ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಹ್ಯುಂಡೈ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ ವೆನ್ಯೂ ಎಸ್‍ಯುವಿ ಕಾರನ್ನ್ ಬಿಡುಗಡೆ ಮಾಡಲಾಗಿದ್ದು, ಸಂಸ್ಥೆಯಲ್ಲಿನ ಬಹುನಿರೀಕ್ಷಿತ ಕಾರು ಕೂಡಾ ಇದಾಗಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದಾಖಲೆಯ ಮಾರಾಟವನ್ನು ಕಾಣುತ್ತಿರುವ ಹ್ಯುಂಡೈ ವೆನ್ಯೂ ಕಾರಿನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಮೇ 21ರಂದು ಬಿಡುಗಡೆಯಾದ ಹ್ಯುಂಡೈ ವೆನ್ಯೂ ಎಸ್‍ಯುವಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿದ್ದು, ಇದೀಗ ಕೇವಲ ಎರಡೇ ತಿಂಗಳಿನಲ್ಲಿ ಸುಮಾರು 45000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ಹ್ಯುಂಡೈ ಸಂಸ್ಥೆಯು ಅಧಿಕೃತವಾಗಿ ಮಾಹಿತಿ ಹೊರಹಾಕಿದೆ. ಜೂನ್ 2019ತಿಂಗಳಿನಲ್ಲಿ 8871 ಯೂನಿಟ್ ಬ್ರೆಝಾ ಕಾರುಗಳು ಮಾರಾಟವಾದರೆ ಇನ್ನು 8763 ಯೂನಿಟ್ ವೆನ್ಯೂ ಕಾರುಗಳು ಮಾರಾಟವಾಗಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಇನ್ನು ವೆನ್ಯೂ ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 4 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ವೆನ್ಯೂ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.50,000 ದಿಂದ ಟಾಪ್ ಎಂಡ್ ಆವೃತ್ತಿಯು ರೂ.11,10,500 ಬೆಲೆ ಪಡೆದುಕೊಂಡಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(0) ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಖರೀದಿಗೆ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮತ್ತು 1.4-ಡೀಸೆಲ್ ಎಂಜಿನ್‌ಗಳು ಸಾಮಾನ್ಯ ಮಾದರಿಯ ಕಾರುಗಳಗಾಗಿ ಮಾರಾಟಗೊಳ್ಳಲಿದ್ದರೆ, ಕಡಿಮೆ ಎಂಜಿನ್ ಸಾಮಾರ್ಥ್ಯದ 1.0-ಲೀಟರ್ ಪೆಟ್ರೋಲ್ ಆವೃತ್ತಿಯು ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನೆಯೊಂದಿಗ ವೆನ್ಯೂ ಟಾಪ್ ಎಂಡ್ ಮಾದರಿಯಾಗಿ ಹೊರಹೊಮ್ಮಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಎಂಜಿನ್ ಪರ್ಫಾಮೆನ್ಸ್

ಐ20 ಕಾರಿನಿಂದ ಎರವಲು ಪಡೆಯಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.4-ಲೀಟರ್ ಡೀಸೆಲ್ ಮಾದರಿಯು ಕ್ರೆಟಾದಿಂದ ಎರವಲು ಪಡೆಯಲಾದ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 89-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹಾಗೆಯೇ ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 120-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ವೆನ್ಯೂ ತಾಂತ್ರಿಕ ವೈಶಿಷ್ಟ್ಯತೆ

ಹ್ಯುಂಡೈ ವೆನ್ಯೂ ಕಾರಿನಲ್ಲಿ 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಪ್ಯಾಕೇಜ್ ಮಾದರಿಯನ್ನು ಹೊಂದಿರುವ ಈ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆಯ ಜೊತೆಗೆ ಕಾರು ಪ್ರಯಾಣವನ್ನು ಸುಖವಾಗಿಸಲು ಹಲವು ಮಾಹಿತಿಗಳನ್ನು ನೀಡಲಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಬ್ಲೂ ಲಿಂಕ್ ಪ್ಯಾಕೇಜ್‌ನಲ್ಲಿ ಜಿಯೋ ಫೆನ್ಸ್, ಎರ್ಮಜೆನ್ಸಿ ಅಸಿಸ್ಟ್, ಕಾರ್ ಟ್ರಾಕಿಂಗ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸಿಗ್ನಿಚೆಕ್ ಕಾಸ್‌ಕ್ಲ್ಯಾಡಿಂಗ್ ಹೆಕ್ಸಾಗೊನಲ್ ಫ್ರಂಟ್ ಗ್ರಿಲ್, ಡ್ಯುಯಲ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಸಣ್ಣ ಎಳೆಯಂತಿರುವ ಲೈಟ್ ಸ್ಟ್ರಿಪ್, ಹೆಡ್‌ಲ್ಯಾಂಪ್ ಕ್ಲಸ್ಟರ್ ಕಳೆಭಾಗದಲ್ಲಿ ಹೊಂದಿಕೊಂಡಂತಿರುವ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು 16-ಇಂಚಿನ ಟೈರ್ ಸೌಲಭ್ಯವು ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಇದಲ್ಲದೇ ಹೊಸ ಕಾರಿನ ಒಳಾಂಗಣ ವಿನ್ಯಾಸದ ಬಗೆಗೆ ಹೇಳುವುದಾದರೇ, 5-ಸೀಟರ್ ಸೌಲಭ್ಯ ಹೊಂದಿರುವ ವೆನ್ಯೂ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದಿದ್ದು, ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್, 8-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್ಪೈ, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್ ಸುತ್ತಲೂ ಸಿಲ್ವರ್ ಎಕ್ಸೆಂಟ್, ಉತ್ತಮ ದರ್ಜೆಯ ಲೆದರ್ ಸೀಟುಗಳು, ವೈರ್‌ಲೆಸ್ ಚಾರ್ಚಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಕೇವಲ ಎರಡು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಹ್ಯುಂಡೈ ವೆನ್ಯೂ

ಖರೀದಿಗೆ ಲಭ್ಯವಿರುವ ಬಣ್ಣಗಳು

ವೆನ್ಯೂ ಕಾರು ಒಟ್ಟು 10 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, 7 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸಿಂಗಲ್ ಟೋನ್‌ನಲ್ಲಿ ಪೊಲಾರ್ ವೈಟ್, ಸಿಲ್ವರ್, ಫ್ಲೆರಿ ರೆಡ್, ಡೆನಿಮ್ ಬ್ಲ್ಯೂ, ಲಾವಾ ಆರೆಂಜ್, ಸ್ಟಾರ್ ಡಸ್ಟ್, ಡೀಪ್ ಫಾರೆಸ್ಟ್ ಮತ್ತು ಡ್ಯುಯಲ್ ಟೋನ್‌ನಲ್ಲಿ ಡೆನಿಮ್ ಬ್ಲ್ಯೂ ಜೊತೆ ಪೊಲಾರ್ ವೈಟ್ ರೂಫ್, ಪೊಲಾರ್ ವೈಟ್ ಜೊತೆ ಬ್ಲ್ಯಾಕ್ ರೂಫ್ ಮತ್ತು ಲಾವಾ ಆರೇಂಜ್ ಜೊತೆ ಬ್ಲ್ಯಾಕ್ ರೂಫ್ ನೀಡಲಾಗಿದೆ.

Most Read Articles

Kannada
English summary
Hyundai Venue Bags 45000 Bookings In Just 2 Months. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X