ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಕೆಲವು ತಿಂಗಳುಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತದಿಂದಾಗಿ ಕಾರುಗಳ ಮಾರಾಟವು ಕುಸಿತ ಕಂಡಿತ್ತು. ಆದರೆ ನಿಧಾನವಾಗಿ ಕೆಲವು ಕಂಪನಿಗಳ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ಇದೀಗ ಹ್ಯುಂಡೈ ಕಾರು‍ಗಳ ಮಾರಾಟದಲ್ಲಿ ಶೇ.2 ರಷ್ಟು ಏರಿಕೆಯಾಗಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿದ ಉಂಟಾದಾಗ ಜನಪ್ರಿಯ ಕಾರುಗಳ ಮಾರಾಟವು ಕೂಡ ಇಳಿಕೆಯಾಗಿತ್ತು. ಆದರೆ ಹಬ್ಬಗಳ ಸೀಸನ್‍‍ನಲ್ಲಿ ಭರ್ಜರಿ ಆಫರ್‍‍ಗಳು ಘೋಷಿಸಿರುವುದರಿಂದ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿತ್ತು. ಇದರ ನಡುವೆ ಹ್ಯುಂಡೈ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಹ್ಯುಂಡೈ ಕಂಪನಿಯ 44,600 ಕಾರುಗಳ ಮಾರಾಟವಾಗಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಹ್ಯುಂಡೈ ಕಂಪನಿಯ ಒಟ್ಟು 43,709 ಯು‍‍ನಿ‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.2 ರಷ್ಟು ಮಾರಾಟದಲ್ಲಿ ಏರಿಕೆಯಾಗಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಹ್ಯುಂಡೈ ಕಾರುಗಳ ಮಾರಾಟದಲ್ಲಿ ಇತ್ತೀಚಿಗೆ ಬಿಡುಗಡೆಯಾದ ವೆನ್ಯೂ ಪ್ರಮುಖ ಪಾತ್ರವಹಿಸಿದೆ. ಇನ್ನೂ ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್ ಕಾರು ಉತ್ತಮ ಮಾರಾಟವಾಗುತ್ತಿದೆ. ಹ್ಯುಂಡೈ ಕಂಪನಿಯ ಕಾರುಗಳ ಸರಣಿಯಲ್ಲಿ ವೆನ್ಯೂ ಹೆಚ್ಚು ಮಾರಾಟವಾಗುತ್ತಿದ್ದರೆ ಗ್ರ್ಯಾಂಡ್ ಐ10 ನಿಯೊಸ್ ಅದಕ್ಕೆ ಬೆಂಬಲವಾಗಿ ಮಾರಾಟದಲ್ಲಿ ಉತ್ತಮ ಬೆಂಬಲ ನೀಡುತ್ತಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ನವೆಂಬರ್ ತಿಂಗಳ ಕಾರುಗಳ ಮಾರಾಟದ ಬಗ್ಗೆ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ ವಿಕಾಸ್ ಜೈನ್ ಅವರು ಮಾತನಾಡಿ, ಕಳೆದ ನವೆಂಬರ್ ತಿಂಗಳಲ್ಲಿ ಹ್ಯುಂಡೈ ಕಾರುಗಳು ಉತ್ತಮವಾಗಿ ಮಾರಾಟವಾಗಿದೆ. ಇದರಿಂದ ಹ್ಯುಂಡೈ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ. ತಮ್ಮ ಸರಣಿಯ ಕಾರುಗಳಾದ ವೆನ್ಯೂ, ಗ್ರ್ಯಾಂಡ್ ಐ10 ನಿಯೊಸ್, ಕ್ರೆಟಾ ಮತ್ತು ಎಲೈಟ್ ಐ20 ಕಾರುಗಳು ಉತ್ತಮವಾಗಿ ಮಾರಾಟವಾಗಿವೆ ಎಂದು ಹೇಳಿದರು.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಹ್ಯುಂಡೈ ಕಳೆದ ನವೆಂಬರ್ ತಿಂಗಳಲ್ಲಿ 15,900 ಯುನಿ‍‍ಟ್‍‍ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 12,702 ಯುನಿ‍‍ಟ್‍ಗಳು ರಫ್ತು ಮಾಡಲಾಗಿತ್ತು. ಕಳೆದ ವರ್ಷದ ನೆವೆಂಬರ್‍‍ನಲ್ಲಿ ಮಾಡಲಾದ ರಫ್ತಿಗೆ ಹೋಲಿಸಿದರೆ ಶೇ.25.1 ರಷ್ಟು ಬೆಳವಣಿಗೆಯಾಗಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಹ್ಯುಂಡೈ ಕಂಪನಿಯ ಕಾರುಗಳ ಸರಣಿಯಲ್ಲಿ ವೆನ್ಯೂ ಎಸ್‍‍ಯುವಿಯು ಅತಿ ಹೆಚ್ಚು ಮಾರಾಟವಾಗುತ್ತಿದೆ. ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಿದ್ದು, ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದೆ. ಇ, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(0) ಎಂಬ ನಾಲ್ಕು ರೂಪಾಂತರಗಳಲ್ಲಿ ವೆನ್ಯೂ ಲಭ್ಯವಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಡೀಸೆಲ್ ಎಂಜಿನ್‌ಗಳು ಹೊಂದಿದ್ದರೆ, 1.0-ಲೀಟರ್ ಪೆಟ್ರೋಲ್ ವೆನ್ಯೂ ಟಾಪ್ ಎಂಡ್ ಮಾದರಿಯಾಗಿದೆ. ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 83 ಬಿಎಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಇನ್ನೂ 1.4-ಲೀಟರ್ ಡೀಸೆಲ್ ಎಂಜಿನ್ 89 ಬಿಎಚ್‌ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಟಾಪ್ ಎಂಡ್ ಮಾದರಿ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 120 ಬಿಎಚ್‌ಪಿ ಪವರ್ ಮತ್ತು 170-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಹಲವು ತಿಂಗಳುಗಳ ಬಳಿಕ ಏರಿಕೆಯಾಯ್ತು ಹ್ಯುಂಡೈ ಕಾರುಗಳ ಮಾರಾಟ

ಹ್ಯುಂಡೈ ಕಾರು‍ಗಳ ಮಾರಾಟದಲ್ಲಿ ಶೇ.2 ರಷ್ಟು ಏರಿಕೆಯಾಗಿದೆ. ಇದರಲ್ಲಿ ಹ್ಯುಂಡೈ ವೆನ್ಯೂ ಕಾರು ಹೆಚ್ಚಿನ ಕೊಡುಗೆ ನೀಡಿದೆ. ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿವೆ. ಶೀಘ್ರದಲ್ಲೇ ಹ್ಯುಂಡೈ ಬಿಎಸ್-6 ಕಾರುಗಳು ಬಿಡುಗಡೆಯಾಗಲಿವೆ.

Most Read Articles

Kannada
English summary
Hyundai Registers 2% Growth In November 2019 - Read in Kannada
Story first published: Tuesday, December 10, 2019, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X