ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ನಂತರದ ಸ್ಥಾನದಲ್ಲಿರುವ ಹ್ಯುಂಡೈ ಕಂಪನಿಯು ಎನ್ ಸರಣಿ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ಎನ್ ಸರಣಿಯ ಕಾರುಗಳು ಹ್ಯುಂಡೈ ಮೋಟಾರ್‍‍ನ ವಿಶ್ವ ಮಾರುಕಟ್ಟೆಯಲ್ಲಿರುವ ಪರ್ಫಾಮೆನ್ಸ್ ಕಾರುಗಳಾಗಿವೆ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಎನ್ ಸರಣಿಯ ಎಲ್ಲಾ ಕಾರುಗಳು ಹೆಚ್ಚಿನ ಪರ್ಫಾಮೆನ್ಸ್ ಹೊಂದಿದ್ದು, ಮೂಲ ಮಾದರಿಯ ಕಾರುಗಳ ರೀತಿಯಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಬೆಲೆ ಹೆಚ್ಚಿದ್ದರೆ ಕಾರುಗಳ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ಆಗುವುದಿಲ್ಲ ಹಾಗೂ ಪರ್ಫಾಮೆನ್ಸ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯು ಇರುವುದಿಲ್ಲ. ಎನ್ ಸರಣಿಯ ಕಾರುಗಳನ್ನು ಭಾರತಕ್ಕೆ ತಂದು ಸ್ವಲ್ಪ ಮಟ್ಟಿನ ಆಸಕ್ತಿಯನ್ನು ಸೃಷ್ಟಿಸಿ, ಗ್ರಾಹಕರ ಪ್ರತಿಕ್ರಿಯೆಯನ್ನು ನೋಡಿಕೊಂಡು ನಂತರದ ದಿನಗಳಲ್ಲಿ ಮಾರಾಟ ಮಾಡಲಾಗುವುದು. ಅವುಗಳನ್ನು ಬೇರೆ ಕಾರುಗಳ ರೀತಿಯಲ್ಲಿ ಮಾರಾಟ ಮಾಡಲಾಗುವುದಿಲ್ಲ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಈ ಕಾರುಗಳು ಪರ್ಫಾಮೆನ್ಸ್ ಕಾರ್ ಹೊಂದಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುತ್ತವೆ. ಹ್ಯುಂಡೈ ಕಂಪನಿಯು ಎನ್ ಸರಣಿಯ ಎಷ್ಟು ಕಾರುಗಳು ಮಾರಾಟವಾದವು ಎಂಬುದರ ಮೇಲೆ ಮುಂದಿನ ಯೋಜನೆಯನ್ನು ರೂಪಿಸಲಿದೆ. ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಎನ್ ಸರಣಿಯ ಕಾರುಗಳನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಈ ಎಕ್ಸ್ ಪೋದಲ್ಲಿ ಎನ್ ಸರಣಿಯ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ. ಹ್ಯುಂಡೈ ಕಂಪನಿಯು ಈಗಾಗಲೇ ಕೆಲವು ಎನ್ ಸರಣಿಯ ಕಾರುಗಳನ್ನು ಭಾರತಕ್ಕೆ ತಂದಿದ್ದು, ಅವುಗಳಿಗಾಗಿ ಕೆಲವು ಗ್ರಾಹಕ ಕೇಂದ್ರಗಳನ್ನು ತೆರೆದಿದೆ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಹ್ಯುಂಡೈ ಕಂಪನಿಯು ಎನ್ ಸರಣಿಯ ಕಾರುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ವರದಿಗಳ ಪ್ರಕಾರ ಕಂಪನಿಯು ಎನ್ ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆದಿದೆ. ಈ ಸರಣಿಯ ಕಾರುಗಳನ್ನು ಯುವ ಜನತೆಯನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿರುವ ಕಾರಣದಿಂದಾಗಿ ಕಂಪನಿಯು ಭಾರತದಲ್ಲಿ ಮಾಡಲಿರುವ ಹೂಡಿಕೆಯನ್ನು ಸಮರ್ಥಿಸಿಕೊಂಡಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಎನ್ ಸರಣಿಯ ಕಾರುಗಳು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರುಗಳನ್ನೇ ಹೋಲುತ್ತಿದ್ದು, ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಎದ್ದು ಕಾಣುವಂತಹ ಬದಲಾವಣೆಗಳೆಂದರೆ ಸ್ಪಾಯಿಲರ್, ಸೈಡ್ ಸ್ಕರ್ಟ್, ಅಗ್ರೇಸಿವ್ ಬಂಪರ್, ಸ್ಟಿಕ್ಕರ್‍‍ಗಳು ಹಾಗೂ ಬ್ಯಾಡ್ಜ್ ಗಳನ್ನು ಒಳಗೊಂಡಿವೆ. ಈ ಸರಣಿಯ ಕಾರುಗಳು ಸ್ಟಾಂಡ್ ಅಲೊನ್ ಮಾದರಿಗಿಂತ ವಿಭಿನ್ನವಾಗಿವೆ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಪೂರ್ಣ ಪ್ರಮಾಣದ ಎನ್ ಸರಣಿಯ ಕಾರುಗಳಲ್ಲಿ, ಎನ್ ಎಂಜಿನ್ ಇರಲಿದೆ. ಈ ರೀತಿಯ ಎಂಜಿನ್ ಅನ್ನು ಎನ್ ಸರಣಿಯ ಕಾರುಗಳಿಗಾಗಿಯೇ ತಯಾರಿಸಲಾಗಿದೆ. ಎನ್ ಲೈನ್ ಸರಣಿಯ ಕಾರುಗಳಲ್ಲಿ ರೆಗ್ಯುಲರ್ ಮಾದರಿಯ ಕಾರುಗಳಲ್ಲಿರುವಂತಹ ಎಂಜಿನ್ ಇದ್ದರೂ ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದೆ.

MOST READ: ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಹ್ಯುಂಡೈ ಐ30ಎನ್, ಎನ್ ಸರಣಿಯಲ್ಲಿ ತಯಾರಾದ ಮೊದಲ ಕಾರ್ ಆಗಿದೆ. ಇದರ ಜೊತೆಯಲ್ಲಿ ಐ30 ಫಾಸ್ಟ್ ಬ್ಯಾಕ್ ಎನ್ ಹಾಗೂ ವೆಲೊಸ್ಟರ್ ಎನ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ವೆಲೊಸ್ಟರ್ ಎನ್ ಕಾರು ತನ್ನ ಪರ್ಫಾಮೆನ್ಸ್ ನಿಂದಾಗಿ ಹೆಚ್ಚಿ ಗಮನ ಸೆಳೆಯುತ್ತಿದೆ. ಎನ್ ಸರಣಿಯಲ್ಲಿ ಐ30ಎನ್ ಲೈನ್, ಐ30 ಫಾಸ್ಟ್ ಬ್ಯಾಕ್ ಎನ್ ಲೈನ್ ಹಾಗೂ ಟುಕ್ಸಾನ್ ಎನ್ ಲೈನ್ ಕಾರುಗಳಿವೆ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಹ್ಯುಂಡೈ ಕಂಪನಿಯು ಎನ್ ಮಾದರಿಯನ್ನು ಐ20, ಕೋನಾ ಹಾಗೂ ಕ್ರೆಟಾ ಕಾರುಗಳಲ್ಲಿಯೂ ಸಹ ಅಳವಡಿಸುವ ಯೋಜನೆಯಲ್ಲಿದೆ. ಬಹುಶಃ ಹೊಸ ತಲೆಮಾರಿನ ಐ20 ಕಾರಿನಲ್ಲಿ ಈ ಮಾದರಿಯನ್ನು ಆರಂಭಿಸಬಹುದು. ಈ ಕಾರುಗಳಲ್ಲಿ ಆರಂಭಿಸಿದರೆ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲಿದೆ.

MOST READ: ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಐದು ಸ್ಕೂಟರ್‍‍ಗಳಿವು

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಮಾರುತಿ ಸುಜುಕಿ ಕಂಪನಿಯು ಪರ್ಫಾಮೆನ್ಸ್ ಸರಣಿಯನ್ನು ಭಾರತದಲ್ಲಿ ಆರ್‍ಎಸ್ ಸರಣಿಯ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ತರಲು ಪ್ರಯತ್ನ ಪಟ್ಟಿತ್ತು. ಈಗಿರುವ ಬಲೆನೋ ಆರ್‍ಎಸ್ ಕಾರಿನಲ್ಲಿ ಕಂಪನಿಯ 1.0 ಬೂಸ್ಟರ್ ಜೆಟ್ ಎಂಜಿನ್‍‍ಯಿದ್ದು, ಬೇರೆ ಮಾರುಕಟ್ಟೆಗಳಲ್ಲಿ ಬಲೆನೋ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನಲ್ಲಿ ಬೇರೆ ಯಾವುದೇ ರೀತಿಯ ಎದ್ದು ಕಾಣುವಂತಹ ವಿನ್ಯಾಸಗಳನ್ನು ಮಾಡಲಾಗಿಲ್ಲ.

ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ

ಫೋಕ್ಸ್ ವ್ಯಾಗನ್ ಸಹ ಪೊಲೊ ಜಿಟಿ ಸರಣಿಯನ್ನು ಬಿಡುಗಡೆಗೊಳಿಸಿತ್ತು. ಎರಡೂ ಕಂಪನಿಗಳೂ ಅಷ್ಟೇನೂ ಯಶಸ್ಸನ್ನು ಕಾಣಲಿಲ್ಲ. ಹ್ಯುಂಡೈ ಎನ್ ಸರಣಿಯ ಕಾರುಗಳನ್ನು ಕೆಲವು ನಿರ್ದಿಷ್ಟ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Hyundai To Bring N Performance Brand To India - Read in kannada
Story first published: Wednesday, June 12, 2019, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X