ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಹ್ಯುಂಡೈ ಕಂಪನಿಯು ಉತ್ತಮ ವಿನ್ಯಾಸದ, ವಿಶ್ವಾಸಾರ್ಹವಾದ ಕಾರುಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದೆ. ಹ್ಯುಂಡೈದ ಕಾರುಗಳು ಅಪರೂಪಕ್ಕೊಮ್ಮೆ ತೊಂದರೆಗೆ ಸಿಲುಕಿಕೊಳ್ಳುತ್ತವೆ. ಇದರರ್ಥವು ಹ್ಯುಂಡೈ ಕಾರುಗಳು ಅಷ್ಟೇನೂ ಬಲಶಾಲಿಗಳಲ್ಲ ಎಂಬುದಲ್ಲ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಅಮೇರಿಕಾದ ಉತಾದಲ್ಲಿ ವ್ಯಕ್ತಿಯೊಬ್ಬರು ಹ್ಯುಂಡೈ ಟ್ಯುಸಾನ್ ಕಾರಿನ ಪರೀಕ್ಷಾರ್ಥ ಚಾಲನೆಗಾಗಿ ತೆರಳಿ, ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ಮ್ಯಾಟ್ಸ್ ಟೋವಿಂಗ್ ಅಂಡ್ ರಿಕವರಿ ವೀಡಿಯೊವೊಂದನ್ನು ಯೂಟ್ಯೂಬ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದು, ಅದರಲ್ಲಿ ಕಲ್ಲು ರಸ್ತೆಯಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸನ್ ಕಾರ್ ಅನ್ನು ಹೇಗೆ ಹೊರ ತೆಗೆಯಲಾಯಿತು ಎಂಬುದನ್ನು ತೋರಿಸಲಾಗಿದೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ವೀಡಿಯೊ ಅಪ್‍‍ಲೋಡ್ ಮಾಡಿರುವ ಯೂಟ್ಯೂಬ್‍ ಚಾನಲ್ ತನ್ನ ಆಫ್-ರೋಡ್ ಟೋಯಿಂಗ್ ಹಾಗೂ ರಕ್ಷಣಾ ಕಾರ್ಯಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿ, ಹ್ಯುಂಡೈ ಟ್ಯುಸಾನ್‍‍ನನ್ನು ರಕ್ಷಿಸುವಂತೆ ಫೋನ್ ಕರೆ ಬಂದಿತ್ತು.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಕರೆ ಸ್ವೀಕರಿಸಿದ್ದ ಟೋಯಿಂಗ್ ಸರ್ವಿಸ್ ಆಪರೇಟರ್ ಮೊದಲಿಗೆ, ಕರೆ ಮಾಡಿದ್ದ ಜಾಗವು ಹೆದ್ದಾರಿಯ ಪಕ್ಕದಲ್ಲಿದ್ದರಿಂದ ಇದೊಂದು ಸಾಮಾನ್ಯ ರಕ್ಷಣಾ ಕಾರ್ಯವೆಂದು ಭಾವಿಸಿದ್ದರು. ಆದರೆ ಹ್ಯುಂಡೈ ವಾಹನವು ಸಿಕ್ಕಿಹಾಕಿಕೊಂಡಿದ್ದ ಜಾಗವು ಹೆದ್ದಾರಿಗೆ ಹತ್ತಿರದಲ್ಲಿಲ್ಲ ಎಂದು ಅಲ್ಲಿಗೆ ತೆರಳಿದ ನಂತರ ತಿಳಿದು ಬಂದಿದೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಜೊತೆಗೆ ಹ್ಯುಂಡೈ ಟ್ಯುಸನ್ ಅನ್ನು ಬಾಡಿಗೆಗೆ ಪಡೆಯಲಾಗಿತ್ತು. ಅದನ್ನು ಚಾಲನೆ ಮಾಡಿದ್ದ ವ್ಯಕ್ತಿಯು ಜಿ‍‍ಪಿ‍ಎಸ್ ಆ ಮಾರ್ಗವನ್ನು ತೋರಿಸಿದ್ದರಿಂದ ಆ ಜಾಗಕ್ಕೆ ಹೋಗಿದ್ದಾರೆ. ಉತಾ ಅಮೆರಿಕದಲ್ಲಿರುವ 13ನೇ ಅತಿದೊಡ್ಡ ರಾಜ್ಯವಾಗಿದೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಈ ರಾಜ್ಯವು ಸಾಹಸಮಯ ಆಫ್-ರೋಡ್ ಹಾದಿಗಳಿಗೆ ಹೆಸರುವಾಸಿಯಾಗಿದೆ. ಅಮೇರಿಕಾದಲ್ಲಿರುವ ಸಾವಿರಾರು ಆಫ್-ರೋಡ್ ಉತ್ಸಾಹಿಗಳು ಮೋಜು ಮಸ್ತಿಗಾಗಿ ಉತಾಗೆ ಹೋಗುತ್ತಾರೆ. ಈ ಕಾರಣಕ್ಕಾಗಿ ಮ್ಯಾಟ್ಸ್ ಟೋವಿಂಗ್ ಅಂಡ್ ರಿಕವರಿಯಂತಹ ರಕ್ಷಣಾ ಪಡೆಗಳು ಅಸ್ತಿತ್ವದಲ್ಲಿವೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಈ ರಕ್ಷಣಾ ಕಂಪನಿಯು ಆಫ್-ರೋಡ್ ರಿಕವರಿಗೆ ಪರಿಣತಿ ಹೊಂದಿದೆ. ಹ್ಯುಂಡೈ ಟ್ಯುಸಾನ್ ಕಲ್ಲುಗಳ ದಾರಿಯಲ್ಲಿ ಸಿಲುಕಿತ್ತು. ಮಾರ್ಪಡಿಸಿದ 1997ರ ಮಾದರಿಯ ಜೀಪ್ ಚೆರೋಕೀ ಎಕ್ಸ್‌ಜೆ ಲಿಮಿಟೆಡ್ ವಾಹನವನ್ನು ಬಳಸಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಅರಣ್ಯದಲ್ಲಿ ಸಾಕಷ್ಟು ದೂರ ಕ್ರಮಿಸಿದ ನಂತರ, ಹ್ಯುಂಡೈ ಟ್ಯೂಸನ್ ಕಣ್ಣಿಗೆ ಬಿದ್ದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಟ್ಯುಸಾನ್ ಅನ್ನು ಚಾಲನೆ ಮಾಡುತ್ತಿದ್ದ ಚಾಲಕನು ಅದನ್ನು ಮಧ್ಯದಲ್ಲಿ ತಿರುಗಿಸಲು ಪ್ರಯತ್ನಿಸಿದ್ದರಿಂದ ಅದು ವಿಲಕ್ಷಣ ಸ್ಥಳದಲ್ಲಿ ಸಿಲುಕಿಕೊಂಡಿದೆ. ಎಸ್‍‍ಯುವಿಯ ಮುಂಭಾಗದ ತುದಿಯು ಮಣ್ಣಿನ ದಿಬ್ಬದ ಮೇಲೆ ಸಿಲುಕಿಕೊಂಡಿದ್ದರಿಂದ ಮುಂದೆ ಚಲಿಸಲು ಸಾಧ್ಯವಾಗಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಹ್ಯುಂಡೈ ಟ್ಯುಸಾನ್ ಕ್ರಾಸ್ಒವರ್ ಎಸ್‍‍ಯುವಿಯಾಗಿದ್ದು, 2004ರಿಂದ ಉತ್ಪಾದನೆಯಲ್ಲಿದೆ. ಈ ವಾಹನವನ್ನು ಪ್ರಪಂಚದ ಹಲವಾರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅಮೇರಿಕಾದಲ್ಲಿ ಟ್ಯುಸಾನ್ ವಾಹನವನ್ನು 2.0 ಅಥವಾ 2.4-ಲೀಟರ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಈ ಎಂಜಿನ್‍‍ಗಳು ಕ್ರಮವಾಗಿ 161 ಬಿಹೆಚ್‌ಪಿ ಪವರ್ ಹಾಗೂ 181 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ. 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮುಂಭಾಗದ ವ್ಹೀಲ್‍‍ಗಳನ್ನು ಚಲಾಯಿಸುತ್ತದೆ. ಹ್ಯುಂಡೈ ಆಲ್-ವೀಲ್-ಡ್ರೈವ್ ವ್ಯವಸ್ಥೆಯನ್ನು ಆಯ್ಕೆಯಾಗಿ ನೀಡುತ್ತದೆ ಆದರೆ ಈ ಬಾಡಿಗೆ ಕಾರು ಆ ಆಯ್ಕೆಯನ್ನು ಹೊಂದಿಲ್ಲ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಜೀಪ್ ಚೆರೊಕಿ ಎಕ್ಸ್ ಜೆ ಲಿಮಿಟೆಡ್ ವಾಹನದಲ್ಲಿರುವ 4.0 ಲೀಟರಿನ ಇನ್ ಲೈನ್ 6 ಸಿಲಿಂಡರ್ ಎಂಜಿನ್ 190 ಬಿ‍ಹೆಚ್‍‍ಪಿ ಪವರ್ ಹಾಗೂ 305 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಲೋ ರೆಷಿಯೊ 4 ವ್ಹೀಲ್ ಡ್ರೈವ್ ಹೊಂದಿದೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಜೀಪ್ ತನ್ನ ಕಾರ್ಯವನ್ನು ಸರಾಗವಾಗಿ ನಿರ್ವಹಿಸಿದರೂ, ಟ್ಯೂಸನ್ ವಾಹನವನ್ನು ಮೇಲೆತ್ತುವ ಕಾರ್ಯದಲ್ಲಿ ಸ್ವಲ್ಪ ತಿಣುಕಾಡಿದೆ. ಹಲವಾರು ಅಡೆತಡೆ ಹಾಗೂ ನೂರಾರು ಕಲ್ಲುಗಳ ಮಧ್ಯದಿಂದ ಕಡೆಗೂ ಟ್ಯುಸಾನ್ ಅನ್ನು ಹೊರತೆಗೆದಿದೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಟ್ಯುಸಾನ್ ಸಿಕ್ಕಿ ಹಾಕಿಕೊಂಡಿದ್ದು ತಮಾಷೆಯಾಗಿ ಕಂಡು ಬಂದರೂ, ಯಾವುದೇ ರೀತಿಯ ತೊಂದರೆಗಳನ್ನು ಹೊಂದದೇ ಹಾನಿಗೊಳಗಾಗದೇ ಹೊರ ಬಂದಿರುವುದನ್ನು ಕಾಣಬಹುದು. ಬಂಪರ್, ಸ್ಕಿಡ್ ಪ್ಲೇಟ್ ಹಾಗೂ ತಳಭಾಗವು ದೊಡ್ಡ ಬಂಡೆಗಳ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಹಾನಿಗೊಳಗಾಗಿವೆ.

ಆಫ್ ರೋಡ್‍‍ನಲ್ಲಿ ಸಿಲುಕಿದ್ದ ಹ್ಯುಂಡೈ ಟ್ಯುಸಾನ್ ರಕ್ಷಿಸಿದ ಜೀಪ್ ಚಿರೊಕಿ

ವಾಹನದಲ್ಲಿರುವ ಇಂಧನವಾಗಲಿ ಅಥವಾ ಆಯಿಲ್‍ ಆಗಲಿ ಸೋರಿಕೆಯಾಗಿಲ್ಲ. ಟಯರ್‍‍ಗಳೂ ಸಹ ಅದೇ ಸ್ಥಿತಿಯಲ್ಲಿದ್ದವು. ಎಂಜಿನ್ ಸಹ ಎಷ್ಟೇ ಅಡೆತಡೆಗಳಿದ್ದರೂ ತೊಂದರೆಗಳಾದರೂ ಸರಿಯಾದ ಸ್ಥಿತಿಯಲ್ಲಿಯೇ ಇತ್ತು.

Most Read Articles

Kannada
English summary
Hyundai Tucson Extreme Off-Road Video: SUV Gets Stuck & Rescued By Jeep Cherokee - Read in Kannada
Story first published: Tuesday, October 15, 2019, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X