ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಹೊಸ ತಲೆಮಾರಿನ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆಯ ಮೊದಲ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಸ್ಯಾಂಟ್ರೋ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಕಳೆದ ವರ್ಷ ಅಕ್ಟೋಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಸ್ಯಾಂಟ್ರೋ ಕಾರು ಇದುವರೆಗೆ ದಾಖಲೆ ಪ್ರಮಾಣದ ಮಾರಾಟ ಕಂಡಿದ್ದು, ಇದೀಗ ತನ್ನ ನೆಚ್ಚಿನ ಗ್ರಾಹಕರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಹೊಸ ಕಾರು ಬೆಂಗಳೂರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.6.43 ಲಕ್ಷ ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ ಕಾರು ಸ್ಪೋರ್ಟ್ಜ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್‌ಬಾಕ್ಸ್ ಮಾದರಿಯನ್ನು ಖರೀದಿ ಮಾಡಬಹುದು.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಹೀಗಾಗಿ ಸ್ಪೋರ್ಟ್ಜ್ ಮ್ಯಾನುವಲ್ ಕಾರಿಗೆ ಬೆಂಗಳೂರು ಆನ್ ರೋಡ್ ಪ್ರಕಾರ ರೂ.6.43 ಲಕ್ಷ ಮತ್ತು ಸ್ಪೋರ್ಟ್ಜ್ ಆಟೋಮ್ಯಾಟಿಕ್ ಆವೃತ್ತಿಗೆ ರೂ.7.13 ಲಕ್ಷ ಬೆಲೆ ನಿಗದಿಪಡಿಸಿದ್ದು, ಸಾಮಾನ್ಯ ಆವೃತ್ತಿಗಳಿಂತ ಆ್ಯನಿವರ್ಸರಿ ಎಡಿಷನ್ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಆ್ಯನಿವರ್ಸರಿ ಎಡಿಷನ್ ಹೊರಭಾಗದಲ್ಲಿ ಕಪ್ಪು ಮಿಶ್ರಿತ ಹೊಂದಿರುವ ಒಆರ್‌ವಿಎಂಎಸ್, ಡೋರ್ ಹ್ಯಾಂಡಲ್, ಗ್ಲಾಸಿ ಬ್ಲ್ಯಾಕ್ ಬಣ್ಣದ ರೂಫ್ ರೈಲ್ಸ್, ಗನ್‌ಮೆಟಲ್ ಗ್ರೇ ವೀಲ್ಹ್ ಕವರ್ಸ್, ರಿಯರ್ ಕ್ರೋಮ್ ಗಾರ್ನಿಶ್ ಮತ್ತು ಕಾರಿನ ಹಿಂಭಾಗದ ಬೂಟ್ ಲಿಡ್ ಮೇಲ್ಭಾಗದಲ್ಲಿ ಆ್ಯನಿವರ್ಸರಿ ಎಡಿಷನ್ ಚಿಹ್ನೆಯನ್ನು ಜೋಡಿಸಲಾಗಿದೆ. ಜೊತೆಗೆ ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಕಾರಿನ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಅಂದ್ರೆ, ಸಂಪೂರ್ಣ ಕಪ್ಪು ಬಣ್ಣದ ಇಂಟಿರಿಯರ್ ಜೊತೆಗೆ ತಿಳಿನಿಲಿ ಬಣ್ಣದ ಇನ್ಸ್‌ರ್ಟ್, ಹೊಸ ಫ್ಯಾಬ್ರಿಕ್ ಆಸನಗಳನ್ನು ಪಡೆದುಕೊಂಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕಾರಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಈ ಬಾರಿ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಹೊಸ ಬಣ್ಣಗಳ ಆಯ್ಕೆ ಸಹ ನೀಡಲಾಗಿದ್ದು, ಪೊಲಾರ್ ವೈಟ್ ಮತ್ತು ಅಕ್ವಾ ಟೀಲ್ ಬಣ್ಣಗಳಲ್ಲಿ ಸ್ಯಾಂಟ್ರೋ ಖರೀದಿಗೆ ಲಭ್ಯವಿರುವುದಾಗಿ ಹ್ಯುಂಡೈ ಅಧಿಕೃತ ಮಾಹಿತಿ ನೀಡಿದೆ.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನು ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ ಕಾರುಗಳಲ್ಲಿ ನೀಡಲಾಗಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದ್ದು, ಆ್ಯನಿವರ್ಸರಿ ಎಡಿಷನ್ ಹೊರತುಪಡಿಸಿ ಸಾಮಾನ್ಯ ಬೆಲೆಗಳಲ್ಲಿ ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟ್ರಾ ವೆರಿಯೆಂಟ್‌ಗಳನ್ನು ಖರೀದಿ ಮಾಡಬಹುದು.

ಸ್ಯಾಂಟ್ರೋ ಪ್ರಿಯರಿಗಾಗಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ ಹ್ಯುಂಡೈ

ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ 1.1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, ಸಾಮಾನ್ಯ ಸ್ಯಾಂಟ್ರೋ ಆವೃತ್ತಿಗಳಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಆವೃತ್ತಿಯನ್ನು ಖರೀದಿ ಮಾಡಬಹುದು.

Most Read Articles

Kannada
English summary
Hyundai Santro Anniversary edition launched. Read in Kannada.
Story first published: Saturday, October 19, 2019, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X