಂಟಾಗುವ ಭಾರೀ ಪ್ರಮಾಣದ ಗಾಯಗಳನ್ನು ತಪ್ಪಿಸಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಗ್ರಾಹಕರ ವಿಶ್ವಾಸಾರ್ಹತೆಗಾಗಿ ಹೊಸದಾಗಿ ಪೇಟೆಂಟ್ ಪಡೆದಿರುವ ಟೆಕ್ನಾಲಜಿಯನ್ನು ಅಳವಡಿಸಲಿದೆ. ಆದರೆ ಏರ್ ಬ್ಯಾಗ್‍‍ನ ತೂಕ ಹಾಗೂ ಗಾತ್ರವನ್ನು ಕಡಿಮೆಗೊಳಿಸಿದೆ. ಹ್ಯುಂಡೈ ಕಂಪನಿಯು ಹೊಸ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದು, ಏರ್ ಬ್ಯಾಗ್‍‍ನ ವಿನ್ಯಾಸವನ್ನು ಸರಳಗೊಳಿಸಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಇದರಿಂದಾಗಿ ಹ್ಯುಂಡೈ ಅಭಿವೃದ್ಧಿಪಡಿಸಿರುವ ಏರ್ ಬ್ಯಾಗ್‍, ಬೇರೆ ಏರ್ ಬ್ಯಾಗ್‍‍ಗಳಿಗಿಂತ 500 ಗ್ರಾಂ ಕಡಿಮೆ ತೂಕವನ್ನು ಹೊಂದಿರಲಿದೆ. ಏರ್ ಬ್ಯಾಗ್ ಚಿಕ್ಕದಾಗಿರುವ ಕಾರಣಕ್ಕೆ ಕಂಪನಿಯು ಹೊಸ ರೀತಿಯ ಸೀಟುಗಳನ್ನು ತನ್ನ ಮುಂಬರುವ ವಾಹನಗಳಲ್ಲಿ ವಿನ್ಯಾಸಗೊಳಿಸಲಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಸೆಂಟರ್ ಸೀಟಿನ ಏರ್‍‍ಬ್ಯಾಗ್ ಅಭಿವೃದ್ಧಿಪಡಿಸಿದ ಹ್ಯುಂಡೈ

ಮುಂಬರುವ ಯೂರೋ ಎನ್‍‍ಕ್ಯಾಪ್ ಈ ಸೈಡ್ ಏರ್ ಬ್ಯಾಗ್‍‍ಗಳನ್ನು ಪರಿಗಣಿಸಲಿದೆ. ಹ್ಯುಂಡೈ ಕಂಪನಿಯು ಅಭಿವೃದ್ಧಿಪಡಿಸಿರುವ ಸೈಡ್ ಏರ್ ಬ್ಯಾಗ್‍‍ಗಳು ಖಂಡಿತವಾಗಿಯೂ ಸಹಾಯಕ್ಕೆ ಬರಲಿದ್ದು, ಅಪಘಾತದ ಸಂದರ್ಭದಲ್ಲಿ ಹಿಂಬದಿ ಪ್ರಯಾಣಿಕರ ತಲೆಗೆ ಗಾಯವಾಗುವುದನ್ನು ತಡೆಯಲಿವೆ.

Most Read Articles

Kannada
English summary
Hyundai Motor Group Develops New Centre Side Airbag - Read in kannada
Story first published: Wednesday, September 18, 2019, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X