ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೂ ಮಾರಾಟಗೊಂಡ ಸ್ಯಾಂಟ್ರೋ ಕಾರು ಎಷ್ಟು ಗೊತ್ತಾ.?

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯು ಅಕ್ಟೋಬರ್ ತಿಂಗಳ 23ರಂದು ತಮ್ಮ ಜನಪ್ರಿಯ ಸ್ಯಾಂಟ್ರೊ ಕಾರನ್ನು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಅಳವಡಿಸಿ ಕಡಿಮೆ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಸುಮಾರು 20 ವರ್ಷಗಳ ಬಳಿಕ ಮತ್ತೆ ಹ್ಯಾಚ್‍ಬ್ಯಾಕ್ ಕಾರು ಮಾರಾಟದಲ್ಲಿ ದೂಳೆಬ್ಬಿಸಲು ಬಂದ ಹ್ಯುಂಡೈ ಸ್ಯಾಂಟ್ರೋ ಮಾರುಕಟ್ಟೆಯಲ್ಲಿ ಈಗಾಗಲೆ ತನ್ನ ಕೈಚಳಕ ನಿರೂಪಿಸಿದೆ. ಮಾಹಿತಿಗಳ ಪ್ರಕಾರ ಅಕ್ಟೋಬರ್ 23ರಂದು ಬಿಡುಗಡೆಗೊಂಡ ಹ್ಯುಂಡೈ ಸ್ಯಾಂಟ್ರೋ ಕಾರು ಈ ವರೆಗು 57,000 ಯೂನಿಟ್ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ.

ಒಮ್ಮೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿ ಮರೆಯಾಗಿ, ಮತ್ತೊಮೆ ಬಿಡುಗಡೆಗೊಂಡು ಅದೇ ಟ್ರೆಂಡ್ ಅನ್ನು ಮುಂದುಗಿಸುವುದು ಸುಲಭದ ಕೆಲಸವಲ್ಲ. ಹಾಗಾದರೆ ಹೊಸ ತಲೆಮಾರಿನ ಹ್ಯುಂಡಿ ಕಾರಿನಲ್ಲಿ ಈ ಬಾರಿ ಏನೆಲಾ ಬದಲಾವಣೆ ಮತ್ತು ಇಷ್ಟು ಬೇಡಿಕೆ ಏಕೆ ಎಂದು ತಿಳಿಯಲು ಮುಂದಕ್ಕೆ ಓದಿರಿ..

ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೂ ಮಾರಾಟಗೊಂಡ ಸ್ಯಾಂಟ್ರೋ ಕಾರು ಎಷ್ಟು ಗೊತ್ತಾ.?

ಇನ್ನು ಹೊಸ ಸ್ಯಾಂಟ್ರೋ ಕಾರು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಯನ್ನು ಹೊಂದಿದ್ದು, ಟಾಲ್-ಬಾಯ್ ಡಿಸೈನ್ ಹೊಂದಿರುವ ಹೊಸ ಕಾರು ವ್ಯಯಕ್ತಿಕ ಬಳಕೆಯ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ.

ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೂ ಮಾರಾಟಗೊಂಡ ಸ್ಯಾಂಟ್ರೋ ಕಾರು ಎಷ್ಟು ಗೊತ್ತಾ.?

ಎಂಜಿನ್ ಸಾಮರ್ಥ್ಯ
ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ಮೈಲೇಜ್
ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.

ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೂ ಮಾರಾಟಗೊಂಡ ಸ್ಯಾಂಟ್ರೋ ಕಾರು ಎಷ್ಟು ಗೊತ್ತಾ.?

ಲಭ್ಯವಿರುವ ಬಣ್ಣಗಳು
ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಈ ಮೂಲಕ ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ತ್ರೀವ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ, ರೆನಾಲ್ಟ್ ಕ್ವಿಡ್ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡತ್ತಿದೆ.

Most Read Articles

Kannada
English summary
Hyundai Santro Sales Cross 57,000 Units. Read in Kannada
Story first published: Tuesday, February 19, 2019, 9:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X