ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಎಸ್‍‍ಯು‍ವಿ ಅನ್ನು ಐದು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಹ್ಯುಂಡೈ ವೆನ್ಯೂ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍ನ ಮೊದಲ ಕಾಂಪ್ಯಾಕ್ಟ್ ಎಸ್‍‍ಯು‍ವಿಯಾಗಿದೆ. ಎಸ್‍‍ಯುವಿ ಬಿಡುಗಡೆಯಾದಾಗಿನಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವಾಗುತ್ತಿವೆ.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಭಾರತದಲ್ಲಿ ಹ್ಯುಂಡೈ ವೆನ್ಯೂ ಪ್ರಾರಂಭವಾದಾಗಿನಿಂದ 75,000 ಯು‍‍ನಿ‍ಟ್‍ಗಳಿಗಿಂತಲೂ ಅಧಿಕ ಬುಕ್ಕಿಂಗ್ ದಾಖಲಾಗಿದೆ. 5 ತಿಂಗಳಲ್ಲಿ ವೆನ್ಯೂ 45,000 ಕ್ಕೂ ಹೆಚ್ಚು ಯುನಿ‍‍ಟ್‍ಗಳು ಮಾರಾಟವಾಗಿದೆ ಎಂದು ಹ್ಯುಂಡೈ ಘೋಷಿಸಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂವು ಮೂರು ಪವರ್‍‍ಫುಲ್ ಎಂಜಿನ್‍ ಆಯ್ಕೆಗಳೊಂದಿಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಆಕರ್ಷಕ ಕಾಂಪ್ಯಾಕ್ಟ್ ಎಸ್‍‍ಯು‍ವಿಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಎಸ್‍‍ಯು‍ವಿಗಳಿಗೆ ಪೈಪೋಟಿ ನೀಡಲಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಬಿ‍ಡುಗಡಯಾದ ಬಳಿಕ ವೆನ್ಯೂ ಉತ್ತಮವಾಗಿ ಮಾರಾಟವಾಗುತ್ತಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಅತಿ ಹೆಚ್ಚು ಮಾರಾಟವಾದ ಎಸ್‍‍ಯು‍ವಿ ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಹ್ಯುಂಡೈ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿ‍ಎಚ್‍‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಟರ್ಬೊಚಾರ್ಜ್ಡ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 118 ಬಿಎಚ್‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.4 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 89 ಬಿಎಚ್‍ಪಿ ಪವರ್ ಮತ್ತು 220 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ವೆನ್ಯೂ ಕಾರು1.2 ಪೆಟ್ರೋಲ್ 5ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಿದ್ದರೆ, 1.0 ಟರ್ಬೊ ಪೆಟ್ರೋಲ್ ಮತ್ತು 1.4 ಡೀಸೆಲ್ ಯುನಿ‍ಟ್ 6 ಸ್ಪೀಡ್ ಮ್ಯಾನುವಲ್ ಅನ್ನು ಹೊಂದಿದೆ. ವೆನ್ಯೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ನೊಂದಿಗೆ 7 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಲಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಕಾರಿನ ಇಂಟಿರಿಯರ್‍‍ನಲ್ಲಿ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್, 8-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‍‍ಪ್ಲೇ ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್ ಸುತ್ತಲೂ ಸಿಲ್ವರ್ ಎಕ್ಸೆಂಟ್, ಉತ್ತಮ ದರ್ಜೆಯ ಲೆದರ್ ಸೀಟುಗಳು, ವೈರ್‌ಲೆಸ್ ಚಾರ್ಚಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ ಮತ್ತು ಸ್ಪೀಡ್ ಸೆನ್ಸಾರಿಂಗ್ ಅನ್ನು ಅಳವಡಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬುಕ್ಕಿಂಗ್‍‍ನಲ್ಲಿ ಹೊಸ ಮೈಲುಗಲ್ಲು ದಾಖಲಿಸಿದ ಹ್ಯುಂಡೈ ವೆನ್ಯೂ

ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಸ್‍‍ಯು‍ವಿಗಳಲ್ಲಿ ಹ್ಯುಂಡೈ ವೆನ್ಯೂ ಕೂಡ ಒಂದಾಗಿದೆ. ವೆನ್ಯೂ ಉತ್ತಮ ಕಾರ್ಯಕ್ಷಮತೆ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹಬ್ಬದ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ವಾಗಬಹುದು ಎಂದು ಕಂಪನಿ ನೀರಿಕ್ಷಿಸುತ್ತಿವೆ.

Most Read Articles

Kannada
English summary
Hyundai Venue Bookings Cross 75,000 Milestone: Registers Over 45,000 Sales Since Launch - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X